Advertisement
ಆದರೆ ಈ ಯೋಗದಿಂದ ಸೆರೆಮನೆ ವಾಸ ಒದಗಿ ಬರುತ್ತದೆ ಎಂದು ಭಾರತೀಯ ಜೋತಿಷ್ಯ ಶಾಸ್ತ್ರದಲ್ಲಿ ಪ್ರಥಮ ಪಂಕ್ತಿಯ ಆಧಾರ ಗ್ರಂಥವಾದ ಸಾರಾವಳಿ ಗ್ರಂಥದ ಪ್ರಕಾರ ಕೂಡಾ ವಿವರಣೆಗಳಿವೆ. ಒಂದರ್ಥದಲ್ಲಿ ಕೇವಲ ಬಂಧಿಯನ್ನಾಗಿಸುವುದು ಮಾತ್ರ ಈ ಯೋಗದ ಶಕ್ತಿಯಲ್ಲ. ಈ ಯೋಗದಲ್ಲಿ ಸಾರ್ಥಕ ಅಂಶಗಳಿಗೆ ಧಕ್ಕೆ ಒದಗಿದಾಗ ಬಂಧನಯೋಗ ಒದಗುತ್ತದೆಯೇ ವಿನಾ ಸಾರ್ಥಕ ಅಂಶಗಳಿದ್ದಲ್ಲಿ ಇದೊಂದು ಶುಭ ಯೋಗವೂ ಹೌದು. ಹೀಗಾಗಿ ಸೂಕ್ಷ್ಮವಾಗಿ ಈ ಯೋಗವನ್ನು ವಿಶ್ಲೇಷಿಸುವುದು ಅವಶ್ಯಕವಾಗಿದೆ. ಪಾಶ ಎಂದರೆ ಉರುಳು ಎಂಬರ್ಥವೂ ಇದೆ. ಕನ್ನಡದ ಪ್ರಮುಖ ನಟರೊಬ್ಬರ ಸಂದರ್ಭದಲ್ಲಿ ಪಾಶಯೋಗ ಕೂಡಿ ಬಂದಿತ್ತು. ಎಲ್ಲಾ ಐಷಾರಾಮಗಳ ನಡುವೆ ಒಂದು ರೀತಿಯ ಬಂಧನವೇ ಆಗುವ ವಿಷಮ ಪರಿಸ್ಥಿತಿ ಕೂಡಿ ಬಂದಿದ್ದು ಈಗ ಇತಿಹಾಸ. ರಾಹು ದೋಷ ಒಂದು ಉಳಿದುಕೊಂಡಿದ್ದರಿಂದ ಐಷಾರಾಮಗಳ ನಡುವೆ ಬಂಧನವಲ್ಲದ ಬಂಧನವೊಂದು ಒದಗಿ ಬಂದು ಅವರು ನರಳಿದ್ದು ಈಗ ಇತಿಹಾಸ.
ಇವರ ಜಾತಕದಲ್ಲಿ ರಾಹು ಕೇತುಗಳನ್ನು ಬಿಟ್ಟು ಉಳುದ ಎಲ್ಲಾ ಏಳು ಗ್ರಹಗಳು ಕೇವಲ ಐದುರಾಶಿಗಳಲ್ಲಿ ಸಮಾವೇಶಗೊಂಡಿದ್ದವು. ಇವರ ಜನ್ಮಕುಂಡಲಿಯಲ್ಲಿ ಸುಖಸ್ಥಾನದ ಅಧಿಪತಿ ಶನೈಶ್ಚರನು ಲಾಭದಲ್ಲಿದ್ದು ಪ್ರಭಲನಾದರೂ ಅಲ್ಲಿ ಶನೈಶ್ಚರನ ಜೊತೆ ಭಾಗ್ಯಕ್ಕೆ ಅಧಿಪತಿಯಾದ ಚಂದ್ರನೂ ಇರುವುದು ಅಂತರಂಗದಲ್ಲಿ ಶಾಂತಿಯ ಧಾತುಗಳಿಗೆ ಶಕ್ತಿ ಇರಲು ಸಾಧ್ಯವೇ ಇರಲಿಲ್ಲ. ಇವರಿಗೆ ಸಾಡೆಸಾತಿನ ಕಾಟ ಇದ್ದಾಗ ತಂದೆಯಾದ ಜುಲ್ಫಿಕರ್ ಆಲಿ ಭುಟ್ಟೋರನ್ನು ಆಗಿನ ಮಿಲಿಟರಿ ಆಡಳಿತ ಗಲ್ಲಿಗೇರಿಸಿತ್ತು. ದುರ್ದೈವ ಎಂಬಂತೆ ಇದೇ ರೀತಿಯ ಸಾಡೇಸಾತಿ ಶನೈಶ್ಚರಸ್ವಾಮಿಯ ಕಾಟದಲ್ಲಿ ತಾವು ಹತ್ಯೆಗೊಳಗಾದರು. ಶನೈಶ್ಚರನಿಂದ ಬಾಧೆಗೊಳಗಾದ ಇವರ ಜಾತಕದ ಒಳ್ಳೆಯ ಗ್ರಹಗಳಾದ ಚಂದ್ರ ಮತ್ತು ಕುಜ ಒಳ್ಳೆಯ ಸ್ಥಳದಲ್ಲಿದ್ದರೂ ಉಪಯೋಗವಾಗಲಿಲ್ಲ. ಶನಿದಶಾ ಸಂದರ್ಭದಲ್ಲಿ ಎಲ್ಲಾ ರೀತಿಯ ಏಳು ಬೀಳುಗಳನ್ನು ಕಾಣುತ್ತಿರುವಾಗಲೇ, ಸ್ವದೇಶವನ್ನು ತೊರೆದು ಪರದೇಶಿಯಾಗುವ ಪರಿಸ್ಥಿತಿಯನ್ನು ಕೂಡಾ ಎದುರಿಸಿದ್ದರು. ಸುಖ, ನಲಿವು, ಸಂಪತ್ತು, ವೈಭವಗಳೆಲ್ಲವೂ ಇದ್ದರೂ ಆಳುಕಾಳುಗಳೆಲ್ಲಾ ಬೆರಳ ತುದಿಯಲ್ಲಿದ್ದರೂ ಬೆನಜೀರ್ ಅಂತರಂಗದಲ್ಲಿ ಸುಖದ ಬೆಳಕಿನ ಕಿರಣ ಬೆನಜೀರ್ ಎಂದು ಸಂಶಯ. ಶನಿಕಾಟ ಇದ್ದಾಗಲೆಲ್ಲಾ ಬೆನ್‌ರಿkುàರ್ ನರಳಿದ್ದಾರೆ. ಆಖೈರಿಗೆ ಜೀವ ತೆತ್ತಿದ್ದಾರೆ. ಇವರ ಪತಿ ಅನೇಕ ಹಗರಣಗಳ ಉರುಳು ಬಿಡಿಸಿಕೊಳ್ಳಲಾಗದೆ ಜೈಲುವಾಸ ಕೂಡಾ ಅನುಭವಿಸಿದರು. ಪಾಶಯೋಗವನ್ನು ಹೊಂದಿದ್ದ ಬೆನ್‌ರಿkುàರ್ ಒಂದೊಮ್ಮ ಚಂದ್ರ ಶನೈಶ್ಚರನನ್ನು ಒಂದೇ ಮನೆಯಲ್ಲಿ ಹೊಂದಿಲ್ಲದೆ ಇದ್ದಿದ್ದರೆ ಇಷ್ಟೆಲ್ಲಾ ಸಂಕಟ ಪಡುವ ಕ್ಲೇಶ ಮನೋಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ ಪ್ರಾರಬ್ಧ ಯಾರನ್ನೂ ಬಿಡದು ಎಂಬದಕ್ಕೆ ಇವರು ದೊಡ್ಡ ಉದಾಹರಣೆ. ಕಂಚಿಪೀಠದ ಶ್ರೀಜಯೇಂದ್ರ ಸರಸ್ವತಿಯವರು
ಇವರ ಜಾತಕದಲ್ಲಿ ಕೂಡಾ ಪಾಶಯೋಗ ಮೂಡಿ ಬಂದಿದ್ದು ಅನೇಕ ರೀತಿಯಲ್ಲಿ ಇದು ಜಯೇಂದ್ರ ಸರಸ್ವತಿಯವರನ್ನು ಕಾಡಿತು. ತಮಗೆ ಕ್ಲಿಷ್ಟವೆನಿಸಿದಾಗ ರಾಜಕೀಯ ಪಕ್ಷದ ಮುಖಂಡರು, ಆಳುವ ಸರ್ಕಾರದ ಪ್ರಮುಖರು ಇವರ ಸಲಹೆ ಸೂಚನೆಗಳನ್ನು ಪಡೆಯುವ ಉದಾಹರಣೆ ಹೇರಳವಾಗಿದ್ದವು. ಕಂಚಿಯನ್ನು ಆಧ್ಯಾತ್ಮಿಕ ಚಟುವಟಿಕೆಗಳ ಸಾರ್ಥಕ ಪೀಠವನ್ನಾಗಿ ನಿರೂಪಿಸಿದ ಹೆಚ್ಚುಗಾರಿಕೆ ಇವರ ವೈಶಿಷ್ಟéವಾಗಿತ್ತು. ಆದರೆ ಮತ್ತೆ ಈ ಪಾಶಯೋಗದ ವಿಚಾರದಲ್ಲಿ ಮಾಡಿಕೊಂಡ ಶನೈಶ್ಚರ ಚಂದ್ರ ಜೋಡಣೆಗಳು ಭಾಗ್ಯಾಧಿಪತಿ ಬುಧನ ಪಾಲಿಗೊದಗಿದ ಕೇತು ದೋಷಗಳು ಈ ಬುಧನ ದಶಾಕಾಲದಲ್ಲಿ ಕಾನೂನಿನ ತಾಂತ್ರಿಕ ಕಗ್ಗಂಟುಗಳು ಸುತ್ತಿ ಹಾಕಿಕೊಂಡು ಜೈಲಿಗೆ ಹೋಗುವ ಪರಿಸ್ಥಿತಿ ಬಂದು, ಈಗ ಜೈಲಿನಿಂದ ಹೊರ ಬಂದಿದ್ದರೂ ಖಾಲಿಯಾಗಬೇಕಾದ ರಿವಾಜುಗಳು ನಡೆಯುತ್ತಲೇ ಇವೆ. ಪಾಶಯೋಗ ಸಂಪನ್ನತೆಯನ್ನು ತಂದುಕೊಡುವುದರೆ ಜೊತೆಗೆ ಸೆರೆಮನೆ ವಾಸಕ್ಕೆ ತಳ್ಳುವ ದಾರುಣತೆಯನ್ನು ಕೂಡಾ ಪ್ರದರ್ಶಿಸಿಬಿಡ ಬಹುದೆಂಬುದಕ್ಕೆ ಇದೊಂದು ನಿದರ್ಶನ.
Related Articles
ದಲೈಲಾಮ ಅವರು ಟಿಬೆಟಿಯನ್ ಸಮುದಾಯದ ಅಭೂತಪೂರ್ವ ಪೂಜನೀಯ ಗುರುಗಳಾಗಿದ್ದಾರೆ. ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದವರು ಅಹಿಂಸೆಯ ಮೂಲಕವೇ ಹೋರಾಟ ಮುಖ್ಯವಾಗಬೇಕೆಂದು ಇವರ ಪ್ರತಿಪಾದನೆ ಲಾಗಾಯ್ತಿನಿಂದ ನಡೆದು ಬರುತ್ತಿದೆ. ನಿರಂಕುಶ ಕಮ್ಯುನಿಷ್ಟ್ ಆಡಳಿತ ಮಾವೋವಾದದ ಆವರಣಗಳೊಡನೆ ನಿಯಮ ವಿಧಿ ವಿಧಾನ ರಾಜಕೀಯ ಸಂಧಾನಗಳನ್ನೆಲ್ಲ ಅವಾಹನೆ ಮಾಡಿಕೊಂಡ ಚೈನಾ, ಟಿಬೆಟನ್ನು ಅದರ ಸ್ವಂತ ಸ್ಥಿತಿ ತನ್ನ ವಿಶೇಷದಿಂದ ಉಚ್ಛಾಟಿಸಿ ತನ್ನ ಭಾಗವನ್ನಾಗಿಸಿಕೊಂಡ 1959ನಿಂದಲೂ . ಈಗಿನವರೆಗೂ ದಲೈಲಾಮ ದೇಶಭ್ರಷ್ಟ. ಓಬೆಟ್ ತಾಯ್ನೆಲದ ಕಕ್ಕುಲತೆಯ ಬಿಂದುವಾದರೂ ಲಾಮಾ ಅಲ್ಲಿ ಕಾಲಿಟ್ಟಲ್ಲಿ ಚೈನಾ ಸರಕಾರ ಬಂಧಿಸುತ್ತದೆ. ಸೆರೆಮನೆಗೆ ತಳ್ಳುತ್ತದೆ. ರಾಜದ್ರೋಹದ ಆರೋಪ ಇದೆ. ಭಾರತ ದೇಶವನ್ನು ತನ್ನ ಎರಡನೇ ಮಾತೃಭೂಮಿ ಎಂದು ಅಂದರೂ ಲಕ್ಷಗಟ್ಟಲೆ ಅನುಯಾಯಿಗಳ ಸೇವೆ ಮನ್ನಣೆ ವಿಶೇಷ ಗೌರವ ಸಾûಾತ್ ಪರದೇಶದಲ್ಲೂ ಟಿಬೆಟಿನ ಅಧಿಕೃತ ನೇತಾರ ಎಂಬ ಸರ್ವಾಭಿಷ್ಟ ಸಂಪನ್ನತೆ ಇದ್ದರೂ ಸ್ವಂತ ನೆಲದಲ್ಲಿ ನೆಲೆ ಇರದೆ ಚೈನಾ ಪಾಲಿಗೆ ದುಃಸ್ವಪ್ನವಾದವರು ಲಾಮಾ. ಆದರೂ ಒಂದರ್ಥದ ಬಂಧಿ. ಇನ್ನೊಂದರ್ಥದಲ್ಲಿ ಎಲ್ಲಾ ಅನುಯಾಯಿಗಳಿಂದ ವಿವಿಧ ದೇಶಗಳಿಂದ ಸರ್ವತ್ರ ರಾಜತಾಂತ್ರಿಕ ಗೌರವಗಳಿಗೆ ಪಾತ್ರರಾದವರು. ಆದರೆ ವಿಧಿ ಅವರನ್ನು ಸರ್ವಶಕ್ತರನ್ನಾಗಿಸಿಯೂ ಅತಂತ್ರತೆಯಲ್ಲಿರಿಸಿದೆ. ಪಾಶಯೋಗದ ಪ್ರಭಾವ ಈ ಸರ್ವಶಕ್ತ ಪೂರ್ವಕ ನೆಲೆಗೆ ಹೊರಳಿಸುತ್ತಲೂ ಪರೋಕ್ಷವಾದ ಬಂಧನವನ್ನು ಹರಳುಗಟ್ಟಿಸುತ್ತದೆ.
ಜವಾಹರಲಾಲ್ ನೆಹರು, ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಜಯಲಲಿತಾ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಭಾರತದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್, ನಟ ಸಲ್ಮಾನ್‌ಖಾನ್, ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಹಾಲಿ ಕ್ರಿಕೆಟ್ ಕಾಮೆಂಟ್ರೇಟರ್ ನವಜೋತ್ ಸಿಂಗ್ ಸಿದ್ಧು, ನಟ ಸಂಜಯ್‌ದತ್ ಹೀಗೆ ಅನೇಕ ಉದಾಹರಣೆಗಳನ್ನು ಪಾಶಯೋಗದ ಸಂದರ್ಭದಲ್ಲಿ ನೀಡಬಹುದು. ಜೀವನದಲ್ಲಿ ಸಂಪನ್ನತೆ ಜೊತೆಗೆ ಬಂಧನವೇ ನೇರ ಎಂದಿಲ್ಲದಿದ್ದರೂ ಆಳುಕಾಳುಗಳ ನಡುವೆ ಬಂಧಿಯಾಗುವ ವೈಯುಕ್ತಿಕ ಕ್ಷಣಗಳನ್ನು ಕಳೆದುಕೊಳ್ಳುವ ಒಮ್ಮೊಮ್ಮೆ ನೇರ ಬಂಧನವನ್ನೇ ಆಹ್ವಾನಿಸಿಕೊಳ್ಳುವ ವೈರುಧ್ಯಗಳನ್ನು ಪಾಶಯೋಗ ನಿರ್ಮಿಸುತ್ತದೆ.
Advertisement
ಅನಂತ ಶಾಸ್ತ್ರಿ