Advertisement

ಪರುಶುರಾಮ ಥೀಂ ಪಾರ್ಕ್‌ ಪ್ರಕರಣ: ಸರಕಾರ ಕಳ್ಳರನ್ನು ಹಿಡಿಯುವ ಕೆಲಸಕ್ಕೆ ಇಳಿದಿದೆ: ತಂಗಡಗಿ

11:33 PM Feb 13, 2024 | Pranav MS |

ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೈಲೂರು ಉಮಿಕಲ್‌ ಬೆಟ್ಟದಲ್ಲಿ ಪರುಶುರಾಮ ಥೀಂ ಪಾರ್ಕ್‌ ನಿರ್ಮಾಣ ಕಾಮಗಾರಿಯ ಅವ್ಯವಹಾರದಲ್ಲಿ ಪಾಲ್ಗೊಂಡಿರುವ ನಿಜವಾದ ಕಳ್ಳರನ್ನು ಕಂಡು ಹಿಡಿ ಯುವ ಕೆಲಸಕ್ಕೆ ಸರಕಾರ ಹೊರಟಿದೆ. ಈಗಾಗಲೇ ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿಗೆ ವಹಿಸಲು ಮುಂದಾಗಿದ್ದಾರೆ. ದೇವರ ಹೆಸರು ಹೇಳಿಕೊಂಡು ಕಳ್ಳತನ ಮಾಡಿದವರ ವಿರುದ್ಧ ಸರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ವಿಧಾನಪರಿಷತ್‌ನಲ್ಲಿ ಹೇಳಿದರು.

Advertisement

ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದೇವರನ್ನು ಹೊತ್ತುಕೊಂಡವರಿಂದ ದುಡ್ಡು ಹೊಡೆಯುವ ಕೆಲಸ ಆಗಿದೆ. ಇದು ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ಕೆಲಸ. ಆದರೆ ಸ್ಥಳೀಯರು ಈ ಬಗ್ಗೆ ಸರಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ನಮ್ಮ ಸರಕಾರ ಅದನ್ನು ಹೊರಗೆಳೆಯುವ ಕೆಲಸಕ್ಕೆ ಮುಂದಾಗಿದೆ. ದೇವರ ಹೆಸರು ಹೇಳಿಕೊಂಡು ಹಣ ಮಾಡುವ ಕೆಲಸಕ್ಕಿಳಿದರವನ್ನು ಸರಕಾರ ಪತ್ತೆ ಹಚ್ಚಲಿದೆ ಎಂದರು.

ದೇವರು ಹೊತ್ತುಕೊಂಡವರಿಂದ ದುಡ್ಡು ಹೊಡೆಯುವ ಕೆಲಸ ನಡೆದಿದೆ ಎಂಬ ಸಚಿವರ ಮಾತು ಬಿಜೆಪಿಯ ಭಾರತಿ ಶೆಟ್ಟಿ, ಪ್ರತಾಪ್‌ ಸಿಂಹ ನಾಯಕ್‌, ಗೋವಿಂದರಾಜು ಅವರನ್ನು ಕೆರಳುವಂತೆ ಮಾಡಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಾರತಿ ಶೆಟ್ಟಿ, ಉಡುಪಿ, ಮಂಗಳೂರಿನ ಜನರು ದೇವರ ಆರಾಧಕರು. ನಾವೆಲ್ಲರೂ ದೇವರನ್ನು ಹೊತ್ತುಕೊಳ್ಳುತ್ತೇವೆ. ಆರಾಧನೆ ಮಾಡುತ್ತೇವೆ. ಆದರೆ ನೀವು ದೇವರು ಹೊತ್ತುಕೊಂಡವರಿಂದ ದುಡ್ಡು ಹೊಡೆಯುವ ಕೆಲಸ ನಡೆದಿದೆ ಎಂದು ಹೇಳಿದ ಮಾತು ಸರಿಯಿಲ್ಲ ಎಂದು ಸಚಿವ ಶಿವರಾಜ ತಂಗಡಿ ವಿರುದ್ಧ ಮುಗಿಬಿದ್ದರು. ಪರುಶುರಾಮನ ವಿಗ್ರಹ ಅವಶೇಷಗಳನ್ನು ತೆರವುಗೊಳಿಸಿ ಸಮುದ್ರಕ್ಕೆ ಹಾಕಿದ ಸಂಬಂಧ ತನಿಖೆ ನಡೆಸಿ ಎಂದು ಆಗ್ರಹಿಸಿದರು.

ಬಿಜೆಪಿಯ ಪ್ರತಾಪಸಿಂಹ ನಾಯಕ್‌ ಮಾತನಾಡಿ, ಸರರ ತನಿಖೆ ನಡೆಸದೇ ಆರೋಪ ಮಾಡುವುದು ಸರಿಯಲ್ಲ. ತನಿಖೆಯ ಅ‌ಂತರ ಸತ್ಯಾಂಶ ಹೊರಬರಲಿದೆ. ಸರರ ಯಾವ ರೀತಿಯ ತನಿಖೆಯಾದರೂ ನಡೆಸಲಿ ಎಂದರು.

ಮಧ್ಯಪ್ರವೇಶ ಮಾಡಿದ ಸಭಾಪತಿ ಸತ್ಯಾಸತ್ಯತೆ ಅರಿಯಲು ಸರರ ತನಿಖೆ ನಡೆಸಲಿ ಎಂದರು. ಕೆಲವು ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆಯುತ್ತೇನೆ. ಯಾರೇ ತಪ್ಪು ಮಾಡಲಿ ಕಠಿನಕ್ರಮ ನಿಶ್ಚಿತ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next