Advertisement

ಅಸಂಸದೀಯ ವಿವಾದದ ಸುತ್ತ

12:06 AM Jul 15, 2022 | Team Udayavani |

ಸಂಸತ್‌ ಕಲಾಪದಲ್ಲಿ ವಿಪಕ್ಷಗಳ ಸದಸ್ಯರು, ಆಡಳಿತ ಪಕ್ಷದ ಸದಸ್ಯರಿಗೆ “ಭ್ರಷ್ಟ’ ಎಂದು ಕರೆಯಬಾರದೇ? ಹೌದು, ಹೀಗೊಂದು ಚರ್ಚೆ ಆರಂಭವಾಗಿದೆ. ಇದೇ ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನದಲ್ಲಿ ಯಾವ ಪದ ಬಳಸಬೇಕು? ಯಾವುದನ್ನು ಬಳಸಬಾರದು ಎಂಬ ಕುರಿತಾಗಿ ಒಂದು ಮಾರ್ಗಸೂಚಿ ನೀಡಲಾಗಿದೆ. ಈ ಬಗ್ಗೆ ವಿಪಕ್ಷಗಳ ಕಡೆಯಿಂದ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಹಾಗಾದರೆ ಏನಿದು ವಿವಾದ? ಯಾವ ಪದ ಬಳಕೆ ಮಾಡಬೇಕು? ಯಾವುದನ್ನು ಮಾಡಬಾರದು? ಇಲ್ಲಿದೆ ಒಂದು ನೋಟ…

Advertisement

ಹಿಂದಿನ ದಾಖಲೆ ಆಧರಿಸಿ ಈ ಕ್ರಮ
ಮುಂಗಾರು ಅಧಿವೇಶನಕ್ಕೂ ಮುನ್ನವೇ ಲೋಕಸಭೆಯ ಸೆಕ್ರೆಟೇರಿಯಟ್‌ ಈ ಅಸಂಸದೀಯ ಪದಗಳ ಪಟ್ಟಿ ಮಾಡಿ ಕೈಪಿಡಿ ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ 2004ರಲ್ಲಿ ತರಲಾಗಿದ್ದ 900 ಪುಟಗಳ ಪುಸ್ತಕವನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಈ ಪುಸ್ತಕದ ತಯಾರಿ ಶುರುವಾಗಿದ್ದೇ 1999ರಿಂದ. ಆಗ ಸ್ವಾತಂತ್ರ್ಯ ಬರುವ ಮುನ್ನ ಇದ್ದಂಥ ಸೆಂಟ್ರಲ್‌ ಲೆಜಿಸ್ಲೇಟೀವ್‌ ಅಸೆಂಬ್ಲಿ, ಅನಂತರದಲ್ಲಿ ಸಂಸತ್‌ನಲ್ಲಿ ನಿಷೇಧಿತವಾಗಿರುವ ಪದಗಳು, ರಾಜ್ಯಗಳ ವಿಧಾನಸಭೆಗಳು, ಇಂಗ್ಲೆಂಡ್‌ ಸೇರಿದಂತೆ ಇತರ ದೇಶಗಳ ಪಾರ್ಲಿಮೆಂಟ್‌ಗಳನ್ನು ಅಧ್ಯಯನ ಮಾಡಿ ರೂಪಿಸಲಾಗಿದೆ. ಹಾಗೆಯೇ, ಕಳೆದ ಕೆಲವು ವರ್ಷಗಳಿಂದ ಸಂಸತ್‌ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತೆಗೆದುಹಾಕಲಾದ ಪದಗಳನ್ನು ಇಲ್ಲಿ ಅಸಂಸದೀಯವೆಂದು ಗುರುತಿಸಲಾಗಿದೆ.

ಕ್ರಮ ಕೈಗೊಳ್ಳಲಾಗುತ್ತದೆಯೇ?
ಇಲ್ಲ. ಅಸಂಸದೀಯ ಪದ ಬಳಸಿದರು ಎಂಬ ಕಾರಣಕ್ಕೆ ಸಂಸದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಬದಲಿಗೆ, ಅವರು ಸಂಸತ್‌ನಲ್ಲಿ ಬಳಸಿರುವ ಅಸಂಸದೀಯ “ಪದ’ಗಳನ್ನು ಕಡತದಿಂದ ಅಳಿಸಿಹಾಕಲಾಗುತ್ತದೆ. “ಸ್ಪೀಕರ್‌ ಆದೇಶದ ಮೇರೆಗೆ ಈ ಪದಗಳನ್ನು ಕಡತದಿಂದ ತೆಗೆದುಹಾಕಲಾಗಿದೆ’ ಎಂದು ಉಲ್ಲೇಖೀಸಲಾಗುತ್ತದೆ.

