Advertisement

Parliamentary Standing Committee ಆರ್ಥಿಕ ಅಪರಾಧಿಗಳ ಕೈಗೆ ಕೋಳ ಬೇಡ

11:43 PM Nov 13, 2023 | Team Udayavani |

ಹೊಸದಿಲ್ಲಿ: ಆರ್ಥಿಕ ಅಪರಾಧಿಗಳಿಗೆ ಕೈಕೋಳ ತೊಡಿಸದಂತೆ ಸಂಸದೀಯ ಸ್ಥಾಯೀ ಸಮಿತಿ ಶಿಫಾ ರಸು ಮಾಡಿದೆ. ಅವರನ್ನು ಅತ್ಯಾಚಾರ ಮತ್ತು ಕೊಲೆ ಆರೋಪಿಗಳಂತೆ ಆರ್ಥಿಕ ಅಪರಾಧಿಗಳನ್ನು ಪರಿಗಣಿಸಬಾರದು ಎಂದು ಸಂಸದ ಬ್ರಿಜ್‌ಲಾಲ್‌ ನೇತೃತ್ವದ ಕೇಂದ್ರ ಗೃಹ ಸಚಿವಾಲಯದ ಸಂಸದೀಯ ಸ್ಥಾಯೀ ಸಮಿತಿಯು ಅಭಿಪ್ರಾಯಪಟ್ಟಿದೆ.

Advertisement

ಬಂಧನದ ಮೊದಲ 15 ದಿನಗಳ ಅನಂತರ‌ ಆರೋಪಿಯ ಪೊಲೀಸ್‌ ವಶಕ್ಕೆ ಸಂಬಂ ಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗೆ ಕೆಲವು ಬದಲಾವಣೆಗಳನ್ನು ಸಮಿತಿ ಶಿಫಾರಸು ಮಾಡಿದೆ.

1898ರ ಅಪರಾಧ ದಂಡ ಸಂಹಿತೆ, 1860ರ ಭಾರತೀಯ ದಂಡ ಸಂಹಿತೆ ಹಾಗೂ 1872 ಭಾರ ತೀಯ ಸಾಕ್ಷ್ಯ ಸಂಹಿತೆ ಬದಲಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ತರಲು ಲೋಕಸಭೆಯಲ್ಲಿ ಆ.11ರಂದು ವಿಧೇಯಕ ಗಳನ್ನು ಮಂಡಿಸಲಾಯಿತು. ಸಂಸ ದೀಯ ಸ್ಥಾಯಿ ಸಮಿತಿಯು ತನ್ನ ವರದಿಯನ್ನು ರಾಜ್ಯಸಭೆಗೆ ಕಳೆದ ಶುಕ್ರವಾರ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next