Advertisement

ಗ್ರಾಪಂ ಚುನಾವಣೆಗೆ ಪಕ್ಷ ಸಂಘಟನೆ

03:30 PM Nov 26, 2020 | Suhan S |

ಚನ್ನರಾಯಪಟ್ಟಣ: ಮುಂಬರುವ ಗ್ರಾಮಪಂಚಾಯಿತಿ ಚುನಾವಣೆಗೆ ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲ ಸ್ವಾಮಿ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಜಿಲ್ಲಾ ಮಟ್ಟದ ಮುಖಂಡರ ಸಭೆಯಲ್ಲಿಪಾಲ್ಗೊಂಡು ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆ ಮೂರುವಾರದಲ್ಲಿ ಮಾಡುವಂತೆ ನ್ಯಾಯಾಲಯತಿಳಿಸಿದೆ. ಇದಕ್ಕಾಗಿ ಕಾಂಗ್ರೆಸ್‌ ಪಕ್ಷ ಸಕಲ ತಯಾರಿ ಮಾಡಿಕೊಂಡಿದ್ದೇವೆ ಎಂದರು.

ಕೋವಿಡ್ ವೇಳೆ ಸ್ವಗ್ರಾಮಕ್ಕೆ ಹಿಂತಿರುಗಿರುವವರೂ ಸೇರಿ ಹೊಸ ಮತದಾರರ ಪತ್ತೆ ಹಚ್ಚಿ ಜಿಲ್ಲಾಧಿಕಾರಿಗಳಿಗೆ ಹಾಗೂ ಪಕ್ಷದ ವರಿಷ್ಠರಿಗೆ ಪಟ್ಟಿ ನೀಡಲಾಗುತ್ತಿದೆ ಎಂದು ಹೇಳಿದರು.

ಮರಳಿ ಪಕ್ಷಕ್ಕೆ ಕರೆ ತರಲು ಯತ್ನ: ಮುಖಂಡರ ನಡುವೆ ಇರುವ ಸಣ್ಣ ಪುಟ್ಟ ವ್ಯತ್ಯಾಸವನ್ನು ಬಗೆ ಹರಿಸಲಾಗುವುದು, ಗ್ರಾಪಂ ಚುನಾವಣೆ ಪಕ್ಷದಿಂದ ಅಧಿಕೃತವಾಗಿ ಅಭ್ಯರ್ಥಿ ಎಂದು ಘೋಷಣೆ ಮಾಡದೆ ಇದ್ದರೂ ಪಕ್ಷವು 35 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಶ್ರಮಿಸಲಾಗುವುದು, ಕಾರ್ಯಕರ್ತರಲ್ಲಿನ ಗೊಂದಲ ನಿವಾರಣೆ ಮಾಡಲು ಮುಖಂಡರಿಗೆ ಜವಾಬ್ದಾರಿಯನ್ನು ವಹಿಸಲಾಗುವುದು, ಪಕ್ಷ ತೊರೆದು ಅನ್ಯ ಪಕ್ಷ ಸೇರಿದವರನ್ನು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಜೆಡಿಎಸ್‌ನಲ್ಲಿನ ಲೋಪ ಜನರಿಗೆ ತಿಳಿಸಿ: ಜಿಲ್ಲೆಯಲ್ಲಿ 70 ಮುಖಂಡರ ಸಭೆ ನಡೆಸಿ 7 ವಿಧಾನಸಭಾ ಕ್ಷೇತ್ರದಲ್ಲಿ ಸಭೆ ಮಾಡುವ ಮೂಲಕ ಪಕ್ಷ ಸಂಘಟನೆ, ರಾಜ್ಯದಲ್ಲಿ ಸರ್ಕಾರ ರಚನೆ ವೇಳೆ ಜೆಡಿಎಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ ಆಗಿರುವ ನಷ್ಟವನ್ನು ತುಂಬಲು ಎಲ್ಲಾ ಮುಖಂಡರು ಶ್ರಮಿಸಬೇಕು, ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷ ವಿರೋಧಿ ಸ್ಥಾನದಲ್ಲಿದೆ. ಈ ಪಕ್ಷದ ಲೋಪ ದೋಷಗಳನ್ನು ಜನರಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

