Advertisement

ಪಾರ್ಟ್‌ ಟೈಂ ಬ್ರಹ್ಮಚಾರಿಯ ಪ್ರಸಂಗ

12:12 PM Oct 11, 2017 | |

ಹೆಂಡ್ತಿ ನಾಲ್ಕು ದಿನ ತವರಿಗೆ ಹೋದಾಗ, ಗಂಡನ ಸ್ಥಿತಿ ಏನಾಗುತ್ತೆ? ಮರೆತು ಹೋದ ಅಡುಗೆಯನ್ನು ಮಾಡಲು ಹೋಗಿ, ಆಗುವಂಥ ಯಡವಟ್ಟುಗಳೇನು? ಆ ಸುಂದರ  ಸಂಕಷ್ಟದ ಅನುಭವ ಇಲ್ಲಿ ಕಥೆಯಾಗಿದೆ…

Advertisement

ಹೆಂಡತಿ ಊರಿಗೆ ಹೋದಾಗ, ಏಕಾಂಗಿ ಆಗುವ ಗಂಡನಿಗೆ ಕಾಡುವ ಬ್ರಹ್ಮಚರ್ಯ ಅವಸ್ಥೆ ಇದೆಯಲ್ಲ, ಅದು ಯಾವ ಶತ್ರುವಿಗೂ ಬೇಡ. ಮದ್ವೆಗೆ ಮುನ್ನ ಕಲಿತಿದ್ದ ಅಡುಗೆಗಳೆಲ್ಲ ಈ ಬ್ರಹ್ಮಚಾರಿಗೆ ಮರೆತೇ ಹೋಗಿರುತ್ತೆ. ಆಗ ಆತನ ಅಡುಗೆಮನೆಯ ಸಾಹಸಗಳು, ಡಿಸ್ನಿ ಸೃಷ್ಟಿಯ ಕಾಟೂìನುಗಳಿದ್ದಂತೆ!

ಅನಿವಾರ್ಯಕ್ಕೋ ಅಥವಾ ಪ್ರಯೋಗಾರ್ಥಕ್ಕೋ ಅಡುಗೆ ಮಾಡಿಕೊಳ್ಳುವ ಆತನ ಕಷ್ಟ ಕಂಡು, ಹೆಣ್ಣಿನ ತಂದೆ- ತಾಯಿ ತಮ್ಮ ಮಗಳನ್ನು ತವರಿಗೆ ಬರೋಕೆ ಬಿಡೋಲ್ಲ. ಈ ಪಾರ್ಟ್‌ಟೈಮ್‌ ಬ್ರಹ್ಮಚಾರಿಗಳು ಅಡುಗೆಯನ್ನು ಯದ್ವಾದತ್ವಾ ಮಾಡಿ, ಅದನ್ನು ಉಂಡು, ಆಸ್ಪತ್ರೆಯ ಬೆಡ್‌ ಮೇಲೆ ಮಲಗಿಬಿಟ್ರೆ ಅನ್ನೋ ಆತಂಕ ಅವರಿಗೆ. ಹಾಗೆ ಮಾಡಿದ ಅಡುಗೆಯನ್ನು ಬ್ರಹ್ಮಚಾರಿಗಳು ತಿನ್ತಾರೋ, ಬಿಡ್ತಾರೋ ಗೊತ್ತಿಲ್ಲ… ಆ ಮನೆಯಲ್ಲಿನ ಜಿರಳೆ, ಇರುವೆಗಳಿಗಂತೂ ಹಬ್ಬವೋ ಹಬ್ಬ! ಇನ್ನು ಬಚ್ಚಲು ಮನೆಯಲ್ಲಿ ಅವರು ಮಾಡುವ ಕೊಳಕಿನ ಚಿತ್ರಣ ಧಾರಾವಿ ಸ್ಲಮ್ಮಿನ ಪ್ರತಿರೂಪ. ಒಂದು ತಟ್ಟೆಯಲ್ಲಿ ಇಟ್ಟು, ಮರೆತುಹೋದ (ಮೂರು ದಿನದ್ದು) ಬೆಂಡೆಕಾಯಿ ಪಲ್ಯವನ್ನು (ನೈಜವಾಗಿ ಅದು ಅಲ್ಲ!) ವಾಸ್ತವದಲ್ಲಿ ಏನಿರಬಹುದು ಎನ್ನುವುದನ್ನು ಯಾವ ´ಲ್ಯಾಬ್‌ನವರೂ ಕಂಡುಹಿಡಿಯಲಾರರು! ಇನ್ನೊಂದರಲ್ಲಿ ಸೀದು ಕರಕಲಾದ ಕಮಟುಗಟ್ಟಿದ ಹಾಲಿನ ಅವಶೇಷಗಳನ್ನು ಹುಡುಕಲೂ ಸಾಧ್ಯವಾಗದ ಸ್ಥಿತಿಯ ಒಂದು ಪದಾರ್ಥ. ಇನ್ನು ಸಿಂಕಿನ ಕಥೆಯೋ ಕೇಳಲೇಬೇಡಿ!

