Advertisement

ಬ್ರಹ್ಮಕಲಶೋತ್ಸವದಲ್ಲಿ ಭಾಗಿ ಪುಣ್ಯ ಕಾರ್ಯ: ರೈ

07:57 PM Apr 24, 2019 | Team Udayavani |

ಪುಂಜಾಲಕಟ್ಟೆ: ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿ ಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರೋಡಿ ಸುಮಾರು 3 ಕೋ. ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್‌ ನಿರ್ಮಾಣಗೊಳ್ಳುತ್ತಿದ್ದು, ಬ್ರಹ್ಮ ಕಲಶೋತ್ಸವ ಬಗ್ಗೆ ಪೂರ್ವಭಾವಿ ಸಮಾಲೋಚನ ಸಭೆ ಕ್ಷೇತ್ರದ ವಠಾರ ದಲ್ಲಿ ಮಂಗಳವಾರ ಜರಗಿತು.

Advertisement

ಮಾಜಿ ಸಚಿವ, ಸಮಿತಿ ಪುನರ್‌ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಮಾತನಾಡಿ, ಕಕ್ಯಪದವುನಲ್ಲಿ ಆದಿಕಾಲದಿಂದ ಆರಾ ಧಿಸಿಕೊಂಡು ಬರುತ್ತಿರುವ ಕೋಟಿ – ಚೆನ್ನಯರ ಗರೋಡಿಯನ್ನು ಸಂಪ್ರ ದಾಯಬದ್ಧವಾಗಿ ಪುನರ್‌ ನಿರ್ಮಾಣ ಗೊಳಿಸಲಾಗುತ್ತಿದ್ದು, ದೈವ – ದೇವರ ಅನುಗ್ರಹದಿಂದ ಮೇ 19ರಂದು ಬ್ರಹ್ಮಕಲಶೋತ್ಸವ ಸಾಂಗವಾಗಿ ನೆರ ವೇರಲಿದೆ. ಸರ್ವರೂ ಜವಾಬ್ದಾರಿ ವಹಿಸಿ ಭಾಗಿಗಳಾಗಬೇಕು. ಬ್ರಹ್ಮಕಲ ಶೋತ್ಸವದಲ್ಲಿ ಭಾಗಿ ಪುಣ್ಯದ ಕಾರ್ಯ ಎಂದು ತಿಳಿಸಿದರು.

ಉಪಾಧ್ಯಕ್ಷ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ಅವರು ಕಾಮಗಾರಿಗಳ ಲೆಕ್ಕಪತ್ರ ಮಂಡಿಸಿ, ಗರೋಡಿ ಪುನರ್‌ ನಿರ್ಮಾಣ ಕಾರ್ಯಕ್ಕೆ ಸುಮಾರು 3 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಈಗಾಗಲೇ ಶೇ. 60 ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 73.50 ಲಕ್ಷ ರೂ. ಸಂಗ್ರಹವಾಗಿದ್ದು, ಭಕ್ತರು ಸಹಕರಿಸಬೇಕಾಗಿ ವಿನಂತಿಸಿದರು.

ಉಪಾಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್‌ ಮಾತನಾಡಿ, ಗರೋಡಿಯ ಮೇಲ್ಛಾವಣಿಗೆ ಹಿತ್ತಾಳೆ ತಗಡಿನ ಹೊದಿಕೆ ಹಾಸುವಿಕೆಯಲ್ಲಿ ಭಕ್ತರ ಕೊಡುಗೆಗಾಗಿ ಒಂದು ಚದರ ಅಡಿ ಹಿತ್ತಾಳೆ ತಗಡಿನ ಮೊತ್ತವನ್ನು ಕೂಪನ್‌ ಪಡಕೊಂಡು ಭಾಗಿಗಳಾಗಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಕ್ಷೇತ್ರದ ತಾಂತ್ರಿಕ ತಜ್ಞ ಪ್ರಮಲ್‌ ಕುಮಾರ್‌ ಕಾರ್ಕಳ ಮಾತನಾಡಿ, ಇಲ್ಲಿನ ಗರೋಡಿ ಅತ್ಯಂತ ಕಾರಣಿಕ ಶಕ್ತಿಯ ಕ್ಷೇತ್ರ ವಾಗಿದ್ದು, ದೈವ, ದೇವರ ಅನುಗ್ರಹದಿಂದ ನಿರೀಕ್ಷೆಗೂ ಮಿಗಿಲಾದ ಸುಂದರ ಕ್ಷೇತ್ರವಾಗಿ ಮೂಡಿ ಬರಲಿದೆ ಎಂದರು.

