Advertisement

Parliamentary panel ನ್ಯಾಯಮೂರ್ತಿಗಳ ಆಸ್ತಿ ಘೋಷಣೆ ಮಾಡಲು ಕಾನೂನು ಬೇಕು

10:07 PM Aug 07, 2023 | Team Udayavani |

ನವದೆಹಲಿ: ನ್ಯಾಯಮೂರ್ತಿಗಳು ತಾವು ಹೊಂದಿರುವ ಆಸ್ತಿಯನ್ನು ಪ್ರತಿ ವರ್ಷವೂ ಕಡ್ಡಾಯವಾಗಿ ಘೋಷಣೆ ಮಾಡುವ ಬಗ್ಗೆ ಕಾನೂನು ಜಾರಿಗೆ ತರಬೇಕು ಎಂದು ಸಂಸತ್‌ನ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

Advertisement

ಕಾನೂನು ಮತ್ತು ನ್ಯಾಯ ವಿಚಾರಗಳಿಗಾಗಿನ ಸ್ಥಾಯಿ ಸಮಿತಿ ಈ ಅಭಿಪ್ರಾಯಪಟ್ಟಿದೆ. ಪ್ರತಿ ವರ್ಷ ನಿಯಮಿತವಾಗಿ ನ್ಯಾಯಮೂರ್ತಿಗಳು ತಾವು ಹೊಂದಿರುವ ಆಸ್ತಿಯ ವಿವರಗಳನ್ನು ಘೋಷಣೆ ಮಾಡಬೇಕು. ಜತೆಗೆ ಅದು ಸಾರ್ವಜನಿಕರ ಗಮನಕ್ಕೆ ಬರುವಂತಾಗಬೇಕು. ಇಂಥ ಕ್ರಮದಿಂದ ಉನ್ನತ ನ್ಯಾಯಾಂಗದ ಮೇಲೆ ಇರುವ ಜನರ ನಂಬಿಕೆ ಮತ್ತಷ್ಟು ದೃಢವಾಗಲಿದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಶೀಲ್‌ ಕುಮಾರ್‌ ಮೋದಿ ನೇತೃತ್ವದ ಸಮಿತಿ ಪ್ರತಿಪಾದಿಸಿದೆ.

1997 ಮೇ 7ರಂದು ಸುಪ್ರೀಂಕೋರ್ಟ್‌ನ ಅಂದಿನ ಪೂರ್ಣ ಪ್ರಮಾಣದ ನ್ಯಾಯಮೂರ್ತಿಗಳ ಸಭೆಯಲ್ಲಿ ಕೂಡ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿಗಳು ಪಾಲಿಸಬೇಕಾಗದ ಕೆಲವೊಂದು ನೈತಿಕ ಅಂಶಗಳ ಬಗ್ಗೆ ಚರ್ಚೆ ನಡೆಸಿತ್ತು ಎಂದು ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ. ಅದರ ಅನ್ವಯ ನ್ಯಾಯಮೂರ್ತಿಗಳು ತಾವು ಹೊಂದಿರುವ ಆಸ್ತಿಯ ವಿವರ ಘೋಷಣೆ ಮಾಡುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next