Advertisement
ಚುನಾವಣಾ ಎಫೆಕ್ಟ್: ಮತದಾನದ ಜತೆಗೆ ವಾರಾಂತ್ಯದ ರಜಾ-ಮಜಾಕ್ಕೆ ತೆರಳುವ ಜನರಿಂದ ಮೆಜೆಸ್ಟಿಕ್, ಮೈಸೂರು ಸ್ಯಾಟಲೈಟ್, ನವರಂಗ್, ಯಶವಂತ ಪುರಗಳು ಭರ್ತಿ ಆಗಿದ್ದವು. ಆದರೆ, ಬಹುತೇಕ ಬಸ್‌ಗಳು ಚುನಾವಣಾ ಸೇವೆಗೆ ನಿಯೋಜನೆ ಗೊಂಡಿದ್ದರಿಂದ ಪ್ರಯಾಣಿಕರಿಗೆ ಬಸ್‌ಗಳ ಕೊರತೆ ಉಂಟಾಯಿತು. ಈ ಮಧ್ಯೆ ಮಳೆ ಅಬ್ಬರ ಕೂಡ ಇದ್ದುದ ರಿಂದ ಬರುವ ಬಸ್‌ಗಳೂ ತಡವಾಗಿ ಆಗಮಿಸಿದರು. ಪರಿಣಾಮ ಜನ ಪರದಾಡಿದರು.
ಹಿಡಿದು ಮಳೆಯಲ್ಲಿ ತೊಯ್ದುತೊ ಪ್ಪೆಯಾಗಿ ಬಸ್ ನಿಲ್ದಾಣಗಳ ಕಡೆ ಧಾವಿಸುತ್ತಿದ್ದರು. ಆದರೆ, ಅಲ್ಲಿ ನಿರಾಶೆಕಾದಿತ್ತು. ನಿಗದಿತ ಸಮಯಕ್ಕೆ ಬಸ್‌ಗಳು ಸಿಗದೆ ತಡರಾತ್ರಿವರೆಗೂ ಕಾದುಕುಳಿತ ದೃಶ್ಯ ಸಾಮಾನ್ಯವಾಗಿತ್ತು.
Related Articles
ಬಿಎಂಟಿಸಿ ಬಸ್‌ಗಳ ಬಳಕೆ: ಒಂದೆಡೆ ಚುನಾವಣೆ ಕಾರ್ಯಕ್ಕೆ ಬಸ್‌ಗಳನ್ನು ಕಳು ಹಿಸಲಾಗಿದೆ. ಮತ್ತೂಂದೆಡೆ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಏರಿಕೆ ಆಗಿದೆ. ಇದರಿಂದ ಬಸ್‌ಗಳ ಕೊರತೆ ಉಂಟಾಗಿದೆ. ಆದಾಗ್ಯೂ ಕಡಿಮೆ ಸಂಖ್ಯೆಯಲ್ಲಿ ನಿಯೋಜನೆಗೊಂಡ ಬಸ್‌ಗಳನ್ನು ನಗರಕ್ಕೆ ತರಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, 50ಕ್ಕೂ ಹೆಚ್ಚು ಬಿಎಂಟಿಸಿ
ಬಸ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Advertisement