ಇದೆಲ್ಲ ನನ್ನ ಒಬ್ಬ ಸ್ನೇಹಿತನ ಮನೆಯಲ್ಲಿ ಕಂಡುಬಂದ ದೃಶ್ಯಗಳು. ಹೆಂಡತಿಯನ್ನು ತವರಿಗೆ ಕಳುಹಿಸಿದ 10 ದಿನದಲ್ಲಿ ಮನೆಯ ಓನರ್‌ ನನಗೆ ´ಮಾಡಿದ. “ಸರ್‌, ನೀವು ಹೇಳಿದ್ರಿ ಅಂತ ಮನೆಯನ್ನು ಬಾಡಿಗೆಗೆ ಕೊಟ್ಟೆ. ಮನೆ ಮಹಾಲಕ್ಷ್ಮೀ ಇದ್ದ 2 ವರ್ಷವೂ ಆಹಾ, ಪೂಜೆಯ ಸುಗಂಧದಿಂದ ಆಕೆ ಮಾಡುತ್ತಿದ್ದ ಕಾಫಿಯ ಘಮದವರೆಗೂ ಎಲ್ಲವನ್ನೂ ಆಸ್ವಾದಿಸಿದೆವು. ಆವಮ್ಮ ಹೋಗಿ 5 ದಿನ ಆಗಿರ್ಲಿಲ್ಲ… ನಮ್ಮ ಮನೆಯ ಬಚ್ಚಲು ಪೈಪ್‌ ಕಟ್ಕೊಳು¤… ಪ್ಲಂಬರ್‌ನ ಕರೆಸಿ ಕ್ಲೀನ್‌ ಮಾಡಿಸಿದೆ. ಇನ್ನೂ 5 ದಿನ ಆಗಿಲ್ಲ ಈಗ ಮತ್ತೆ ಪೈಪ್‌ ನನ್‌ ಕೈಯಲ್ಲಾಗೋಲ್ಲ ಅಂತ ಕೈ ಎತ್ತಿದೆ. ಪ್ಲಂಬರ್‌ನವನನ್ನು ಕೇಳಿದ್ದಕ್ಕೆ, ಅಯ್ಯೋ, ತರಕಾರಿ, ಮಿಕ್ಕ ಪಲ್ಯ, ಹಳಸಲು ಅನ್ನ- ಎಲ್ಲವೂ ಪೈಪನ್ನು ಜಾಮ… ಮಾಡಿ, ಸಿಲ್ಕ್ ಬೋರ್ಡ್‌ ಜಂಕ್ಷನ್ನೂ ನಾಚೊಳ್ಳೋ ಹಂತಕ್ಕೆ ತಂದಿಟ್ಟಿದ್ದಾರೆ ಆ ಯಪ್ಪಾ ಅಂದ. ಒಂದೋ ಅವರಿಗೆ ಹೋಟೆಲ… ಊಟ ತರಿಸಿಕೊಳ್ಳೋಕೆ ಹೇಳಿ, ಇಲ್ಲಾ… ಯಾರಾದರೂ ಪಾರ್ಟ್‌ಟೈಮ… ಅಡುಗೆಯವಳನ್ನ ಗೊತ್ತು ಮಾಡ್ಕೊಳ್ಳೋಕೆ ಹೇಳಿ. ಎರಡೂ ಆಗೋಲ್ಲ ಅಂದ್ರೆ, ಮನೆ ಖಾಲಿ ಮಾಡಲು ಹೇಳಿ’ ಅಂತ  ಕುಕ್ಕಿದ್ರು. 

ಸಂಜೆ ಸಿಕ್ಕ ನಮ್ಮ ಪಾರ್ಟ್‌ಟೈಮ್‌ ಬ್ರಹ್ಮಚಾರಿಯನ್ನು ಕೇಳಿದ್ದಕ್ಕೆ, “ಲೋ, ಅಡುಗೆ ಹೇಗಾದ್ರೂ ಮಾಡ್ಕೊàತೀನಿ. ಆದರೆ, ಮುಸುರೆ ತೊಳೆಯೋದು ನನ್ನ ಕೈಲಾಗೋಲ್ಲ ಮಾರಾಯ’ ಅಂದ. “ನಮ್ಮ ಮನೆಗೆ ಬರ್ತಾಳಲ್ಲ, ಆ ಕೆಲ್ಸದವಳಿಗೆ ಪಾರ್ಟ್‌ಟೈಮ… ಕೆಲ್ಸ ಹೇಳ್ಳೋ, ಮಾಡ್ತಾಳೆ’ ಅಂದೆ. “ಯಪ್ಪಾ… ಬ್ಯಾಡಪ್ಪಾ… ಮನೆದೇವ್ರು ಚಿತ್ರದಲ್ಲಿ ರವಿಚಂದ್ರನ್‌ ಯಡವಟ್ಟು ಮಾಡ್ಕೊಂಡØಂಗೆ ಆಗಿºಟ್ರೆ?’ ಅಂತ ಸಜೆಶನ್‌ ತಳ್ಳಿ ಹಾಕಿದ್ದ.

