ಕ್ಯಾನ್ ಬೆರಾ(ಆಸ್ಟ್ರೇಲಿಯಾ): ಖೈರ್ನ್ಸ್ ನಿಂದ ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದತ್ತ ಹಾರಾಟ ನಡೆಸುತ್ತಿದ್ದ ವಿಮಾನದೊಳಗೆ ಮಾರಾಮಾರಿ ನಡೆದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೆಜೆಪಿ ಕಟ್ಟಿ ಅಪರಾಧ ಮಾಡಿದ್ದೆ,ಆದರೆ ಶೆಟ್ಟರ ತರಹ…:B. S. Yediyurappa
ಆಕಾಶ ಮಾರ್ಗದಲ್ಲೇ ಮಹಿಳಾ ಪ್ರಯಾಣಿಕರ ನಡುವೆ ಮಾರಾಮಾರಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಮಾರಾಮಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಎಫ್ ಪಿ ವಕ್ತಾರರ ಪ್ರಕಾರ, ಈ ಘಟನೆ ಎ.20ರಂದು ಗುರುವಾರ ನಡೆದಿದೆ. ಕ್ಯಾಬಿನ್ ಸಿಬಂದಿಯ ಸುರಕ್ಷತಾ ಸೂಚನೆಯನ್ನು ಕಡೆಗಣಿಸಿ, ಮಹಿಳಾ ಪ್ರಯಾಣಿಕರೊಬ್ಬರು ಅಸಭ್ಯ ವರ್ತನೆ ತೋರಿದ್ದರಿಂದ ಮಾರಾಮಾರಿ ನಡೆದ ಪರಿಣಾಮ ವಿಮಾನ ಕ್ವೀನ್ಸ್ ಲ್ಯಾಂಡ್ ಗೆ ಹಿಂದಿರುಗಲು ಕಾರಣವಾಗಿದೆ ಎಂದು ತಿಳಿಸಿದೆ.
Related Articles
ಅಸಭ್ಯ ವರ್ತನೆ ತೋರಿದ ಮಹಿಳಾ ಪ್ರಯಾಣಿಕಳನ್ನು ಕ್ವೀನ್ಸ್ ಲ್ಯಾಂಡ್ ನಲ್ಲಿ ಇಳಿಸಲಾಗಿತ್ತು. ನಂತರ ವಿಮಾನ ಪುನಃ ಹಾರಾಟ ಪ್ರಾರಂಭಿಸಿದ ನಂತರ ಅದೇ ಗುಂಪಿನ ಇತರ ಮಹಿಳಾ ಪ್ರಯಾಣಿಕರ ನಡುವೆ ಮಾರಾಮಾರಿ ನಡೆದಿದ್ದು, ವಿಮಾನದ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಇದರಿಂದಾಗಿ ಗ್ರೂಟ್ ಐಲ್ಯಾಂಡ್ ನ ಅಲ್ಯಾಂಗುಲಾದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಮೂವರು ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.