ನವದೆಹಲಿ: ಸ್ವತ್ಛ ಭಾರತವು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅ.1ರಂದು ಸ್ವತ್ಛತೆಗಾಗಿ ನಡೆಯುವ ಶ್ರಮದಾನದಲ್ಲಿ ದೇಶದ ಪ್ರತಿಯೊಬ್ಬರು ಪಾಲ್ಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
“ಅ.1ರಂದು ಬೆಳಗ್ಗೆ 10 ಗಂಟೆಗೆ ಸ್ವತ್ಛತಾ ಅಭಿಯಾನಕ್ಕಾಗಿ ನಾವೆಲ್ಲರೂ ಒಗ್ಗೂಡೋಣ. ಸ್ವತ್ಛ ಭಾರತವು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸ್ವತ್ಛ ಭವಿಷ್ಯವನ್ನು ರೂಪಿಸಲು ಈ ಉದಾತ್ತ ಪ್ರಯತ್ನಕ್ಕೆ ಕೈಜೋಡಿಸಿ’ ಎಂದು ಪ್ರಧಾನಿ ಮೋದಿ ಅವರು ಟ್ವೀಟ್(ಎಕ್ಸ್) ಮಾಡಿದ್ದಾರೆ.
ಮಹಾತ್ಮ ಗಾಂಧೀಜಿ ಅವರ ಜಯಂತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಸ್ವತ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ಸ್ವತ್ಛತೆಗಾಗಿ ಅಪಾರ ಒತ್ತು ನೀಡಿದ್ದರು.
ಇನ್ನೊಂದೆಡೆ, “ತ್ಯಾಜ್ಯ ಮುಕ್ತ ಭಾರತ’ ಘೋಷಣೆಯಡಿ ದೇಶಾದ್ಯಂತ ಸ್ವತ್ಛತೆಯೇ ಸೇವೆ(ಸ್ವತ್ಛತಾ ಹಿ ಸೇವಾ-ಎಸ್‌ಎಚ್‌ಎಸ್) ಅಭಿಯಾನದಡಿ ಸೆ.15ರಿಂದ ಸೆ.29ರವರೆಗೆ ದೇಶಾದ್ಯಂತ ಸ್ವತ್ಛತೆಯ ಪಾಕ್ಷಿಕವನ್ನು ಆಚರಿಸಲಾಯಿತು. ಕಳೆದ 14 ದಿನಗಳಲ್ಲಿ ದೇಶವ್ಯಾಪಿ ಸುಮಾರು 32 ಕೋಟಿ ಜನರು ಅಭಿಯಾನದಲ್ಲಿ ಭಾಗವಹಿಸಿದ್ದಾರೆ.
3.68 ಲಕ್ಷ ಸ್ವತ್ಛತಾ ಚಟುವಟಿಕೆಗಳಿಗೆ ಸ್ವಯಂಪ್ರೇರಿತವಾಗಿ ಕಾರ್ಮಿಕರು ಕೊಡುಗೆ ನೀಡಿ¨ªಾರೆ. ಈ ಪೈಕಿ ಸುಮಾರು 5,300 ಕಡಲ ತೀರಗಳನ್ನು ಸ್ವತ್ಛಗೊಳಿಸಲಾಗಿದೆ. 4,300 ನದಿ ದಂಡೆಗಳು ಮತ್ತು ಜಲಾಭಿಮುಖ ಪ್ರದೇಶಗಳನ್ನು ಪುನರುಜ್ಜೀವನಗೊಳಿಸಲಾಗಿದೆ. 10,700ಕ್ಕೂ ಅಧಿಕ ಪಾರಂಪರಿಕ ತ್ಯಾಜ್ಯ ತಾಣಗಳು, 2400 ಪ್ರವಾಸಿ ಮತ್ತು ಸಾಂಪ್ರದಾಯಿಕ ತಾಣಗಳನ್ನು ಸುಧಾರಿಸಲಾಗಿದೆ ಹಾಗೂ 93,000 ಸಾರ್ವಜನಿಕ ಸ್ಥಳಗಳನ್ನು ಸ್ವತ್ಛಗೊಳಿಸಲಾಗಿದೆ. ಇದರ ಜತೆಗೆ 12,000ಕ್ಕೂ ಅಧಿಕ ಜಲಮೂಲಗಳನ್ನು ಸ್ವತ್ಛಗೊಳಿಸಲಾಗಿದೆ. 60,000ಕ್ಕೂ ಅಧಿಕ ಸಾಂಸ್ಥಿಕ ಕಟ್ಟಡಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಮತ್ತು ಸುಮಾರು 47,000 ಸ್ಥಳಗಳನ್ನು ಸ್ವತ್ಛಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.