ನಿಷೇಧಿಸಲ್ಪಟ್ಟ ಕೆಲವು ಪದಗಳು
ಭ್ರಷ್ಟ, ಅಸಮರ್ಥ, ದ್ರೋಹಿ, ನಾಚಿಕೆಗೇಡಿನ, ಜುಮ್ಲಾಜೀವಿ, ಹೇಡಿ, ಕ್ರಿಮಿನಲ್‌, ಮೊಸಳೆ ಕಣ್ಣೀರು, ಕತ್ತೆ, ಡ್ರಾಮಾ, ಕಣ್ಣೊರೆಸುವ ತಂತ್ರ, ದಾರಿತಪ್ಪಿಸು, ಸುಳ್ಳು, ಬಾಲಬುದ್ಧಿ, ಕೋವಿಡ್‌ ಸ್ಪ್ರೆಡರ್‌, ಸ್ನೂಪ್‌ಗೆàಟ್‌, ಶಕುನಿ, ನಿರಂಕುಶವಾದಿ, ಸರ್ವಾಧಿಕಾರ, ವಿನಾಶ ಪುರುಷ, ಖಲಿಸ್ಥಾನಿ, ಚಮಚಾಗಿರಿ, ಕಾಲಾ ದಿನ್‌, ಅಹಂಕಾರ, ಅಸತ್ಯ, ಅಪಮಾನ, ಗೂಂಡಾಗಳು, ದಲ್ಲಾಳಿ, ದಾದಾಗಿರಿ, ಮೂರ್ಖ, ಸಂವೇದನೆಹೀನ, ವಿಶ್ವಾಸಘಾತ, ಲೈಂಗಿಕ ಕಿರುಕುಳ ಇತ್ಯಾದಿ.

ಮೊದಲ ಬಾರಿಗೆ ಜಾರಿಗೆ ಬಂದಿದೆಯೇ?
ಇಲ್ಲ, 2012ರಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗಲೂ ಇಂಥದ್ದೊಂದು ನಿಯಮ ಜಾರಿಗೆ ತರಲಾಗಿತ್ತು. ಆಗಲೂ ಕೆಲವೊಂದು ಪದಗಳನ್ನು ಅಸಂಸದೀಯ ಎಂದು ಗುರುತಿಸಿ ನಿಷೇಧಿಸಲಾಗಿತ್ತು. ಆಗ ವಿಪಕ್ಷದಲ್ಲಿದ್ದ ಸದಸ್ಯರು ಬಳಕೆ ಮಾಡುತ್ತಿದ್ದ ಪದಗಳನ್ನು ನಿರ್ಬಂಧಿಸಲಾಗಿತ್ತು. ಅವುಗಳೆಂದರೆ, ಅಲಿಬಾಬಾ ಮತ್ತು 40 ಕಳ್ಳರು, ಕೆಟ್ಟ ಮನುಷ್ಯ, ಬದ್ಮಾಷಿ, ಬಂಡೀಕೋಟ್‌, ಬ್ಲ್ಯಾಕ್‌ವೆುàಲ್‌, ಬ್ಲೆ„ಂಡ್‌, ಬ್ಲಿಫಿಂಗ್‌, ಲಂಚ, ಬಕೆಟ್‌ ಆಫ್ ಶಿಟ್‌, ಕಮ್ಯೂನಿಸ್ಟ್‌, ಕನೂ#éಸ್ಡ್ ಮೈಂಡ್‌, ಡಕಾಯಿತ್‌, ಡಾರ್ಲಿಂಗ್‌, ಮೋಸ, ದ್ವಂದ್ವ ಮನೋಭಾವ, ದ್ವಂದ್ವ ಮಾತು, ತುಳಿತಕ್ಕೊಳಗಾದವರು, ಗೂಂಡಾ, ಸೋಮಾರಿ, ಸುಳ್ಳುಗಾರ, ಲೌಡ್‌ ಮೌತ್‌, ನೀಚ, ಉಪದ್ರವ, ದುಶ್ಚಟ, ರಾಕಿಂಗ್‌, ತೀವ್ರಗಾಮಿ, ಇಲಿ, ರಿಂಗ್‌ ಮಾಸ್ಟರ್‌, ಸ್ಕೂéಂಬಗ್‌, ಕಳ್ಳ ಎಂಬ ಪದಗಳನ್ನು ಬಳಕೆ ಮಾಡುವಂತಿರಲಿಲ್ಲ.

