Advertisement

ಬಿಜೆಪಿ-ಜೆಡಿಎಸ್‌ ಸರ್ಕಾರ ರಚನೆಯಲ್ಲಿ ಭಾಗೀದಾರಿ

09:28 PM Aug 24, 2019 | Team Udayavani |

ಬಿಜೆಪಿಯ ಹಿರಿಯ ನಾಯಕರಾಗಿದ್ದ ಅರುಣ್‌ ಜೇಟ್ಲಿ ಒಂದು ರೀತಿಯಲ್ಲಿ “ಟ್ರಬಲ್‌ ಶೂಟರ್‌’ ಎಂದು ಹೆಸರು ಪಡೆದಿದ್ದವರು. ಕರ್ನಾಟಕದಲ್ಲಿ ಜೆಡಿಎಸ್‌-ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೆಡಿಎಸ್‌ನ ಶಾಸಕರ ಒಂದು ಗುಂಪು ಬಿಜೆಪಿ ಜತೆ ಸೇರಿ ಸರ್ಕಾರ ರಚನೆಗೆ ಮುಂದಾದಾಗ ಪಕ್ಷಾಂತರ ನಿಷೇಧ ಕಾಯ್ದೆ ಸೇರಿದಂತೆ ಹಲವು ಕಾನೂನಾತ್ಮಕ ಸಮಸ್ಯೆಗಳು ಎದುರಾದಾಗ ದೆಹಲಿಯಲ್ಲೇ ಕುಳಿತು ನಿಭಾಯಿಸಿದವರು ಅರುಣ್‌ಜೇಟ್ಲಿ.

Advertisement

ಇದಾದ ನಂತರ ಜೆಡಿಎಸ್‌ ಒಪ್ಪಂದದಂತೆ ಬಿಜೆಪಿಯ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೆ 2008 ರಲ್ಲಿ ಚುನಾವಣೆ ಎದುರಾದಾಗ ಅರುಣ್‌ಜೇಟ್ಲಿ ರಾಜ್ಯದ ಉಸ್ತುವಾರಿಯಾಗಿದ್ದರು. ರಾಜ್ಯದಲ್ಲಿ ಬಿಜೆಪಿ 110 ಸ್ಥಾನ ಗಳಿಸಲು ಅನಂತಕುಮಾರ್‌, ಯಡಿಯೂರಪ್ಪ ಅವರ ಜತೆಗೂಡಿ ಕಾರ್ಯತಂತ್ರ ರೂಪಿಸಿದ್ದರು. 110 ಸ್ಥಾನ ಗಳಿಸಿದ ಬಿಜೆಪಿ ಸರ್ಕಾರ ರಚನೆಗೆ ಸಂಖ್ಯಾಬಲ ಕೊರತೆ ಉಂಟಾದಾಗ ಬೆಂಗಳೂರಿಗೆ ಬಂದು ಪಕ್ಷೇತರ ಶಾಸಕರ ಬೆಂಬಲ ದೊರೆತು ಸರ್ಕಾರ ರಚನೆಯಾಗುವಂತೆ ನೋಡಿಕೊಂಡಿದ್ದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚನೆ ಮಾಡಲು ಪಕ್ಷದ ರಾಜ್ಯ ಉಸ್ತುವಾರಿ ವಹಿಸಿಕೊಂಡು ನಿಭಾಯಿಸಿದ್ದರು. ಯಡಿಯೂರಪ್ಪ ಅವರ ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕರು ಬಂಡೆದ್ದು ಸರ್ಕಾರಕ್ಕೆ ಕಂಟಕ ಎದುರಾದಾಗಲೆಲ್ಲಾ ಅರುಣ್‌ಜೇಟ್ಲಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುತ್ತಿದ್ದರು. ಜನಾರ್ಧನರೆಡ್ಡಿ ಸೇರಿ ಹಲವು ಶಾಸಕರು ಬಂಡಾಯ ಎದ್ದಾಗ ದೆಹಲಿಗೆ ಕರೆಸಿಕೊಂಡು ಸಂಧಾನ ನಡೆಸಿ ಸಮಸ್ಯೆ ಇತ್ಯರ್ಥಪಡಿಸಿದ್ದರು. ಅದಾದ ನಂತರವೂ ಅರುಣ್‌ಜೇಟ್ಲಿ ಅವರು ಕರ್ನಾಟಕದ ರಾಜ್ಯದ ಬಗ್ಗೆ ನಿಕಟ ಸಂಬಂಧ ಹೊಂದಿದ್ದರು.

ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಗಮನಹರಿಸುತ್ತಿದ್ದರು. ಕರ್ನಾಟಕ ಬಿಜೆಪಿಗೆ ಸಂಬಂಧಿಸಿದಂತೆ ಏನಾದರೂ ಪ್ರಮುಖ ನಿರ್ಣಯ ಕೈಗೊಳ್ಳುವಾಗ ಕೇಂದ್ರದ ಬಿಜೆಪಿ ನಾಯಕರು ಅರುಣ್‌ ಜೇಟ್ಲಿ ಅವರ ಅಭಿಪ್ರಾಯ ಕೇಳುತ್ತಿದ್ದರು. ದಿವಂಗತ ಅನಂತಕುಮಾರ್‌ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಅರುಣ್‌ ಜೇಟ್ಲಿ ಅವರು ಸಂಕಷ್ಟದ ಸಮಯದಲ್ಲಿ ಪಕ್ಷದಲ್ಲಿ ಟ್ರಬಲ್‌ ಶೂಟರ್‌ ಆಗಿ ಹೊರಹೊಮ್ಮುತ್ತಿದ್ದರು. ಕೇಂದ್ರ ಹಣಕಾಸು ಸಚಿವರಾಗಿಯೂ ಕರ್ನಾ ಟಕ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ರಾಜ್ಯ ಬಿಜೆಪಿ ನಿಯೋಗ ತೆರಳಿದಾಗ ಪೂರಕವಾಗಿ ಸ್ಪಂದಿ ಸುತ್ತಿದ್ದರು.

ರಾಜ್ಯದ ನಾಯಕರು ಹೋದಾಗ, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ತಮಾಷೆ ಮಾಡಿ ತಾಕೀತು ಮಾಡುತ್ತಿದ್ದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ನಿವಾಸ ಹಾಗೂ ಕಳೆದ ಲೋಕಸಭೆ ಚುನಾವಣೆ ವೇಳೆ ನಡೆದ ಐಟಿ ದಾಳಿ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಎಂದಾಗ, ಕಟುವಾಗಿ ಟೀಕಿಸಿದ್ದರು. ಟ್ವೀಟ್‌ ಮೂಲಕ ಇಲಾಖೆಯ ಕ್ರಮ ಸಮರ್ಥಿಸಿಕೊಂಡಿದ್ದರು.

Advertisement

ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಪ್ರತಿಭಟನೆ ನಡೆಸಿದಾಗಲೂ, ಖಂಡಿಸಿ ಹೇಳಿಕೆ ನೀಡಿ ಆದಾಯ ತೆರಿಗೆ ದಾಳಿ ಸಂದರ್ಭ ದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರಿಗೆ ರಾಜ ಕಾರಣಿಗಳ ಜತೆ ನಂಟಿರುವ ಮಾಹಿತಿ ಇದೆ ಎಂದು ಹೇಳಿ ರಾಜಕೀಯ ಪ್ರೇರಿತ ಅಥವಾ ಸೇಡಿನ ಕ್ರಮ ಅಲ್ಲವೇ ಅಲ್ಲ ಎಂದು ಪ್ರತಿಪಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next