Advertisement

ತಂದೆಯ ಅನಾರೋಗ್ಯದ ನಡುವೆ ಪಾರ್ಥಿವ್‌ ಐಪಿಎಲ್‌ ಆಟ

01:50 AM Apr 11, 2019 | sudhir |

ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಕ್ಕೆ ಉತ್ತಮವಾಗಿಲ್ಲ. ಇಲ್ಲಿಯವರೆಗೆ ಆಡಿರುವ ಆರೂ ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಒಳಗಾಗುತ್ತಿದೆ. ಆದರೆ ವಿಕೆಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ ಅವರು ವೈಯಕ್ತಿಕ ಸಮಸ್ಯೆಯ ನಡೆವೆಯೂ ಕ್ರಿಕೆಟ್‌ ಆಡುತ್ತಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

Advertisement

ಪಾರ್ಥಿವ್‌ ಪಟೇಲ್‌ ಅವರ ತಂದೆ ಅಜಯ್‌ ಪಟೇಲ್‌ ಮಿದುಳಿನ ರಕ್ತಸ್ರಾವದಿಂದಾಗಿ ತವರೂರಾದ ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಪಟೇಲ್‌ ವೈದ್ಯರಿಂದ ಕೆಟ್ಟ ಸುದ್ದಿ ಪಡೆಯುವ ಭಯದಲ್ಲೇ ದಿನವನ್ನು ಕಳೆಯುತ್ತಿದ್ದಾರೆ. ಐಪಿಎಲ್‌ ಆರಂಭಕ್ಕೂ ಮುನ್ನ ತಂದೆ ಆರೋಗ್ಯದ ವಿಷಯವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದ ಪಾರ್ಥಿವ್‌ ತಮ್ಮ ಫಾಲೋವರ್ ಗಳಿಗೆ ದೇವರಲ್ಲಿ ಪ್ರಾರ್ಥಿಸುವಂತೆ ಬೇಡಿಕೊಂಡಿದ್ದರು.

“ವೈದ್ಯರಿಂದ ಯಾವುದೇ ಕೆಟ್ಟ ಸುದ್ದಿ ಬಾರಬಾರದು ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ. ಆಟದ ವೇಳೆ ಯಾವುದೇ ವಿಷಯಗಳು ನನ್ನ ತಲೆಗೆ ಬರುವುದಿಲ್ಲ. ಆದರೆ ಪಂದ್ಯವಾದ ಬಳಿಕ ನನ್ನ ಹೃದಯ ಮನೆಯಲ್ಲಿರುತ್ತದೆ. ನನ್ನ ದಿನ ತಂದೆ ಆರೋಗ್ಯದಲ್ಲಿನ ಪ್ರಗತಿ, ವೈದ್ಯರಲ್ಲಿ ಮಾತುಕತೆಯ ಅನಂತರ ಆರಂಭವಾಗುತ್ತದೆ. ಕೆಲವೊಂದು ಬಾರಿ ಪ್ರಮುಖ ಹಾಗೂ ಕಠಿನ ನಿರ್ಧಾ ರಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಪಾರ್ಥಿವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next