ಮುಂಬೈ: 185 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಹೊರಟಿದ್ದ ಆಕಾಶ ವಿಮಾನವನ್ನು ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು, ಅಷ್ಟೋತ್ತಿಗಾಗಲೇ ವಿಮಾನದಲ್ಲಿದ್ದ ಪ್ರಯಾಣಿಕರ ಮೈಯಲ್ಲಿ ಬೆವರು ಇಳಿಯುತ್ತಿತ್ತು.
ಕಾರಣ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದೆ ಪ್ರಯಾಣಿಕರು ಗಲಿಬಿಲಿಯಾಗಲು ಕಾರಣ ಎನ್ನಲಾಗಿದೆ.
ಶುಕ್ರವಾರ ಮಧ್ಯರಾತ್ರಿ 12.07ಕ್ಕೆ ಪುಣೆಯಿಂದ ದೆಹಲಿಗೆ ಹೊರಟಿದ್ದ ಆಕಾಶ ಏರ್ ವಿಮಾನ ಟೀಕೆ ಆಫ್ ಆದ ಕೆಲವು ಹೊತ್ತಿನ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕನೋರ್ವ ವಿಮಾನ ಸಿಬ್ಬಂದಿಗೆ ತನ್ನ ಬಳಿ ಇದ್ದ ಬ್ಯಾಗ್ ತೋರಿಸಿ ಇದರಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾನೆ ಪ್ರಯಾಣಿಕನ ಮಾತು ಕೇಳಿದ ವಿಮಾನ ಸಿಬ್ಬಂದಿಗಳು ಒಮ್ಮೆ ಗಾಬರಿಯಾಗಿದ್ದು ಕೂಡಲೇ ವಿಚಾರವನ್ನು ಕಂಟ್ರೋಲ್ ರೂಮ್ ಗೆ ತಿಳಿಸಿದ್ದಾರೆ ಅಲ್ಲದೆ ಅಧಿಕಾರಿಗಳು ವಿಮಾನವನ್ನು ಹತ್ತಿರದ ನಿಲ್ದಾಣವಾದ ಮುಂಬೈಯಲ್ಲಿ ಇಳಿಸುವಂತೆ ಹೇಳಿದ್ದಾರೆ ಅದರಂತೆ ಮಧ್ಯರಾತ್ರಿ 12.42 ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ಈ ವೇಳೆಗೆ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ವಾಹನ, ಬಾಂಬ್ ನಿಷ್ಕ್ರಿಯ ತಂಡ ಕಾರ್ಯಪ್ರವೃತ್ತರಾಗಿದ್ದು ವಿಮಾನ ಇಳಿಯುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕನ ಬ್ಯಾಗನ್ನು ಪರಿಶೀಲನೆ ನಡೆಸಿದ್ದಾರೆ ಆದರೆ ಪ್ರಯಾಣಿಕನ ಬ್ಯಾಗ್ ನಲ್ಲಿ ಸ್ಪೋಟಗೊಳ್ಳುವ ಯಾವುದೇ ವಸ್ತುಗಳು ಕಂಡುಬಂದಿಲ್ಲ ಇದರಿಂದ ಒಮ್ಮೆ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ವಿಮಾನದಲ್ಲಿ ಸುಖಾಸುಮ್ಮನೆ ಪ್ರಯಾಣಿಕರನ್ನು ಭೀತಿಗೊಳಿಸಿದ್ದಲ್ಲದೆ ವಿಮಾನವನ್ನು ತುರ್ತು ಮುಂಬೈ ನಲ್ಲಿ ಭೂ ಸ್ಪರ್ಶ ಮಾಡಿರುವ ನಿಟ್ಟಿನಲ್ಲಿ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ವ್ಯಕ್ತಿಯನ್ನು ತನಿಖೆ ನಡೆಸುವ ವೇಳೆ ಆತನ ಜೊತೆಗಿದ್ದ ಸಂಬಂಧಿಯ ಹೇಳಿಕೆಯಂತೆ ಬಾಂಬ್ ಇದೆ ಎಂದು ಹೇಳಿದ ವ್ಯಕ್ತಿ ಎದೆ ನೋವಿಗೆ ಮದ್ದು ತೆಗೆದುಕೊಂಡಿದ್ದು ಇದಾದ ಬಳಿಕ ಏನೇನೋ ಮಾತಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಯಾವುದು ಸರಿ ಯಾವುದು ತಪ್ಪು ಎಂದು ಅಧಿಕಾರಿಗಳ ತನಿಯಿಂದಲೇ ಗೊತ್ತಾಗಬೇಕಿದೆ.
ಇದನ್ನೂ ಓದಿ:KSRTC: ರಾಜ್ಯದ ರಸ್ತೆ ಸಾರಿಗೆ ನಿಗಮಗಳಿಗೆ 5675 ಬಸ್ ಖರೀದಿ: ಸಿಎಂ ಸಿದ್ದರಾಮಯ್ಯ ಸೂಚನೆ