ಬೆಂಗಳೂರು: ಪಾರ್ಟ್ ಟೈಂ ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು 8.35 ಲಕ್ಷ ರೂ. ವಂಚಿಸಿದ್ದಾರೆ.
ವಾಜರಹಳ್ಳಿಯ ನಿವಾಸಿ ಲಿನಾ (43) ವಂಚನೆಗೊಳಗಾದವರು.
ಲೀನಾ ಮೊಬೈಲ್‌ಗೆ ಪಾರ್ಟ್ ಟೈಂ ಕೆಲಸ ಇರುವ ಬಗ್ಗೆ ಇತ್ತೀಚೆಗೆ ಅಪರಿಚಿತ ನಂಬರ್ ನಿಂದ ಸಂದೇಶ ಬಂದಿತ್ತು. ಇದಾದ ಬಳಿಕ ಅಪರಿಚಿತರು ಲಿಂಕ್ ವೊಂದನ್ನು ಕಳುಹಿಸಿದ್ದರು. ಅದನ್ನು ಕ್ಲಿಕ್ ಮಾಡಿದಾಗ ಅದರಲ್ಲಿರುವ ಆಯ್ಕೆಯಲ್ಲಿ ರಿವ್ಯೂ ನೀಡಿದರೆ 203 ರೂ. ಕಳುಹಿಸಿದಾಗಿ ಹೇಳಿದ್ದರು. ಇದಕ್ಕೆ ಲಿನಾ ಒಪ್ಪಿದಾಗಟೆಲಿಗ್ರಾಂ ಐಡಿವೊಂದಕ್ಕೆ ಸಂಪರ್ಕಿಸುವಂತೆ ಸೂಚಿಸಿದ್ದರು.
ಅದರಂತೆ ಟೆಲಿಗ್ರಾಂ ಐಡಿ ಸಂರ್ಕಿಸಿದಾಗ ಟೆಲಿಗ್ರಾಂ ಗ್ರೂಪ್‌ವೊಂದಕ್ಕೆ ಲಿನಾ ಅವರನ್ನು ಸೇರಿಸಿದ್ದರು. ನಂತರ ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿ ಸಿದ್ದರು. ಅಪರಿ ಚಿತರ ಮಾತಿನ ಮೋಡಿಗೆ ಮರುಳಾದ ಲಿನಾ, ಅವರು ಸೂಚಿಸಿದ ಬ್ಯಾಂಕ್ ಖಾತೆಗೆಹಂತವಾಗಿ 8.35 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ನಂತರ ಅಪರಿಚಿತರು ಸಂಪರ್ಕಕ್ಕೂ ಸಿಗದೇ, ಅಸಲು ಹಣವನ್ನೂ ಹಿಂತಿರುಗಿಸದೇ ವಂಚಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.