Advertisement

250 ಗಂಟೆ ಸಂಸತ್ತಿನ ಕಲಾಪ ವ್ಯರ್ಥ

09:20 AM Apr 07, 2018 | Team Udayavani |

2000ನೇ ಇಸ್ವಿಯ ನಂತರದಲ್ಲಿ ಇದೇ ಮೊದಲ ಬಾರಿಗೆ ಸಂಸತ್‌ ಅಧಿವೇಶನ ತೀರಾ ಕಡಿಮೆ ಸಮಯ ಕಾರ್ಯನಿರ್ವಹಿಸಿದೆ. ಬಜೆಟ್‌ ಅಧಿವೇಶನದ 22 ದಿನಗಳಲ್ಲಿ ಒಟ್ಟು 250 ಗಂಟೆಗಳು ವ್ಯರ್ಥವಾಗಿವೆ. ರಾಜ್ಯಸಭೆಯಲ್ಲಿ ಕೇವಲ 9 ಪ್ರಶ್ನೆಗಳಿಗೆ ಉತ್ತರಿಸಲಾಗಿದ್ದರೆ, ಲೋಕಸಭೆಯಲ್ಲಿ ಕೇವಲ17 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇದರಿಂದಾಗಿ ಅಧಿವೇಶನದ ಅಮೂಲ್ಯ ಅವಧಿ ನಷ್ಟವಾದಂತಾಗಿದೆ.

Advertisement

ಅನುಮೋದನೆಗೊಂಡ ಪ್ರಮುಖ ಮಸೂದೆಗಳು
– ಗ್ರಾಚ್ಯುಟಿ ಪಾವತಿ (ತಿದ್ದುಪಡಿ) ಮಸೂದೆ, 2017
– ವಿಶಿಷ್ಟ ಪರಿಹಾರ (ತಿದ್ದುಪಡಿ) ಮಸೂದೆ, 2017

ಪ್ರತಿಭಟನೆಗೆ ಕಾರಣವಾದ ವಿಷಯಗಳು
– ಬ್ಯಾಂಕ್‌ ಹಗರಣ
– ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ
– ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ
– ಎಸ್‌.ಸಿ.ಎಸ್‌.ಟಿ. ಕಾಯ್ದೆ ಕುರಿತು ಸುಪ್ರೀಂ ತೀರ್ಪು

29 ದಿನ ಲೋಕಸಭೆ ಕಾರ್ಯನಿರ್ವಹಣೆ
– 30 ದಿನ ರಾಜ್ಯಸಭೆ ಕಾರ್ಯನಿರ್ವಹಣೆ
– 05 ದಿನ ಮಸೂದೆಗಳಿಗೆ ಅನುಮೋದನೆ
– 02 ದಿನ ಮಸೂದೆಗಳ ಮಂಡನೆ

– 21%ರಷ್ಟು ಕಾಲ ಕೆಲಸ ಮಾಡಿದ ಲೋಕಸಭೆ
– 27%ರಷ್ಟು ಕಾಲ ಕೆಲಸ ಮಾಡಿದ ರಾಜ್ಯಸಭೆ
– 250ಗಂಟೆ ಕಲಾಪ ವ್ಯರ್ಥ (ರಾಜ್ಯಸಭೆ ಹಾಗೂ ಲೋಕಸಭೆ)
– 34ಗಂಟೆ 5 ನಿಮಿಷಗಳು ಮಾತ್ರ ಲೋಕಸಭೆ ಕಾರ್ಯನಿರ್ವಹಣೆ
– 17ಪ್ರಶ್ನೆಗಳಿಗೆ ಉತ್ತರ
– 580ಪ್ರಶ್ನೆಗಳು ಬಾಕಿ
– 6670ಲಿಖೀತ ಪ್ರಶ್ನೆಗಳು ಸಲ್ಲಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next