Advertisement

ಪಾರುಲ್‌ ಮತ್ತು ಪ್ಯಾರ್‌

12:30 AM Feb 10, 2019 | |

ಪ್ಯಾರ್ಗೆ ಆಗ್ಬಿಟೈತೆ ನಮ್ದುಕೆ ಪ್ಯಾರ್ಗೆ ಆಗ್ಬಿಟೈತೆ ಅಂತ ಹೆಜ್ಜೆ ಹಾಕುತ್ತ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಕಾಲಿಟ್ಟ ನಟಿ ಪಾರುಲ್‌ ಯಾದವ್‌ ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಪಡೆದುಕೊಂಡ ನಟಿ. ಕನ್ನಡದ ಜೊತೆ ಜೊತೆಯಲ್ಲೆ ತಮಿಳು, ತೆಲುಗು ಚಿತ್ರರಂಗದಲ್ಲೂ ನಟಿಯಾಗಿ ಒಂದು ರೌಂಡ್‌ ಹಾಕಿಬಂದಿರುವ ಪಾರುಲ್‌ ಈ ವರ್ಷ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಹೌದು, ರಮೇಶ್‌ ಅರವಿಂದ್‌ ನಿರ್ದೇಶನದ ಬಟರ್‌ ಫ್ಲೈ ಚಿತ್ರದಲ್ಲಿ ಪಾರುಲ್‌ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡದ ಜೊತೆ ತಮಿಳು, ತೆಲುಗು ಮತ್ತು ಮಲೆಯಾಳ ಭಾಷೆಯಲ್ಲೂ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪಾರುಲ್‌ ಯಾದವ್‌ ಸಹ ನಿರ್ಮಾಪಕಿಯಾಗಿ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. 

Advertisement

ಈ ಬಗ್ಗೆ ಮಾತನಾಡುವ ಪಾರುಲ್‌, ಚಿತ್ರರಂಗ ಎಂದರೆ ಆರ್ಟಿಸ್ಟ್‌ ಆಗಿ ಕೇವಲ ತೆರೆಯ ಮೇಲೆ ನಟಿಸುವುದಷ್ಟೇ ಅಲ್ಲ. ಅಲ್ಲಿ ತೆರೆಯ ಹಿಂದೆ ಹತ್ತಾರು ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆ ಎಲ್ಲ ಕೆಲಸಗಳು ಒಂದು ಕಡೆ ಸೇರಿದಾಗ ಒಂದು ಒಳ್ಳೆಯ ಸಿನೆಮಾವಾಗುತ್ತದೆ. ತೆರೆಯ ಹಿಂದೆ ಕೆಲಸ ಮಾಡುವುದು ಕೂಡ ಒಂದು ವಿಭಿನ್ನ ಅನುಭವ. ಇಲ್ಲಿಯವರೆಗೆ ಸಿನೆಮಾಗಳಲ್ಲಿ ತೆರೆಹಿಂದಿನ ಕೆಲಸಗಳನ್ನು ದೂರದಿಂದ ನೋಡುತ್ತಿದ್ದೆ. ಆದರೆ, ಬಟರ್‌ ಪ್ಲೆ„ ಸಿನೆಮಾದ ಮೂಲಕ ಆ ಕೆಲಸಗಳು ಹೇಗಿರುತ್ತವೆ ಎನ್ನುವುದು ನನ್ನ ಅನುಭವಕ್ಕೆ ಬರುತ್ತಿದೆ ಎನ್ನುತ್ತಾರೆ. 