Advertisement

ಸ್ವಾಗತ ಸಮಿತಿ
ಈ ಸಂದರ್ಭ ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಬಿ. ರಮಾನಾಥ ರೈ, ಸಂಚಾಲಕರಾಗಿ ಕಂಕನಾಡಿ ಗರೋಡಿ ಸಂಚಾಲಕ ಚಿತ್ತರಂಜನ್‌, ಅಧ್ಯಕ್ಷ ರಾಗಿ ಸೇಸಪ್ಪ ಕೋಟ್ಯಾನ್‌ ಪಚ್ಚಿನಡ್ಕ, ಕಾರ್ಯಾಧ್ಯಕ್ಷರಾಗಿ ಬಿ. ಪದ್ಮಶೇಖರ ಜೈನ್‌, ಮತ್ತಿತರ ಪದಾಧಿಕಾರಿಗಳನ್ನು ಸರ್ವಾನು ಮತದಿಂದ ಅನುಮೋದಿಸಲಾಯಿತು.

ಕ್ಷೇತ್ರದ ತಂತ್ರಿ ರಾಜೇಂದ್ರ ಅರ್ಮು ಡ್ತಾಯ, ಸೇಸಪ್ಪ ಕೋಟ್ಯಾನ್‌ ಪಚ್ಚಿನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ಪುನರ್‌ ನಿರ್ಮಾಣ ಸಮಿತಿ ಅಧ್ಯಕ್ಷ ಬಿ. ಪದ್ಮಶೇಖರ ಜೈನ್‌, ಪದಾಧಿಕಾರಿಗಳಾದ ರಾಜವೀರ ಜೈನ್‌ ಬಾರªಡ್ಡುಗುತ್ತು, ಬೇಬಿ ಕುಂದರ್‌, ಸಂಪತ್‌ ಕುಮಾರ್‌ ಶೆಟ್ಟಿ, ಸಂಜೀವ ಪೂಜಾರಿ ಗುರುಕೃಪಾ, ರವಿ ಪೂಜಾರಿ ಚಿಲಿಂಬಿ, ಜಯಂತ ನಡುಬೈಲು, ಗಣೇಶ್‌ ಪೂಜಾರಿ ಗುರು ಪುರ, ಜಯಶೆಟ್ಟಿ ಕಿಂಜಾಲು, ಪುರುಷೋ ತ್ತಮ ಪೂಜಾರಿ ಮಜಲು, ಬೇಬಿ ಕೃಷ್ಣಪ್ಪ, ಡಾ| ದಿನೇಶ್‌ ಬಂಗೇರ, ಎಲ್‌ಸಿಆರ್‌ ಕಾಲೇಜು ಪ್ರಾಂಶುಪಾಲ ಪ್ರವೀಣ್‌ ಎಂ., ದಯಾನಂದ ಶೆಟ್ಟಿ ಅಮೈ, ಶರತ್‌ ಕುಮಾರ್‌ ಕೇದಗೆ, ಸಂಜೀವ ಪೂಜಾರಿ ಕೇರ್ಯ, ಧರ್ಣಪ್ಪ ಪೂಜಾರಿ ಕೋಂಗುಜೆ, ಗುಣಶೇಖರ ಕೊಡಂಗೆ, ರವಿ ಕಕ್ಯಪದವು (ಸುಬ್ರಹ್ಮಣ್ಯ), ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್‌ ಬಿತ್ತ, ಸುಂದರ ಪೂಜಾರಿ ಬೋಳಂಗಡಿ, ಆನಂದ ಆಳ್ವ , ಚಂದ್ರಶೇಖರ ಕಂರ್ಬಡ್ಕ, ವಾಸುದೇವ ಮಯ್ಯ, ಗಣೇಶ್‌ ಕೆ., ರಾಮಯ್ಯ ಭಂಡಾರಿ, ಪವನ್‌ ಕಕ್ಯಪದವು, ತಿಲಕ್‌ ಪೂಜಾರಿ, ವೀರೇಂದ್ರ ಕುಮಾರ್‌ ಜೈನ್‌, ಬಾಬು ನಾಯ್ಕ, ಪರಮೇಶ್ವರ ನಾಯ್ಕ, ರಾಜೀವ ಕಕ್ಯಪದವು, ಹೇಮಂತ ಕುಮಾರ್‌, ನಾರಾಯಣ ಪೂಜಾರಿ ಬಿತ್ತ, ಗುರುಪ್ರಕಾಶ್‌ ಮತ್ತಿತರರಿದ್ದರು.

ಡೀಕಯ್ಯ ಬಂಗೇರ ಸ್ವಾಗತಿಸಿ, ಡಾ| ರಾಜಾರಾಮ ಕೆ.ಬಿ. ವಂದಿಸಿದರು, ಡೀಕಯ್ಯ ಕುಲಾಲ್‌ ಮತ್ತು ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ನಿರೂಪಿಸಿದರು.

ಭಕ್ತರ ಸಂಕಲ್ಪದಂತೆ ಪುನರ್‌ ನಿರ್ಮಾಣ
ಪುತ್ತೂರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಅವಿಭಜಿತ ದ.ಕ. ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಕನಾಡಿ ಗರೋಡಿ ಬಳಿಕ ಭವ್ಯವಾದ ಗರೋಡಿ ಇಲ್ಲಿ ಭಕ್ತರ ಸಂಕಲ್ಪದಂತೆ ಪುನರ್‌ ನಿರ್ಮಾಣಗೊಳ್ಳುತ್ತಿರುವುದು ಅಭಿನಂದನೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next