ಹೊಸದಿಲ್ಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಮಸೂದೆಯ ಬಗ್ಗೆ ಪರಿಶೀಲನೆಗಾಗಿ ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ವಿಶೇಷವೆಂದರೆ, 31 ಸದಸ್ಯರಿರುವ ಈ ಸಮಿತಿಯಲ್ಲಿ ಇರುವುದು ಒಬ್ಬರೇ ಸಂಸದೆ!
ಮಹಿಳೆಯರ ಮದುವೆ ವಯಸ್ಸು ಹೆಚ್ಚಳದ ಬಗೆಗಿನ ಪರಿಶೀಲನೆಗೆ 30 ಸಂಸದರು ಹಾಗೂ ಓರ್ವ ಸಂಸದೆಯಿರುವ ಸಮಿತಿ ರಚಿಸಲಾಗಿದೆ. ಆ ಸಮಿತಿಯ ನೇತೃತ್ವವನ್ನು ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ವಹಿಸಿಕೊಂಡಿದ್ದಾರೆ. ಟಿಎಂಸಿಯ ಸಂಸದೆ ಸುಶ್ಮಿತಾ ದೇವ್ ಏಕೈಕ ಸಂಸದೆಯಾಗಿದ್ದಾರೆ.
“ಸಮಿತಿಯಲ್ಲಿ ಸಂಸದೆಯರ ಸಂಖ್ಯೆ ಹೆಚ್ಚಿರಬೇಕಿತ್ತು’ ಎಂದು ಸುಶ್ಮಿತಾ ದೇವ್ ಹೇಳಿದ್ದಾರೆ. ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಿಸುವುದಕ್ಕೆ ಶಿಫಾರಸು ಮಾಡಿದ್ದ ಜಯ ಜೇಟ್ಲಿ ಸಮಿತಿಯ ಸದಸ್ಯರಾದ ಜಯ ಜೇಟ್ಲಿ ಕೂಡ ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನ ಹೊಡೆದುರುಳಿಸಿದ ಸೇನೆ
ಸಮಿತಿಯಲ್ಲಿ ಕನಿಷ್ಠ ಶೇ.50 ಸದಸ್ಯರು ಮಹಿಳೆಯರಾಗಿರಬೇಕು. ಎಲ್ಲ ಪಕ್ಷಗಳು ಸಮಿತಿಗೆ ಸಂಸದೆಯರನ್ನೇ ನೇಮಿಸಿ ಎಂದು ಕೋರಿದ್ದಾರೆ.