ಬೈಲಹೊಂಗಲ: ತಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಸೋಮವಾರ ಬಿಜೆಪಿ ಬೆಂಬಲಿತ ಬುಡರಕಟ್ಟಿ ಮತಕೇತ್ರದ ಪಾರ್ವತಿ ಸಂಗಪ್ಪ ನರೇಂದ್ರ ಆಯ್ಕೆಯಾದರು.
ತಾ.ಪಂನ ಒಟ್ಟು 22 ಸದಸ್ಯರಲ್ಲಿ ಬಿಜೆಪಿ 12, ಪಕ್ಷೇತರ 2 , ಕಾಂಗ್ರೆಸ್ 8,ಜೆಡಿಎಸ್‌ನ 2 ಸದಸ್ಯರಿದ್ದರು. ಇದರಲ್ಲಿ ಓರ್ವ ಬಿಜೆಪಿ ಸದಸ್ಯ ವಿರೋಧಿ ಗುಂಪಿಗೆ ಸೇರಿದ್ದರಿಂದ ತಲಾ 11 ಸ್ಥಾನಗಳಿಂದ ಸಮಬಲವಾಗಿತ್ತು. ಚುನಾವಣೆ ಅಧಿಕಾರಿ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದಾಗ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಬುಡರಕಟ್ಟಿ ಮತಕೇತ್ರದ ಪಾರ್ವತಿ ಸಂಗಪ್ಪ ನರೇಂದ್ರ ಇವರಿಗೆ ಅದೃಷ್ಟ ಒಲಿಯಿತು.
ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ, ಮಾಜಿ ಶಾಸಕ ಡಾ| ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ಚುನಾವಣೆ ಜರುಗಿತು. ಅಧ್ಯಕ್ಷರಾಗಿ ಆಯ್ಕೆಯಾದ ಪಾರ್ವತಿ ಸಂಗಪ್ಪ ನರೇಂದ್ರ ಅವರನ್ನು ಮಾಜಿ ಶಾಸಕ ಡಾ| ವಿಶ್ವನಾಥ ಪಾಟೀಲ ಸತ್ಕರಿಸಿದರು.
ತಾ.ಪಂ ಉಪಾಧ್ಯಕ್ಷ ಮಲ್ಲನಾಯ್ಕ ಬಾಂವಿ, ಸದಸ್ಯರಾದ ಬಸನಗೌಡಾ ಪಾಟೀಲ, ಶ್ರೀಶೈಲ ಕಮತಗಿ, ಉಮೇಶಗೌಡ ಪಾಟೀಲ, ನೀಲವ್ವ ಫಕೀರನ್ನವರ, ಗಂಗವ್ವ ಸುಣಗಾರ, ಶೋಭಾ ಪಾಟೀಲ, ಅಮೃತಾ ಕಕ್ಕಯ್ಯನ್ನವರ, ಗೌರವ್ವ ಕುರಬರ, ಬಸಪ್ಪ ಹರಿಜನ, ಮುಖಂಡರಾದ ಶ್ರೀಕರ ಕುಲಕರ್ಣಿ, ಬಿ.ಎಫ್.ಕೊಳದೂರ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಸಿ.ಎಸ್. ಮೊಕಾಶಿ, ಬಸವರಾಜ ಪುಟ್ಟಿ, ಜಿ.ಪಂ ಸದಸ್ಯ ಈರಣ್ಣ ಕರಿಕಟ್ಟಿ, ಇತರರು ಇದ್ದರು.
ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ ಡಾ| ದೊಡ್ಡಪ್ಪ ಹೂಗಾರ, ತಾಪಂ ಇಒ ಸುಭಾಶ ಸಂಪಗಾಂವಿ ಕಾರ್ಯ ನಿರ್ವಹಿಸಿದರು.