Advertisement

ಬ್ಯಾಂಕ್‌ ವಹಿವಾಟಿನಲ್ಲಿ ಪಾಲ್ಗೊಳ್ಳಿ

03:48 PM May 18, 2018 | Team Udayavani |

ಚಳ್ಳಕೆರೆ: ರಾಷ್ಟ್ರದಲ್ಲಿರುವ ಪ್ರತಿಯೊಂದು ಕುಟುಂಬ ಬ್ಯಾಂಕ್‌ನೊಂದಿಗೆ ವ್ಯವಹಾರವನ್ನು ಹೊಂದಬೇಕು. ಬ್ಯಾಂಕ್‌ನಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಎಸ್‌ಬಿಎಂ ಹಿರಿಯ ವ್ಯವಸ್ಥಾಪಕ ಎಂ. ಪ್ರಕಾಶ್‌ ಹೇಳಿದರು.

Advertisement

ಗುರುವಾರ ಬ್ಯಾಂಕ್‌ ಆವರಣದಲ್ಲಿ ನಡೆದ “ಬ್ಯಾಂಕ್‌ ಮಿತ್ರ’ ಯೋಜನೆಯ ಸೇವಾ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಬ್ಯಾಂಕ್‌ ನಿಯಮಾನುಸಾರ ಸಾಲ ಪಡೆದು ಕುಟುಂಬದ ಆರ್ಥಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ “ಬ್ಯಾಂಕ್‌ ಮಿತ್ರ’ ಎಂಬ ಸೇವೆಯನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಪರಿಚಯಿಸಲಾಗಿದೆ ಎಂದರು.

ದೇಶದಲ್ಲಿ ಪ್ರಸ್ತುತ ಕೇವಲ ಶೇ. 55ರಷ್ಟು ಜನರು ಮಾತ್ರ ಬ್ಯಾಂಕ್‌ ವ್ಯವಹಾರವನ್ನು ಬಲ್ಲವರಾಗಿದ್ಧಾರೆ. ಇನ್ನುಳಿದ ಶೇ. 45ರಷ್ಟು ಜನರು ಬ್ಯಾಂಕ್‌ ವ್ಯವಹಾರದ ವ್ಯಾಪ್ತಿಗೆ ಸೇರಿಲ್ಲ. ಹಲವಾರು ಕಾರಣಗಳಿಂದಾಗಿ ಬ್ಯಾಂಕ್‌ ವ್ಯವಹಾರಗಳಿಂದ ದೂರ ಉಳಿದಿದ್ದಾರೆ. 

ಇದು ನಮ್ಮ ಒಟ್ಟಾರೆ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರುವ ಸಂಭವವಿದೆ. ಆದ್ದರಿಂದ ಗ್ರಾಮಾಂತರ ಪ್ರದೇಶದ ಪ್ರತಿ ಮನೆಗೆ ಬ್ಯಾಂಕ್‌ನ ಸಿಬ್ಬಂದಿ ಭೇಟಿ ನೀಡಿ ಅವರಿಂದ ಮಾಹಿತಿ ಪಡೆದು ಬ್ಯಾಂಕ್‌ ಖಾತೆ ಪ್ರಾರಂಭಿಸುವಂತೆ ಮನವರಿಕೆ ಮಾಡಲಲಿದ್ದಾರೆ. ಅಲ್ಲದೆ ಬ್ಯಾಂಕ್‌ನಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಬ್ಯಾಂಕ್‌ ಸೇವೆ ದೊರೆಯುವಂತಾಗಲಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ನ ವಹಿವಾಟುಗಳಲ್ಲಿ ಗ್ರಾಮೀಣ ಜನರು ಹೆಚ್ಚು ಭಾಗವಹಿಸದೇ ಇರುವುದು ಕಂಡು ಬಂದಿದೆ. ಕೆಲವರು ಆರ್ಥಿಕವಾಗಿ ಸಬಲರಾಗಿದ್ದರೂ ಬ್ಯಾಂಕ್‌ ಸೇವೆಯನ್ನು ಬಯಸುವುದಿಲ್ಲ. ಆದರೆ ಬಡತನ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬ್ಯಾಂಕ್‌ನ ನೆರವು ಅತ್ಯಗತ್ಯ. ಕೆಲವರು ಬ್ಯಾಂಕ್‌ಗೆ ಆಗಮಿಸಿ ತಮ್ಮ ವಿಚಾರಗಳನ್ನು ತಿಳಿಸಲು ಹಿಂದೇಟು ಹಾಕುತ್ತಾರೆ. ಈ ನಿಟ್ಟಿನಲ್ಲಿ “ಬ್ಯಾಂಕ್‌ ಮಿತ್ರ’ ಯೋಜನೆ ಮೂಲಕ ನಮ್ಮ ಸಿಬ್ಬಂದಿ ಪ್ರತಿಯೊಬ್ಬರ ಮನೆಗೂ ಭೇಟಿ ನೀಡಿ ಅವರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು “ಬ್ಯಾಂಕ್‌ ಮಿತ್ರ’ ಜಿಲ್ಲಾ ಕೋ ಆರ್ಡಿನೇಟರ್‌ ಕೆ. ಪ್ರಭುದೇವ್‌ ತಿಳಿಸಿದರು. 

Advertisement

ಕಾರ್ಯಕ್ರಮದಲ್ಲಿ ಶ್ರೀಧರ ನಾಯಕ, ಸಿ.ಎಂ. ಪ್ರಕಾಶ್‌, ಭಾರತಿ, ಅನಿತಾ, ಮುರಳಿ, ಮಂಜುನಾಥ, ಫಾಲಾಕ್ಷ, “ಬ್ಯಾಂಕ್‌ ಮಿತ್ರ’ ತಾಲೂಕು ಕೋ ಆರ್ಡಿನೇಟರ್‌ ಮಹಲಿಂಗಪ್ಪ, ಅಶೋಕ್‌, ಜಯಣ್ಣ, ಹನುಮಂತಪ್ಪ, ವೆಂಕಟೇಶ್‌, ರೇಖಾ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next