Advertisement

ಅವನು ಹೇಳಿದ್ರಲ್ಲೂ ಅರ್ಥ ಇತ್ತು ಅನ್ನಿ. ಮನೆಯೊಡತಿ ಇಲ್ಲ ಅಂದ್ರೆ ಎರಡು ದಿನಕ್ಕೊಮ್ಮೆ ತೀರ್ಥ ಸೇವನೆ ಆಗಬೇಕು ಇವನಿಗೆ. ಮೊನ್ನೆ ಕುಡುª ಓಲಾಡ್ತಾ ಪಕ್ಕದ ಬೀದಿ ಕ್ರಿಶ್ಚಿಯನ್‌ ನವದಂಪತಿಯ ಮನೆಗೆ ಹೋಗಿ ಕದ ತಟಾ¤ ಇದ್ದ! ಸದ್ಯ ಸಮಯಕ್ಕೆ ಸರಿಯಾಗಿ ಅವನನ್ನು ನೋಡೋಕೆ ನಾನು ಹೋಗಿದ್ದಕ್ಕೆ, ಬಚಾವಾದ. ಕೈಹಿಡಿದು ತಂದು ಅವನನ್ನು ಮನೆಗೆ ಕರೆದೊಯ್ದು ಮಲಗಿಸಿದ್ದೆ!

“ಅವರಿವರ ಕತೆ ಇರ್ಲಿ, ನಿಂದೇನು?’ ಅಂತ ಕೇಳ್ತೀರಾ! ಇದೆ, ಹೇಳ್ತೀನಿ ಕೇಳಿ…
ಮೊನ್ನೆ ಮೀನಿನ ಸಾರು ಮಾಡಿದ್ದೆ. ಸರಿ, ಅದಕ್ಕೆ ತಕ್ಕ ಸೆಡ್ಡು ಹೊಡೆಯುವ ಸಾಥ್‌ ನೀಡೋದು ರಾಗಿ ಮುದ್ದೆ ಅನ್ನೋದು ನನ್ನ ಕಟ್ಟಾ ಅಭಿಪ್ರಾಯ. ಸರಿ, ಮುದ್ದೆ ಊಟದ ಜೊತೆಗೆ ಚಹಾ ಆಸ್ವಾದನೆ ಚೆನ್ನಾಗಿರುತ್ತೆ ಅಂತ, ಟೂ-ಇನ್‌-ಒನ್‌ ಕೆಲ್ಸ ಶುರು ಹಚೊRಂಡೆ. ಮುದ್ದೆಗೆ ಎಸರಿಗೆ ನೀರಿಟ್ಟೆ, ಇನ್ನೊಂದು ಒಲೆ ಮೇಲೆ ಅಂಥದ್ದೇ ಇನ್ನೊಂದು ಪಾತ್ರೆ ಇಟ್ಟು ನೀರು ಮತ್ತು ಹಾಲನ್ನು “ಫಿಫ್ಟಿ ಫಿಫ್ಟಿ’ ಹಾಕಿ ಚಹಾಪುಡಿ ಹಾಕಿ ಕುದಿಸಿದೆ. ಇನ್ನೊಂದು ಬರ್ನರ್‌ ಮೇಲೆ ಎಸರು ಕುದಿಯುವಾಗ ರಾಗಿ ಉರುಟನ್ನು ಹಾಕಿದೆ. ಆ ಕಡೆಯ ಪಾತ್ರೆಗೆ ನಂತರ ಸಕ್ಕರೆ ಹಾಕಿ ಸೋಸಿ ಚಹಾ ಫ್ಲಾಸ್ಕ್ಗೆ ಹಾಕಿಟ್ಟೆ. ಆ ಹೊತ್ತಿಗೆ ಮುದ್ದೆಯ ಹಿಟ್ಟು ಬೆಂದಿತ್ತು, ಮುದ್ದೆ ಮಾಡಿ ಕ್ಯಾಸರೋಲ…ಗೆ ಹಾಕಿ, ಮೀನಿನ ಸಾರನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಡೈನಿಂಗ್‌ ಟೇಬಲ… ಮೇಲೆ ತಂದಿಟ್ಟು, ಬ್ಯಾಟಿಂಗ್‌ ಶುರುಮಾಡಿದೆ. ಮೀನಿನ ಒಂದು ತುಂಡನ್ನು ಬಾಯಿಗಿಟ್ಟೆ. ವ್ಹಾ, ಅದ್ಭುತ ರುಚಿ! “ಗುರೂ ನಿನ್ನ ಕುವೈತ್‌ನ ಕೆಲಸಕ್ಕೆ ಗುಡ್‌ಬೈ ಹೇಳಿ, ಬೆಂಗಳೂರಿಗೆ ಹೋಗಿ, ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಮುದ್ದೆ- ಮೀನು ಸಾರಿನ ಮೆಸ್‌ ಇಟ್ರೆ, ಟೆಕ್ಕಿಗಳೆಲ್ಲ ಪೇಟಿಎಂ ಕೃಪೆಯಿಂದ ಇಲ್ಲಿನ ಸಂಬಳದ ದುಪ್ಪಟ್ಟು ದುಡೀಬಹುದು’ ಅಂತ ಹಿಂದೊಮ್ಮೆ ಹೇಳಿದ್ದು ನೆನಪಾಯ್ತು.

