Advertisement

ಅಂಬಾತನಯರಿಗೆ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ! 2019ರ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

12:44 PM Nov 08, 2020 | sudhir |

ಕೊಲ್ಲೂರು: ಯಕ್ಷಗಾನ ಪರಂಪರೆ ಉಳಿಸಿ ಬೆಳೆಸುವಲ್ಲಿ ಪ್ರತಿಯೋರ್ವರು ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸಬೇಕು. ದೇಗುಲಗಳಲ್ಲಿ ನಡೆಯುತ್ತಿರುವ ಹಲವು ಮೇಳಗಳ ಯಕ್ಷಗಾನ ಪ್ರದರ್ಶನಕ್ಕೆ ಇತಿಮಿತಿ ಇರಬೇಕು. ಆ ಮೂಲಕ ಹಣದ ವ್ಯಾಮೋಹಕ್ಕೆ ಯಕ್ಷಗಾನದ ಕಗ್ಗೊಲೆ ಆಗದಂತೆ ಜಾಗ್ರತೆ ವಹಿಸಬೇಕು ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ.

Advertisement

ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ನ. 7ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ 2019ರ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯವಿರುವ ಪುಸ್ತಕ ಬಿಡುಗಡೆಗೊಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು ಮಾತನಾಡಿ ಯಕ್ಷಗಾನ ಪರಂಪರೆ ಹಾಗೂ ಆಗುಹೋಗುಗಳ ಬಗ್ಗೆ ವಿವರಿಸಿದರಲ್ಲದೆ ಪ್ರಶಸ್ತಿ ಆಯ್ಕೆ ವೇಳೆ ಅಕಾಡೆಮಿ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬಾಬು ಬೆಕ್ಕೇರಿ, ಡಾ| ಅತುಲ್‌ ಕುಮಾರ್‌ ಶೆಟ್ಟಿ, ಬ್ಯಾರಿ ಅಕಾಡೆಮಿ ರಿಜಿಸ್ಟ್ರಾರ್‌, ಕೊಲ್ಲೂರು ಕ್ಷೇತ್ರ ಅರ್ಚಕ ನರಸಿಂಹ ಭಟ್‌ ಉಪಸ್ಥಿತರಿದ್ದರು.

ಅಂಬಾತನಯರಿಗೆ ಪಾರ್ತಿಸುಬ್ಬ ಪ್ರಶಸ್ತಿ
ಯಕ್ಷಗಾನದ ದಿಗ್ಗಜ ಖ್ಯಾತ ಸಾಹಿತಿ, ವಿಮರ್ಶಕ ಅಂಬಾತನಯ ಮುದ್ರಾಡಿ ಅವರಿಗೆ 2019ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ
ಯನ್ನು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಪ್ರಮಾಣ  ಪತ್ರ, ಸ್ಮರಣಿಕೆ ಮತ್ತು ಒಂದು ಲಕ್ಷ ರೂ. ನಗದನ್ನು ಒಳಗೊಂಡಿದೆ. ಗೌರವ ಪ್ರಶಸ್ತಿಯನ್ನು ರಾಮ  ಕೃಷ್ಣ ಗುಂಡಿಯವರಿಗೆ ನೀಡಲಾಯಿತು. ಈ ಪ್ರಶಸ್ತಿ  ಯು ಸ್ಮರಣಿಕೆ ಮತ್ತು 50 ಸಾವಿರ ರೂ. ನಗದನ್ನು ಒಳಗೊಂಡಿದೆ. ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ದಿವಂಗತ ನಲ್ಲೂರು ಜನಾರ್ದನ ಆಚಾರ್ಯ ಅವರ ಪರ ವಾಗಿ ಶಾರದಾ ಜನಾರ್ದನ್‌ ಆಚಾರ್ಯ ಸ್ವೀಕರಿಸಿದರು.

Advertisement

ಇದನ್ನೂ ಓದಿ:ಭಾರತದಲ್ಲಿ 2022ರವರೆಗೂ ಜನಸಾಮಾನ್ಯರಿಗೆ ಕೋವಿಡ್ ಲಸಿಕೆ ಸಿಗುವುದು ಅನುಮಾನ!

ಆರ್ಗೋಡು ರಾಮದಾಸ ಶೆಣೈ, ಮೊಹಮ್ಮದ್‌ ಘೋಸ್‌, ಮೂಳೂರು ರಾಮಚಂದ್ರ ಹೆಗ್ಗಡೆ, ಎಂ. ಎನ್‌. ಹೆಗ್ಗಡೆ ಹಲವಳ್ಳಿ, ಹಾಲಾಡಿ ಸರ್ವೋತ್ತಮ ಗಾಣಿಗ ಅವರಿಗೆ ಯಕ್ಷಸಿರಿ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು.

ಇದೇ ವೇಳೆ ಯಕ್ಷಗಾನದಲ್ಲಿ ವಿಶೇಷ ಸೇವೆ ಸಲ್ಲಿಸಿದ ಮಲ್ಪೆ ವಾಸುದೇವ ಸಾಮಗ, ನಲ್ಲೂರು ಜನಾರ್ದನ ಆಚಾರ್ಯ, ಶಿಮಂತೂರು ಲಕ್ಷ್ಮಣ ಕಾಂಚನ್‌ ಅವರಿಗೆ ನುಡಿನಮನ ಸಲ್ಲಿಸಲಾಯಿತು.

ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌. ಎಚ್‌. ಶಿವರುದ್ರಪ್ಪ ಸ್ವಾಗತಿಸಿ ಪ್ರಸ್ತಾವಿಸಿದರು. ಸಂಚಾಲಕ ಕೆ. ಎಂ. ಶೇಖರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next