Advertisement

ಕಾರ್ಯಕರ್ತರ ಜನ ಸೇವೆಯೇ ಬಿಜೆಪಿ ಮೇಲೆ ಜನತೆಯ ವಿಶ‍್ವಾಸ ಬಲಗೊಳ್ಳಲು ಕಾರಣ :ಈಶ್ವರಪ್ಪ

04:23 PM Aug 12, 2021 | Team Udayavani |

ಚಿಕ್ಕೋಡಿ :  ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮ ಜೀವವನ್ನು ಪಣಕ್ಕಿಟ್ಟು ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರಿಂದಲೇ ಬಿಜೆಪಿ ಮೇಲೆ ಜನತೆಯ ವಿಶ್ವಾಸ ಬಲಗೊಳ್ಳಲು ಕಾರಣವಾಯಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

ಚಿಕ್ಕೋಡಿಯ ಕೇಶವ ಕಲಾ ಭವನದಲ್ಲಿ ಆರೋಗ್ಯ ಸ್ವಯಂ ಸೇವಕರ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಮೊದಲ ಹಾಗೂ ಎರಡನೇಯ ಅಲೆಯಲ್ಲಿ ಯಾರೂ ಮನೆಯಿಂದ ಹೊರಗೆ ಬರಲಾರದಂತಹ ಸಮಯದಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು, ಪದಾಧಿಕಾರಿಗಳು ತನು, ಮನ, ಧನದ ಮೂಲಕ ಕೋವಿಡ್ ಸೋಂಕಿಗೆ ತುತ್ತಾದ ರೋಗಿಗಳಿಗೆ ಹಾಗೂ ರೋಗಿಗಳ ಕುಟುಂಬದ ಸದಸ್ಯರಲ್ಲಿ ನೈತಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಲ್ಲದೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ಅನೇಕ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮಾವಿನ ಹಣ್ಣಿಗೆ ಗುರಿ ಇಡುತ್ತಿದ್ದ ರಿಕ್ಷಾ ಚಾಲಕನ ಪುತ್ರಿ ಇಂದು ಜಗಮೆಚ್ಚುವ ಆರ್ಚರ್

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕೊವೀಡ್ ಸಾಂಕ್ರಾಮಿಕ ರೋಗದ ಮೊದಲ ಹಾಗೂ ಎರಡನೇ ಅಲೆಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರಿಗೆ ಉತ್ತಮ ಆರೋಗ್ಯ ಹಾಗೂ ಇನ್ನಿತರ ಅವಶ್ಯಕ ಸೇವೆಗಳನ್ನು ಒದಗಿಸಿವೆ ಎಂದ ಅವರು ಮೂರನೇ ಅಲೆಯ ಮುನ್ಸೂಚನೆ ಕೂಡ ಕಂಡು ಬರುತ್ತಿದ್ದು, ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್  ಸದಸ್ಯ ಮಹಾಂತೇಶ ಕವಟಗಿಮಠ, ಪ್ರಧಾನಿ ಮೋದಿ‌ ಸರಕಾರ ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕೋವಿಡ್ ಸಾಂಕ್ರಾಮಿಕ‌ ರೋಗದ ಮೊದಲ ಹಾಗೂ ಎರಡನೇ ಅಲೆಯನ್ನು ಎದುರಿಸಿದೆ ಅಲ್ಲದೆ ರೋಗವನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಲಸಿಕೆಗಳನ್ನು ಗ್ರಾಮ ಮಟ್ಟದಲ್ಲೂ ತಲುಪಿಸುವ ಮೂಲಕ 50 ಕೋಟಿಗೂ ಅಧಿಕ  ಭಾರತೀಯರಿಗೆ ವ್ಯಾಕ್ಸಿನ್ ಉಚಿತವಾಗಿ ಒದಗಿಸಿರುವುದು ದೊಡ್ಡ ಸಾಧನೆ ಎಂದರು.

ಅಧ್ಯಕ್ಷತೆಯನ್ನು ಚಿಕ್ಮೋಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ ವಹಿಸಿದ್ದರು. ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತ ಗೌಡರ ಸಂಘಟನಾತ್ಮಕ ಜಿಲ್ಲಾ ಸಮಿತಿಯಿಂದ ಸಚಿವ ಈಶ್ವರಪ್ಪನವರನ್ನು ಸತ್ಕರಿಸಿದರು.

ಜಿಲ್ಲಾ ಸಹ ಪ್ರಭಾರಿ ಹಾಗೂ ರಾಜ್ಯ ಕಾರ್ಯದರ್ಶಿ ಉಜ್ವಲಾ  ಬಡವಣಾಚೆ, ನಿಪ್ಪಾಣಿ ನಗರ ಸಭಾ ಅಧ್ಯಕ್ಷ ಜಯವಂತ ಭಾತಲೆ, ಚಿಕ್ಕೋಡಿ ಪುರಸಭಾಧ್ಯಕ್ಷ ಪ್ರವೀಣ ಕಾಂಬಳೆ, ಮಾಜಿ ಸಂಸದ ಅಮರಸಿಂಹ ಪಾಟೀಲ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ, ಆರೋಗ್ಯ ಅಭಿಯಾನ ಜಿಲ್ಲಾ ಸಂಯೋಜಕ ಪ್ರಸಾದ ಪಚಂಡಿ, ದೀಪಕ ಪಾಟೀಲ ಹಾಗೂ ಚಿಕ್ಕೋಡಿ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಆರೋಗ್ಯ ಅಭಿಯಾನ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಇದೇ ವೇಳೆ ಡಾ.ರವಿ ಸಂಕ ಆರೋಗ್ಯ ಅಭಿಯಾನ ಕುರಿತು ಮಾತನಾಡಿದರು. ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶಾಂಭವಿ ಅಶ್ವಥಪುರ ವಂದೇ ಮಾತರಂ ಗೀತೆ ಹಾಡಿದರು. ಆರ್.ಎಸ್.ಎಸ್ ನ ನರಸಿಂಹ ಕುಲಕರ್ಣಿ ಮೂರನೇ ಅಲೆ ಮುಂಜಾಗೃತೆಯ ಕುರಿತಾಗಿ ಹಾಗೂ ಡಾ.ರಾಜೇಶ್ ನೇರ್ಲಿ ಸಂಘಟನಾತ್ಮಕ‌ ಗೋಷ್ಟಿಯಲ್ಲಿ ಮಾತನಾಡಿದರು. ಮಾಧ್ಯಮ ವಿಭಾಗದ ರಮೇಶ ಕುಮಾರ ಘಂಟಿ ನಿರೂಪಿಸಿ ದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ ಸ್ವಾಗತಿಸಿದರು, ನಿಂಗಪ್ಪಾ ಖೋಕಲೆ ವಂದಿಸಿದರು.

ಇದನ್ನೂ ಓದಿ : ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಪ್ರಕರಣ: ಏನಿದು ಬೇಗೂರು ಕೆರೆ ಶಿವನ ಮೂರ್ತಿ ವಿವಾದ?

Advertisement

Udayavani is now on Telegram. Click here to join our channel and stay updated with the latest news.

Next