ಆ ಪೇಟಿಎಂ ಕನಸಿನಲ್ಲೇ ಮುದ್ದೆ ಮುರಿದು, ಮೀನಿನ ಸಾರಲ್ಲಿ ಅದ್ದಿ ನುಂಗಿದೆ. ಕಣ್ಣು ಮೇಲೆ ಕೆಳಗಾಯ್ತು! ಅರೇ… ಏನಿದು? ಬಂಗಾಲಿಗಳ ರಸಗುಲ್ಲ ಉಂಡೇನ ಮೀನಿನ ಸಾರಲ್ಲಿ ಅದ್ದಿ ತಿಂತಾ ಇದ್ದೀನಾ ಅಂತ ಆಶ್ಚರ್ಯ! ಮುದ್ದೆ ತುತ್ತು ಗಂಟಲು ದಾಟಿದ್ದರೂ, ಅದು ಮುದ್ದೆ ಅನ್ನೋ ನಂಬಿಕೆ ಬರಲಿಲ್ಲ. ಇನ್ನೊಂದು ತುತ್ತು ಬಾಯಿಗೆ ಹಾಕಿದೆ. ಥತ್ತೇರಿಕೆ… ಅದನ್ನು ತಿನ್ನಲೂ ಆಗಲಿಲ್ಲ. ಉಗುಳಿಬಿಟ್ಟೆ. ಮುದ್ದೆಗೆ ಸಕ್ಕರೆ ಹಾಕಿ ಯಡವಟ್ಟು ಮಾಡಿದ್ದೆ! ನನ್ನ ಪುಣ್ಯಕ್ಕೆ ಅನ್ನ ಇತ್ತು. ಅದನ್ನೇ ಹಾಕಿಕೊಂಡು ತಿಂದು, ಮುದ್ದೆಯ ಪಾತ್ರೆಯನ್ನು ನಲ್ಲಿಯ ಕೆಳಗಿಟ್ಟು ನೀರು ಬಿಟ್ಟೆ!

ಫ್ಲಾಸ್ಕ್… ತೆಗೆದು ಚಹಾ ಲೋಟಕ್ಕೆ ಬಗ್ಗಿಸಿ, ಹಿಂಜರಿಯುತ್ತಲೇ ಒಮ್ಮೆ ಸಿಪ್ಪೇರಿಸಿದೆ. ಥೂ… ನನ್ನ ಅನುಮಾನ ನಿಜವಾಗಿತ್ತು. ಮುದ್ದೆಗೆ ಹಾಕಬೇಕಿದ್ದ ಉಪ್ಪನ್ನು ಚಹಾ ಪಾತ್ರೆಗೆ ಹಾಕಿದ್ದೆ. ಈಗ ನಲ್ಲಿ ಕೆಳಗೆ ಸ್ನಾನ ಮಾಡಲು ಮುದ್ದೆಯ ಪಾತ್ರೆಯ ಜೊತೆಗೂಡಿದ್ದು ಚಹಾ ಪಾತ್ರೆ!

ಇದನ್ನೆಲ್ಲ ಹೆಂಡತಿಗೆ ಹೇಳಿದೆ ನಕ್ಕಳು. ಪಾರ್ಟ್‌ಟೈಮ್‌ ಬ್ರಹ್ಮಚಾರಿಗಳ ಯಾವುದೇ ಯಡವಟ್ಟಿಗೂ ಸಂಸಾರದಲ್ಲೊಂದು ಕ್ಷಮಾಪಣೆ ಇದ್ದೇ ಇರುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next