Advertisement

ಕುಸಿದ ಐತಿಹಾಸಿಕ ಗಡಾಯಿಕಲ್ಲಿನ ಒಂದು ಭಾಗ

04:20 PM Jun 24, 2019 | keerthan |

ಬೆಳ್ತಂಗಡಿ: ಐತಿಹಾಸಿಕ ಪ್ರವಾಸಿ ತಾಣ ಗಡಾಯಿಕಲ್ಲು, ನರಸಿಂಹ ಘಡದ ಪೂರ್ವ ಭಾಗ ಬೇಲಾಜೆ ಎಂಬಲ್ಲಿ ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಒಂದು ಭಾಗದ ಕಲ್ಲು ಜರಿದು ಬಿದ್ದ ಘಟನೆ ನಡೆದಿದೆ.

Advertisement

ಗಡಾಯಿಕಲ್ಲು(ಜಮಾಲಬಾದ್ ಕೋಟೆ) ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ್ದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ಸಂಜೆ ವೈರಲ್ ಆಗಿದ್ದು ವನ್ಯಜೀವಿ ಇಲಾಖೆ ಅಧಿಕಾರಿಗಳು ಘಟನೆಯನ್ನು ಸುಳ್ಳು ವದಂತಿ ಎಂದು ತಳ್ಳಿಹಾಕಿದ್ದರು.

ಆದರೆ ಘಟನೆ ನಡೆದ ಕುರಿತಾಗಿ ಪ್ರತ್ಯಕ್ಷದರ್ಷಿಗಳಾದ ಬೇಲಾಜೆ ನಿವಾಸಿ ಮೌರಿಶ್ ಪಿಂಟೋ ಎಂಬುವರ ಪತ್ನಿ ಜುಲಿಯಾನ ಪಿಂಟೋ ಅವರು ಪತ್ರಿಕೆ ಜತೆ ಮಾತನಾಡಿ ಘಟನೆ ರವಿವಾರ ಬೆಳಗ್ಗೆ ನಡೆದಿದ್ದು. ಸುಮಾರು ಒಂದು ತಾಸುಗಳ ಕಾಲ ಕಲ್ಲು ಸ್ವಲ್ಪ ಸ್ವಲ್ಪವಾಗಿ ಜರಿದು ಬೀಳುತ್ತಿತ್ತು. ಸುತ್ತಮುತ್ತ ಹೊಗೆ ಆವರಿಸಿದ್ದು, ಜೋರಾದ ಶಬ್ದ ಕೇಳಿ ಬಂದ ಹಿನ್ನೆಲೆ ಆತಂಕಕ್ಕೀಡಾಗಿದ್ದೆವು ಎಂದಿದ್ದಾರೆ.

ಈ ಬಾರಿ ಮಳೆಗೆ ಸಿಡಿಲು ಬಡಿದಿದ್ದರಿಂದ ಮಳೆಗೆ ಕಲ್ಲು ಜಾರಿ ಬಿದ್ದಿರಬಹುದು ಎಂದು ಸಂಶಯಿಸಲಾಗಿದೆ. ಶಾಸಕ ಹರೀಶ್ ಪೂಂಜಾ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next