Advertisement

ಅಗತ್ಯ ಅನುದಾನ: ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಎಂ.ರಾಮಚಂದ್ರ ಮಾತನಾಡಿ, ತಾಲೂಕಿನಲ್ಲಿ ಏತನೀರಾವರಿ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ಮಾಡಲಾಗಿತ್ತು, ಇನ್ನು ಮೈತ್ರಿ ಸರ್ಕಾರದ ವೇಳೆ ಡಿ.ಕೆ. ಶಿವಕುಮಾರ್‌ ನೀರಾವರಿ ಮಂತ್ರಿಯಾಗಿದ್ದು, ನುಗ್ಗೇಹಳ್ಳಿ, ಹಿರೀಸಾವೆ, ಜುಟ್ಟನಹಳ್ಳಿ ಏತನೀರಾವರಿ ಯೋಜನೆ ಮಾಡಲು ಅಗತ್ಯ ಇರುವಷ್ಟು ಅನುದಾನ ನೀಡಿದ್ದರು. ಆದರೆ, ಇಲ್ಲಿನ ಶಾಸಕ ಬಾಲಕೃಷ್ಣ ತಾನು ಮಾಡಿದ್ದು ಎಂದು ಜನರಿಗೆ ನಂಬಿಸುತ್ತಿದ್ದಾರೆ ಎಂದು ನುಡಿದರು.

ಗ್ರಾಪಂ ಗೆಲುವಿಗೆ ಸಹಕಾರ: ಶಾಸಕರ ವೈಫ‌ಲ್ಯವನ್ನು ಕ್ಷೇತ್ರದ ಮತದಾರರಿಗೆ ತಿಳಿಸುವುದರೊಂದಿಗೆ ದೇವೇಗೌಡರು, ರೇವಣ್ಣ ಹಾಗೂ ಕುಮಾರಸ್ವಾಮಿ ತಾಲೂಕಿಗೆ ನೀಡಿರುವಕೊಡುಗೆ ಶೂನ್ಯ. ಆದರೂ, ಇಲ್ಲಿನ ಜನಪ್ರತಿನಿಧಿಗಳು ತಮ್ಮ ಪಕ್ಷದ ಕೊಡುಗೆ ಅಪಾರ ಎಂದು ಕ್ಷೇತ್ರದ ಮತದಾರರ ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಬೂತ್‌ ಮಟ್ಟದ ಕಾರ್ಯಕರ್ತರ ಮೂಲಕ ಮನವರಿಗೆ ಮಾಡಲಾಗುವುದು. ಕಾಂಗ್ರೆಸ್‌ ಸರ್ಕಾರದ ಯೋಜನೆ ಬಗ್ಗೆ ತಿಳಿಸಿ ಗ್ರಾಮ ಪಂಚಾಯಿತಿ ಗೆಲುವಿಗೆ ಸಹಕಾರ ಮಾಡಬೇಕಾಗಿದೆ ಎಂದು.

ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯಲ್ಲಿನ ಲಂಚಬಾಕತನ, ಸರ್ಕಾರಿ ಅಧಿಕಾರಿಗಳು ಜನಪರವಾಗಿ ಕೆಲಸ ಮಾಡದೆ ಒಂದು ಪಕ್ಷದ ಪರವಾಗಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಸಮಗ್ರವಾಗಿ ಮಾಹಿತಿ ನೀಡಿ ಕಾಂಗ್ರೆಸ್‌ ಪಕ್ಷ ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯಸಭಾ ಮಾಜಿ ಸದಸ್ಯ ಜವರೇಗೌಡ, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ,ಕಾಂಗ್ರೆಸ್‌ಜಿಲ್ಲಾಧ್ಯಕ್ಷ ಮಂಜುನಾಥ್‌, ಯುವಕಾಂಗ್ರೆಸ್‌ ಅಧ್ಯಕ್ಷ ಯುವರಾಜ್‌, ಜಿಪಂ ಮಾಜಿಉಪಾಧ್ಯಕ್ಷ ಎಚ್‌.ಎಸ್‌.ವಿಜಯಕುಮಾರ್‌ ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಪಕ್ಷ ಮಾತ್ರ ಅಲ್ಲ, ಲೋಕಸಭೆ ಚುನಾವಣೆ ನಂತರ ಬಿಜೆಪಿ ಚಿಗುರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ 56 ಸಾವಿರ ಮತವನ್ನು ಬಿಜೆಪಿ ಪಡೆದಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಎಲ್ಲಾಕ್ಷೇತ್ರದಲ್ಲಿಯೂ ಬಿಜೆಪಿ, ತನ್ನ ಬೆಂಬಲಿತ ಅಭ್ಯರ್ಥಿಯನ್ನುಕಣಕ್ಕೆ ಇಳಿಸುವುದರಿಂದ ಮುಖಂಡರು ಶ್ರಮ ಅಗತ್ಯವಿದೆ. ಇಲ್ಲದೆ ಹೋದರೆ ಗ್ರಾಪಂ ಅನ್ಯರ ಪಾಲಾಗುವುದರಲ್ಲಿ ಸಂದೇಹವಿಲ್ಲ. ಎಂ.ಕೆ.ಮಂಜೇಗೌಡ, ಜಿಪಂ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next