ಸದ್ಯ ಪಾರುಲ್‌ ಯಾದವ್‌ ನಾಯಕಿಯಾಗಿ ಅಭಿನಯಿಸಿ, ಸಹ ನಿರ್ಮಾಪಕಿಯಾಗಿ ನಿರ್ಮಿಸಿರುವ ಬಟರ್‌ ಫ್ಲೈ ಚಿತ್ರ ತೆರೆಗೆ ಬರುವ ಸನ್ನಾಹದಲ್ಲಿದೆ. ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಬಟರ್‌ ಫ್ಲೈ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೇ ಬಟರ್‌ ಫ್ಲೈ ಚಿತ್ರದ ಟೀಸರ್‌, ಆಡಿಯೋ ಮತ್ತು ಲಿರಿಕಲ್‌ ವಿಡಿಯೋಗಳು ಬಿಡುಗಡೆಯಾಗಿದ್ದು, ಸೋಷಿಯಲ್‌ ಮೀಡಿಯಾಗಳಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮೊದಲ ನಿರ್ಮಾಣದ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ಪಾರುಲ್‌ ಯಾದವ್‌, “”ಇವತ್ತು ಸಿನೆಮಾವನ್ನು ಬಹಳ ಸುಲಭವಾಗಿ ಮಾಡಬಹುದು ಆದ್ರೆ ಅದನ್ನು ಪ್ರೇಕ್ಷಕರಿಗೆ ಒಪ್ಪಿಸುವುದು ತುಂಬ ಕಷ್ಟದ ಕೆಲಸ. ಪ್ರಪಂಚದ ಎಲ್ಲಾ ಭಾಷೆಯ ಸಿನಿಮಾಗಳು ಪ್ರೇಕ್ಷಕರಿಗೆ ಕಣ್ಣಳತೆಯಲ್ಲೇ ಸಿಗುವಾಗ ಅವರು ಪ್ರತಿ ಸಿನಿಮಾಗಳಲ್ಲೂ ಸಾಕಷ್ಟು ಹೊಸದನ್ನು ನಿರೀಕ್ಷಿಸುತ್ತಿರುತ್ತಾರೆ. ಪ್ರೇಕ್ಷಕರು ನಿರೀಕ್ಷಿಸುವುದಕ್ಕಿಂತಲೂ ಹೊಸದಾಗಿ ನಾವೇನಾದರೂ ಕೊಟ್ಟರೆ ಅದನ್ನು ಖಂಡಿತ ಇಷ್ಟಪಡುತ್ತಾರೆ. ಬಟರ್‌ ಫ್ಲೈ ಅಂಥದ್ದೇ ಒಂದು ಸಿನಿಮಾ. ಇದರಲ್ಲಿ ಇಂದಿನ ಜನರೇಷನ್‌ ಅಪ್ಪಟ ಭಾರತೀಯ ಹೆಣ್ಣು ಮಕ್ಕಳ ಕಥೆಯಿದೆ. ಅವರ ಭಾವನೆಗಳಿವೆ. ನಮ್ಮ ನಡುವೆಯೇ ನಡೆಯುತ್ತಿರುವ ಕಥೆಯೇನೋ ಎಂಬಂತೆ ಪ್ರತಿಯೊಬ್ಬರಿಗೂ ಅನಿಸುತ್ತದೆ. ಇಲ್ಲಿನ ನೇಟಿವಿಟಿ ಇದೆ. ಹಾಗಾಗಿ, ಇದು ಸೌಥ್‌ ಇಂಡಿ ಯಾದ ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ” 

ಇಲ್ಲಿಯವರೆಗೆ ನಟಿಯಾಗಿ ಗಳಿಸಿಕೊಂಡಿದ್ದು ಒಂದು ಥರದ ಅನುಭವವಾದರೆ, ಈಗ ನಿರ್ಮಾಪಕಿಯಾಗಿ ಗಳಿಸಿಕೊಂಡಿದ್ದು ಮತ್ತೂಂದು ಥರದ ಅನುಭವ. ಬಟರ್‌ ಫ್ಲೈ ನನಗಿಷ್ಟವಾದ ಸಬ್ಜೆಕ್ಟ್ ಸಿನಿಮಾ. ಅದಕ್ಕಾಗಿ ಇದನ್ನು ನಾನೇ ನಿರ್ಮಿಸುವ ಯೋಚನೆ ಮಾಡಿದೆ. ನನ್ನ ಈ ಪ್ರಯತ್ನಕ್ಕೆ ಒಳ್ಳೆಯ ಫ‌ಲಿತಾಂಶ ಸಿಗುವುದೆಂಬ ನಿರೀಕ್ಷೆ ಇದೆ. ಬಟರ್‌ ಫ್ಲೈ ಪ್ರೇಕ್ಷಕರಿಗೆ ಇಷ್ಟವಾದರೆ, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಹೊಸ ಪ್ರಯೋಗದ ಸಿನೆಮಾಗಳನ್ನು ಮಾಡಲು ನಾನು ರೆಡಿ ಎನ್ನುತ್ತಾರೆ ಪಾರುಲ್‌ ಯಾದವ್‌. 

Advertisement

Udayavani is now on Telegram. Click here to join our channel and stay updated with the latest news.

Next