Advertisement

Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ

05:32 AM Nov 28, 2024 | Team Udayavani |

ಹೊಸದಿಲ್ಲಿ: ಅದಾನಿ ಸಮೂಹದ ಲಂಚ ಪ್ರಕರಣ ಸೇರಿ ವಿವಿಧ ವಿಷಯಗಳ ಚರ್ಚೆಗೆ ವಿಪಕ್ಷಗಳು ಪಟ್ಟುಹಿಡಿದ ಕಾರಣ ಉಭಯ ಸದನಗಳ ಕಲಾಪವನ್ನು ಬುಧವಾರ ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

Advertisement

ಬುಧವಾರ ಬೆಳಿಗ್ಗೆ ಲೋಕಸಭೆ ಆರಂಭ ವಾದ ಕೂಡಲೇ ವಿಪಕ್ಷ ನಾಯಕರು ಸರಕಾರದ ವಿರುದ್ಧ ಪ್ರತಿಭಟನೆ ಕೂಗಲು ಆರಂಭಿಸಿದ್ದರಿಂದ ಪ್ರಶ್ನೋತ್ತರ ಕಲಾಪವನ್ನು ಮೊಟಕುಗೊಳಿಸಿ ಕಲಾಪವನ್ನು 12 ಗಂಟೆಗೆ ಮುಂದೂಡಲಾಯಿತು.

ಮತ್ತೆ ಕಲಾಪ ಆರಂಭವಾದಾ ಗಲೂ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿ ದಂತೆ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದು ಗಲಾಟೆ ಮಾಡಿದ ಕಾರಣ ಸ್ಪೀಕರ್‌ ಸ್ಥಾನದ ಲ್ಲಿದ್ದ ದಿಲೀಪ್‌ ಸೈಕಿಯಾ ಅವರು ಒಂದು ದಿನದ ಮಟ್ಟಿಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಸಹ ಅದಾನಿ ವಿಷಯ ವಾಗಿ ವಿಪಕ್ಷಗಳ ನಾಯಕರು ಗದ್ದಲ ಮಾಡಿದ್ದ ರಿಂದ ಒಂದು ದಿನ ಮುಂದೂಡಲಾಯಿತು. ಅದಾನಿ ಪ್ರಕರಣದ ತನಿಖೆಗೆ ಜೆಪಿಸಿ ಸೇರಿ 18 ನೋಟಿಸ್‌ಗಳನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನಕರ್‌ ತಿರಸ್ಕರಿಸಿದರು.

ಲೋಕಸಭೆಯಲ್ಲೂ ನಿಲುವಳಿ: ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅನುಮತಿ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಸಂಸದ ಮಾಣಿಕ್ಯಂ ಟಾಗೋರ್‌ ಅವರು ನಿಲುವಳಿ ಮಂಡಿಸಿದರು. ಸರಕಾರದ ಮೌನ ಭಾರತದ ಸಮಗ್ರತೆ ಮತ್ತು ಜಾಗತಿಕ ಸ್ಥಾನಮಾನದ ಬಗ್ಗೆ ಕಳವಳವನ್ನು ಉಂಟು ಮಾಡುತ್ತದೆ ಎಂದು ಅವರು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next