Advertisement

ಸಂಸದರು ಪಾಲನೆ ಮಾಡುತ್ತಾರೆಯೇ?
ಇಲ್ಲ, ಈ ಹಿಂದೆಯೂ ಕೆಲವೊಂದು ಪದಗಳನ್ನು ಬಳಕೆ ಮಾಡುವಂತಿಲ್ಲ ಎಂದು ಸೂಚಿಸಿದ್ದಾಗ್ಯೂ, ಸಂಸದರು ಬಳಕೆ ಮಾಡಿದ್ದರು. ಆದರೆ ಅವುಗಳನ್ನು ಕಡತದಿಂದ ತೆಗೆದುಹಾಕಲಾಗಿದೆಯಷ್ಟೇ. ಅಲ್ಲದೆ, ಬಳಕೆ ಮಾಡಿದ ಪದಗಳ ಬಗ್ಗೆ ಬೇರೊಬ್ಬ ಸಂಸದ ದೂರು ನೀಡಿ ಅದು ಪರಿಹಾರವಾಗಲು ಎರಡರಿಂದ ಮೂರು ದಿನ ಬೇಕಾಗುತ್ತದೆ. ಅಷ್ಟೊತ್ತಿಗೆ ಅದು ಎಲ್ಲ ಕಡೆಗಳಲ್ಲಿ ಬಳಕೆ ಮಾಡಲಾಗಿರುತ್ತದೆ. ಒಂದು ವೇಳೆ ಸಂಸದರು ಅಸಂಸದೀಯ ಪದ ಬಳಕೆ ಮಾಡಿದರೆ, ಅವುಗಳನ್ನು ಮುದ್ರಿಸದಂತೆ ಪತ್ರಿಕೆಗಳ ಮೇಲಷ್ಟೇ ನಿರ್ಬಂಧ ಹೇರಬಹುದು. ಇಂದಿನ ಟಿವಿ ಮಾಧ್ಯಮದಲ್ಲಿ, ಕಲಾಪ ನೇರವಾಗಿಯೇ ಪ್ರಸಾರವಾಗುವುದರಿಂದ ಅಲ್ಲಿ ಬಳಕೆಯಾಗುತ್ತದೆ.

ಮೊದಲೇ ನಿರ್ಧಾರವಿಲ್ಲ
ರಾಜ್ಯ ವಿಧಾನ ಮಂಡಲದ ಎರಡೂ ಸದನದಲ್ಲಿ ಸಾಂದರ್ಭಿಕವಾಗಿ ಸದಸ್ಯರು ಬಳಕೆ ಮಾಡುವ ಪದಗಳಿಂದ ಸಮಾಜದ ಯಾವುದೇ ವ್ಯಕ್ತಿ, ಹಾಗೂ ಜಾತಿ, ಧರ್ಮದವರ ಮನಸ್ಸಿಗೆ ನೋವುಂಟಾಗುವ ಹಾಗೂ ಅವರಿಗೆ ಅಪಮಾನ ಮಾಡುವಂತಿದ್ದರೆ, ಅಂತಹ ಪದಗಳನ್ನು ಯಾವುದೇ ಸದಸ್ಯರ ಮನವಿ ಅಥವಾ ಸಭಾಧ್ಯಕ್ಷರು ತಮ್ಮ ವಿವೇಚನೆ ಬಳಸಿ ಅಂತಹ ಪದಗಳನ್ನು ಅಸಂವಿಧಾನಿಕ ಪದಗಳೆಂದು ಪರಿಗಣಿಸಿ ಕಡತದಿಂದ ತೆಗೆದು ಹಾಕುವ ವ್ಯವಸ್ಥೆ ಇದೆ. ಸಾಮಾನ್ಯವಾಗಿ ಸಮಾಜದಲ್ಲಿ ಬಳಕೆಯಾಗುವ ಪದಗಳನ್ನು ಬಳಕೆ ಮಾಡಬಾರದು ಎನ್ನುವ ಬಗ್ಗೆ ವಿಧಾನ ಮಂಡಲದಲ್ಲಿ ಯಾವುದೇ ಅಧಿಕೃತ ಪ್ರಕಟನೆೆ ಹೊರಡಿಸಿಲ್ಲ. ಅಲ್ಲದೇ ಯಾವುದೇ ನಿರ್ದಿಷ್ಟ ಪದವನ್ನು ಬಳಸದಂತೆ ಮುಂಚಿತವಾಗಿಯೇ ಯಾವುದೇ ಸದಸ್ಯರಿಗೆ ನಿಬಂìಧ ಹೇರಲಾಗಿಲ್ಲ. ಕಲಾಪ ನಡೆಯುವ ಸಂದರ್ಭದಲ್ಲಿ ಬಳಕೆಯಾಗುವ ಪದಗಳನ್ನು ಗಮನಿಸಿ ಸ್ಪೀಕರ್‌ ನೀಡುವ ರೂಲಿಂಗ್‌ ಆಧಾರದಲ್ಲಿ ಅಸಂವಿಧಾನಿಕ ಪದಗಳ ಪಟ್ಟಿಯನ್ನು ಮಾಡಲಾಗುತ್ತದೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next