ಯುಎಇ(ದುಬೈ): ಟೋಕಿಯೋ-ನರಿಟಾದಿಂದ ದುಬೈಗೆ ಆಗಮಿಸಿಸುತ್ತಿದ್ದ ಎಮಿರೇಟ್ಸ್ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಳಿಕ ಆಕಾಶ ಮಾರ್ಗಮಧ್ಯೆಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಜನವರಿ 19ರಂದು ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:War Hero: ಕೇವಲ 20 ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ದಾವರ್ ಗೆ ಪದ್ಮಶ್ರೀ ಪ್ರಶಸ್ತಿ ಗೌರವ
ಸುಮಾರು 12 ಗಂಟೆಗಳ ಪ್ರಯಾಣದ ಎಮಿರೇಟ್ಸ್ 319 ವಿಮಾನ ವೈದ್ಯಕೀಯ ತುರ್ತು ಸ್ಥಿತಿಯ ನಡುವೆಯೂ ನಿಗದಿತ ಸಮಯಕ್ಕೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿರುವುದಾಗಿ ಏರ್ ಲೈನ್ಸ್ ಸಿಎನ್ ಎನ್ ಗೆ ಖಚಿತಪಡಿಸಿರುವುದಾಗಿ ವರದಿ ವಿವರಿಸಿದೆ.
ಆಕಾಶ ಮಾರ್ಗ ಮಧ್ಯೆದಲ್ಲೇ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ಶಾಂತವಾಗಿ ನಿಭಾಯಿಸಲಾಗಿತ್ತು ಎಂದು ವರದಿ ಹೇಳಿದೆ. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಿರುವುದಾಗಿ ಎಮಿರೇಟ್ಸ್ ಸಿಎನ್ ಎನ್ ಗೆ ಮಾಹಿತಿ ನೀಡಿದೆ.
ತಾಯಿ, ಮಗು ಆರೋಗ್ಯವಂತರಾಗಿದ್ದು, ದುಬೈಗೆ ವಿಮಾನ ಬಂದಿಳಿದ ನಂತರ ಅವರು ಸ್ಥಳೀಯ ವೈದ್ಯರನ್ನು ಭೇಟಿ ಮಾಡಿದ್ದರು. ನಮ್ಮ ಪ್ರಯಾಣಿಕರು ಮತ್ತು ಸಿಬಂದಿಗಳ ಆರೋಗ್ಯ ಮತ್ತು ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಎಮಿರೇಟ್ಸ್ ಹೇಳಿದೆ.
ಗರ್ಭಿಣಿ ಪ್ರಯಾಣಿಕರಿಗೆ ಒಂದು ನಿರ್ದಿಷ್ಟ ಹಂತದಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ, ಆದರೆ ಕೆಲವೊಂದು ಸಂದರ್ಭದಲ್ಲಿ ವಿಮಾನದಲ್ಲಿ ಮಗುವಿಗೆ ಜನ್ಮ ನೀಡುವ ಘಟನೆಗಳು ಆಗಾಗ ನಡೆಯುತ್ತಿರುತ್ತದೆ.