Advertisement

ಏಷ್ಯನ್‌ ಕುಸ್ತಿ: ಸುಶೀಲ್‌ ಬದಲು ರಾಣಾಗೆ ಅವಕಾಶ

06:50 AM Feb 25, 2018 | Team Udayavani |

ನವದೆಹಲಿ: ಮೊಣಕಾಲಿನ ನೋವಿನಿಂದಾಗಿ ಅವಳಿ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌ ಕಿರ್ಗಿಸ್ಥಾನದ ಬಿಶ್‌ಕೇಕ್‌ನಲ್ಲಿ ನಡೆಯಲಿರುವ ಏಷ್ಯನ್‌  ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ. ಅವರ ಬದಲು 74 ಕೆ.ಜಿ. ವಿಭಾಗದ ಸ್ಪರ್ಧೆಗೆ ಪ್ರವೀಣ್‌ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ರಾಣಾ 74 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಸುಶೀಲ್‌ ಮತ್ತು ರಾಣ ಬೆಂಬಲಿಗರ ಮಧ್ಯೆ ಹೊಡೆದಾಟ ಸಂಭವಿಸಿ ಸುದ್ದಿಯಾಗಿತ್ತು. ಈ ಹೊಡಿಬಡಿ ಸಂಭವಿಸುವುಕ್ಕೂ ಮುನ್ನ ಏಷ್ಯನ್‌ ಚಾಂಪಿಯನ್‌ಶಿಪ್‌ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ ನಲ್ಲಿ ಸುಶೀಲ್‌, ರಾಣಾ ಅವರನ್ನು ಸೋಲಿಸಿ ಪ್ರವೇಶ ಗಿಟ್ಟಿಸಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಟ್ರಯಲ್ಸ್‌ನಲ್ಲಿ ಸೋತಿದ್ದ ರಾಣಾ ಅವರೇ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಸುಶೀಲ್‌ ಜಾಗವನ್ನು ತುಂಬಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next