Advertisement

ಪಾರ್ಥೇನಿಯಂ ನಿರ್ಮೂಲನೆ ಸಪ್ತಾಹ

03:01 PM Aug 19, 2020 | Suhan S |

ಮಾಗಡಿ: ಕೃಷಿ ವಿಜ್ಞಾನ ಕೇಂದ್ರದ ಆವರಣವನ್ನು ಪಾರ್ಥೇನಿಯಂ ಮುಕ್ತ ಆವರಣವನ್ನಾಗಿ ಮಾಡಬೇಕು ಎಂದು ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎಸ್‌.ಎಂ.ಸವಿತಾ ತಿಳಿಸಿದರು.

Advertisement

ಭಾರತ ಸರ್ಕಾರದ ಆದೇಶದಂತೆ ಆ.16 ರಿಂದ 22 ರವರೆಗೆ ಪಾರ್ಥೇನಿಯಂ ಕಳೆ ನಿರ್ಮೂಲನಾ ಸಪ್ತಾಹ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ಸಪ್ತಾಹದ ಅಂಗವಾಗಿ ಕೇಂದ್ರದಲ್ಲಿ ಪಾರ್ಥೇನಿಯಂ ಕಳೆ ನಿರ್ವಹಣೆ ಕುರಿತು ಮಾತನಾಡಿದರು. ಕೇಂದ್ರದ ವಿಜಾnನಿ ಡಾ.ಎಂ.ಎಸ್‌.ದಿನೇಶ್‌ ಮಾತನಾಡಿ, ಕಳೆ ಮಹತ್ವ ಹಾಗೂ ದುಷ್ಪರಿಣಾಗಳ ಬಗ್ಗೆ ವಿವರಿಸಿ ಸಮಗ್ರ ನಿರ್ವಹಣಾ ಕ್ರಮ ತಿಳಿಸಿದರು.

ಪಾರ್ಥೇನಿಯಂ ಒಂದು ಅತ್ಯಂತ ವಿನಾಶಕಾ ಕಳೆ. ಈ ಕಳೆ ಮಾನವ, ಪಶು ಹಾಗೂ ಪರಿಸರದ ಮೇಲೆ ಅತೀವ ಹಾನಿಕಾರಕ. ಈ ಕಳೆ 2 ಮೀಟರ್‌ ಗಳಷ್ಟು ಎತ್ತರ ಬೆಳೆಯುತ್ತದೆ. ಕಳೆ ಉತ್ಪಾದಿಸುವ ಬೀಜಗಳು ಸೂಕ್ಷ್ಮವಾಗಿದ್ದು ಗಾಳಿಯ ಮೂಲಕ ಇತರೆ ಪ್ರದೇಶಗಳಿಗೆ ಪಸರಿಸುತ್ತದೆ. ಈ ಕಳೆ ಒಂದು ಚದರ ಮೀಟರ್‌ಗೆ 1.54 ಲಕ್ಷ ಬೀಜೋತ್ಪನ್ನವಾಗುತ್ತದೆ. ಈ ಕಳೆಯಿಂದ ಇತರೆ ಸಸ್ಯ ರಾಶಿಗಳ ಬೆಳವಣಿಗೆ ಹಾಗೂ ಮಾನವನ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತದೆ. ಭಾರತ ದೇಶದಲ್ಲಿ ಈ ಕಳೆ 37 ದಶಲಕ್ಷ ಪ್ರದೇಶದಲ್ಲಿ ಆವರಿಸಿದೆ ಎಂದು ತಿಳಿಸಿದರು.

ಕೇಂದ್ರದ ಇನ್ನೋರ್ವ ವಿಜಾnನಿ ಡಿ.ಸಿ.ಪ್ರೀತು, ಈ ಕಳೆಯು ಪ್ರಥಮ ಹಂತದಲ್ಲಿರುವಾಗ ಕೈಯಿಂದ ಕಿತ್ತು ನಾಶಪಡಿಸುವುದು ಅಥವಾ ಕಾಂಪೋಸ್ಟ್‌ ತಯಾರಿಕೆಗೂ ಬಳಸಬಹುದು ಎಂದರು. ಕೆವಿಕೆ ಎಲ್ಲಾ ವಿಜಾnನಿಗಳು ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next