Advertisement

ಪಕ್ಷವೋ, ಪಕ್ಷೇತರವೋ, ಗೊತ್ತಿಲ್ಲ; ಸ್ಪರ್ಧೆಯಂತೂ ಖಚಿತ

12:30 AM Mar 13, 2019 | Team Udayavani |

ಮಂಡ್ಯ: “ಚುನಾವಣೆಗೆ ನನ್ನ ಸ್ಪರ್ಧೆ ಖಚಿತ. ಯಾವ ಪಕ್ಷದಿಂದ ಸ್ಪರ್ಧೆ ಅಥವಾ ಪಕ್ಷೇತರನಾಗಿ ಸ್ಪರ್ಧೆಯೋ ಎನ್ನುವುದಷ್ಟೇ ತೀರ್ಮಾನವಾಗಬೇಕಿದೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಸುಮಲತಾ ಪ್ರತಿಕ್ರಿಯಿಸಿದರು.

Advertisement

ಜೆಡಿಎಸ್‌ ನಾಯಕರ ವಿವಾದಾತ್ಮಕ ಹೇಳಿಕೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ನಿಖೀಲ್‌ಕುಮಾರ್‌ ಸ್ಪರ್ಧೆ ವಿರೋಧಿಸಿ ಅಖೀಲ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಡಾ.ರವೀಂದ್ರ ಅವರು ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಸತ್ಯಾಗ್ರಹ ಸ್ಥಳಕ್ಕೆ ಸುಮಲತಾ ಭೇಟಿ ನೀಡಿ, ಬೆಂಬಲ ಸೂಚಿಸಿದರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, “ಮಾ.18ರಂದು ನನ್ನ ಅಧಿಕೃತ ತೀರ್ಮಾನ ಪ್ರಕಟಿಸುತ್ತೇನೆ. ಅಂಬರೀಶ್‌ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಿಗೆ ನೋವಾಗದ ರೀತಿಯಲ್ಲಿ ನನ್ನ ನಿರ್ಧಾರವಿರುತ್ತದೆ. ನನಗೆ ನಿಮ್ಮ ಬೆಂಬಲವಿರಬೇಕು. ಚುನಾವಣೆಗೆಸ್ಪರ್ಧಿಸುವಂತೆ ಜನರಿಂದ ತೀವ್ರ ಒತ್ತಡವಿದೆ. ಅವರ ಅಭಿಮಾನಕ್ಕೆ ಮಣಿಯಬೇಕಿರುವುದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ’ ಎಂದರು.

“ಚುನಾವಣಾ ನಿರ್ಧಾರದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಸಾಕಷ್ಟು ಊಹಾಪೋಹಗಳನ್ನು ಹರಡಲಾಗುತ್ತಿದೆ. ನನಗೂ ಸಾಕಷ್ಟು ಜನರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿದ್ದಾರೆ. ನನ್ನ ಬಗ್ಗೆ
ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next