Advertisement
ಪಕ್ಷಗಳು ಟಿವಿ ಮಾಧ್ಯಮದತ್ತ ಹೆಚ್ಚು ಮನಸ್ಸು ಮಾಡುತ್ತಿದ್ದು, ಇದರ ಪರಿಣಾಮವಾಗಿ ದ್ವಿತೀಯ ಸ್ಥಾನದಲ್ಲಿದ್ದ ರೇಡಿಯೋ ಮಾಧ್ಯಮದ ಶೇ. 5ರಷ್ಟು ಪಾಲನ್ನು ಟಿವಿ ಮಾಧ್ಯಮ ಪಡೆದು ಶೇ. 55ಕ್ಕೆ ಹೆಚ್ಚಿಸಿಕೊಂಡಿದೆ. ರೇಡಿಯೋ ಶೇ. 40ಕ್ಕೆ ಇಳಿಕೆ ಕಂಡಿದೆ. ಉಳಿದ ಮಾಧ್ಯಮ ಕ್ಷೇತ್ರಗಳತ್ತ ಜಾಹೀರಾತುಗಳು ಈ ಬಾರಿ ಹರಿದು ಬಂದಿಲ್ಲ. 2014ರಲ್ಲಿ ಶೇ. 48ರಷ್ಟಿದ್ದ ಟಿವಿ ಜಾಹೀರಾತುಗಳು ಈ ಬಾರಿ ಶೇ. 55ಕ್ಕೆ ವಿಸ್ತರಿಸಿದೆ. ವಿಶೇಷ ಎಂದರೆ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಮೊತ್ತವನ್ನು ಜಾಹೀರಾತಿಗೆ ವ್ಯಯಿಸು ತ್ತಿದ್ದು, ರಾಷ್ಟ್ರೀಯ ಪಕ್ಷಗಳು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತಿಲ್ಲ.
ಈ ವರ್ಷ ಆಂಧ್ರ ಪ್ರದೇಶದಲ್ಲಿ ಅತೀ ಹೆಚ್ಚು ಎಂದರೆ ಶೇ.77 ಜಾಹೀರಾತುಗಳು ರಾಜಕೀಯ ಪಕ್ಷಗಳದ್ದಾಗಿದೆ. ಇದು ಟಿವಿ ಮಾಧ್ಯಮವೊಂದರ ಜಾಹೀರಾತು ಗಳಾಗಿವೆ. ತೆಲುಗು ದೇಶಂ ಪಾರ್ಟಿ (ಟಿಡಿಪಿ), ವೈಎಸ್‌ಆರ್ ಕಾಂಗ್ರೆಸ್ ಪೈಪೋಟಿಯಲ್ಲಿ ಜಾಹೀರಾತು ಮೊರೆ ಹೋಗಿವೆ. ಅದರಲ್ಲಿ ಟಿಡಿಪಿ ಪಾಲು ಶೇ.60ರಷ್ಟಿದ್ದು, ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಇದೆ. 3ನೇ ಸ್ಥಾನದಲ್ಲಿ ಶೇ.7ರಷ್ಟು ಹೊಂದಿರುವ ಕಾಂಗ್ರೆಸ್ ಹಾಗೂ 4ನೇ ಸ್ಥಾನದಲ್ಲಿ ಶೇ.4ರಷ್ಟು ಪಾಲು ಹೊಂದಿರುವ ಬಿಜೆಪಿಯಿದೆ. ಮುದ್ರಣ ಮಾಧ್ಯಮ ಹೇಗಿದೆ?
ಪತ್ರಿಕೆಗಳ ಜಾಹೀರಾತುಗಳ ಸ್ವಲ್ಪ ಪಾಲು ದೃಶ್ಯ ಮಾಧ್ಯಮಗಳಿಗೆ ವರ್ಗಾ ವಣೆಯಾದ ಕಾರಣ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇಲ್ಲಿ ಮಾತ್ರ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ ಇದೆ. ಪತ್ರಿಕೆಗಳಲ್ಲಿ ಕಾಂಗ್ರೆಸ್ ಶೇ.23ರಷ್ಟು ಜಾಹೀರಾತು ಪಾಲನ್ನು ಹೊಂದಿದ್ದರೆ, ಬಿಜೆಪಿ ಶೇ.21ರಷ್ಟು ಪಾಲನ್ನು ಹೊಂದಿದೆ.
Related Articles
ರೇಡಿಯೋ ಜಾಹೀರಾತುಗಳನ್ನು ಬಿಜೆಪಿ ಅತಿಯಾಗಿ ನೆಚ್ಚಿಕೊಂಡಿದೆ. ಶೇ.88ರಷ್ಟು ಜಾಹೀರಾತು ಅದರದ್ದಾದರೆ, ಕಾಂಗ್ರೆಸ್‌ನದ್ದು ಇದರಲ್ಲಿ ಶೇ.2ರಷ್ಟು ಮಾತ್ರ ಇದೆ. ಆಮ್‌ಆದ್ಮಿ ಪಕ್ಷ ಶೇ.4ರಷ್ಟು ಪ್ರಚಾರ ಪಾಲು ಹೊಂದಿದೆ.
Advertisement
ಪ್ಲ್ರಾನ್ ಚೇಂಜ್ ಸಾಂಪ್ರದಾಯಿಕ ಮಾಧ್ಯಮಗಳ ಬದಲಿಗೆ ಸಾಮಾಜಿಕ ಜಾಲತಾಣ, ಅಂತರ್ಜಾಲ ಮೂಲಕವೂ ಪಕ್ಷಗಳು ಜಾಹೀರಾತು ನೀಡುತ್ತಿವೆ. ಈ ಬಾರಿ ಬಿಜೆಪಿ ಈ ವಿಚಾರದಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಭಾರೀ ಮುನ್ನಡೆ ಕಾಯ್ದುಕೊಂಡಿದೆ.