Advertisement

ಪಂಜಾಬಿ ಆಲ್ಬಂನಲ್ಲಿ ಪಾರುಲ್‌ ಯಾದವ್‌

12:13 PM Jun 15, 2017 | Team Udayavani |

ಕಳೆದ ವಾರವಷ್ಟೇ ಪಾರುಲ್‌ ಯಾದವ್‌ ಅಭಿನಯದ “ಬಟರ್‌ಫ್ಲೈ’ ಚಿತ್ರದ ಮುಹೂರ್ತವಾಗಿದೆ. ಅಷ್ಟೇ ಅಲ್ಲ, ಒಂದೆರೆಡು ದಿನಗಳ ಚಿತ್ರೀಕರಣ ಸಹ ಆಗಿದೆ. ಮುಂದಿನ ತಿಂಗಳಿನಿಂದ ಸತತ ಚಿತ್ರೀಕರಣವಾಗಿದೆ.

Advertisement

ಈ ಮಧ್ಯೆ, ಪಾರುಲ್‌ ಅಭಿನಯದ ಪಂಜಾಬಿ ಆಲ್ಬಂವೊಂದು ಬಿಡುಗಡೆಯಾಗಿ ಹವಾ ಎಬ್ಬಿಸಿದೆ. ಪಾರುಲ್‌ಗ‌ೂ ಪಂಜಾಬಿ ವೀಡಿಯೋ ಆಲ್ಬಂಗೂ ಕನೆಕ್ಷನ್‌ ಹೇಗಾಯಿತು ಎಂದು ಆಶ್ಚರ್ಯವಾಗಬಹುದು. ಪಂಜಾಬ್‌ನ ಜನಪ್ರಿಯ ರ್ಯಾಪ್‌ ಗಾಯಕರಾದ ಗ್ರಿಪ್ಪಿ ಗ್ರೆವಾಲ್‌ ಮತ್ತು ಬೊಹೆಮಿಯಾ, “ಕಾರ್‌ ನಚ್‌ದಿ’ ಎಂಬ ಹೊಸ ಆಲ್ಬಂ ಹೊರತಂದಿದ್ದಾರೆ. ಈ ಆಲ್ಬಂನಲ್ಲಿ ಪಾರುಲ್‌ ಯಾದವ್‌ ಅವರನ್ನು ಸಹ ಕಾಣಬಹುದು. ಹಾಗಂತ ಈ ಹಾಡಿನಲ್ಲಿ ಪಾರುಲ್‌ ಸಿಕ್ಕಾಪಟ್ಟೆ ಕುಣಿಯಬಹುದು ಎಂದುಕೊಂಡಿದ್ದರೆ ನಿರಾಸೆ ಆಗಬಹುದು. ಏಕೆಂದರೆ, ಈ ಆಲ್ಬಂನಲ್ಲಿ ಪಾರುಲ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆಯೇ ಹೊರತು, ಡ್ಯಾನ್ಸ್‌ ಮಾಡಿಲ್ಲ. ಹಾಗಂತ ಪಾರುಲ್‌ ಅಭಿಮಾನಿಗಳು ಬೇಸರಗೊಳ್ಳುವ ಕಾರಣವಿಲ್ಲ. ಏಕೆಂದರೆ, ಈ ಆಲ್ಬಂನ ಇನೊಂದು ಹಾಡಿನಲ್ಲಿ ಪಾರುಲ್‌ ಕಾಣಿಸಿಕೊಳ್ಳಲಿದ್ದು, ಆ ಹಾಡಿನ ಚಿತ್ರೀಕರಣ ಮುಂದಿನ ತಿಂಗಳು ನಡೆಯಲಿದೆ.

ಈ ಆಲ್ಬಂ ಮಂಗಳವಾರ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಾಕಷ್ಟು ಹಿಟ್ಸ್‌ಗಳನ್ನು ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next