Advertisement
ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ ಮಾಡುವವರು ತಮ್ಮ ವರ್ತನೆಗಳಲ್ಲಿ ಯಶಸ್ವಿಯಾಗಲೇ ಇಲ್ಲ. ಮತದಾರರು ಅಂತಹವರನ್ನು ಸೂಕ್ತ ಸಮಯದಲ್ಲಿ ತಿರಸ್ಕರಿಸಿದರು. ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಆದರೆ ಕೆಲವು ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಂಸತ್ತನ್ನು ನಿಯಂತ್ರಿಸಲು ಬಯಸುತ್ತಿದ್ದಾರೆ. ಅಡೆತಡೆಯೊಡ್ಡಲು ಬಯಸುತ್ತಾರೆ ಎಂದರು.
ಪ್ರಧಾನಿ ಮೋದಿ ಸದನದೊಳಕ್ಕೆ ಕಾಲಿಡುತ್ತಿದ್ದಂತೆ ಆಡಳಿತಾರೂಢ ಎನ್ಡಿಎ ಸಂಸದರು “ಏಕ್ ಹೇ ತೋ ಸೇಫ್ ಹೇ’ ಎಂಬ ಉದ್ಘೋಷದೊಂದಿಗೆ ಅವರನ್ನು ಸ್ವಾಗತಿಸಿದರು. ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ ಪ್ರಚಾರದ ವೇಳೆ ಈ ಸ್ಲೋಗನ್ ಚಾಲ್ತಿಗೆ ಬಂದಿತ್ತು.
Related Articles
ಹೊಸದಿಲ್ಲಿ: ಸಂಸತ್ನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದ್ದು, ಮೊದಲ ದಿನವೇ “ಅದಾನಿ ಬಿರುಗಾಳಿ’ಗೆ ಕಲಾಪ ಧೂಳಿಪಟವಾಗಿದೆ. ಸಂಸತ್ನ ಎರಡೂ ಸದನಗಳಲ್ಲಿ ವಿಪಕ್ಷಗಳು ತೀವ್ರ ಗದ್ದಲ ಉಂಟು ಮಾಡಿದ ಕಾರಣ, ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.
Advertisement
ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ಸಂಸದರು ಉದ್ಯಮಿ ಗೌತಮ್ ಅದಾನಿ ವಿರುದ್ಧದ ಲಂಚದ ಆರೋಪ ಕುರಿತು ಚರ್ಚೆಯಾಗಬೇಕು ಮತ್ತು ಈ ಪ್ರಕರಣದ ತನಿಖೆಗೆ ಜೆಪಿಸಿ(ಜಂಟಿ ಸಂಸದೀಯ ಸಮಿತಿ) ರಚಿಸಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗತೊಡಗಿದರು.
ಚರ್ಚೆಗೆ ಅವಕಾಶ ನೀಡದ್ದರಿಂದ ಆಕ್ರೋಶಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಇಡೀ ದೇಶದ ಮೇಲೆ ಪರಿಣಾಮ ಬೀರುವಂಥ ವಿಚಾರದ ಬಗ್ಗೆ ಚರ್ಚೆಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಉತ್ತರಿಸಬೇಕು. ಅದಾನಿ ಪ್ರಕರಣದಿಂದ ಭಾರತದ ವರ್ಚಸ್ಸಿಗೆ ಕಳಂಕ ಉಂಟಾಗಿದೆ. ಆದರೂ ಪ್ರಧಾನಿ ಮೋದಿಯವರು ಅದಾನಿಯನ್ನು ಬೆಂಬಲಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಕೂಡಲೇ ಖರ್ಗೆ ಅವರ ಈ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಸಭಾಪತಿ ಧನ್ಕರ್ ಸೂಚಿಸಿದರು. ಲೋಕಸಭೆಯಲ್ಲಿ ಡಿಜಿಟಲ್ ಹಾಜರಾತಿ
ಸೋಮವಾರದಿಂದ ಲೋಕಸಭೆಯಲ್ಲಿ ಸಂಸದರಿಗೆ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಎಲೆಕ್ಟ್ರಾನಿಕ್ ಟ್ಯಾಬ್ನಲ್ಲಿ ತಮ್ಮ ಹೆಸರನ್ನು ಆಯ್ಕೆ ಮಾಡಿ, ಡಿಜಿಟಲ್ ಪೆನ್ನಿಂದ ಸಹಿ ಹಾಕುವ ಮೂಲಕ ಸಂಸದರು ಹಾಜರಾತಿಯನ್ನು ದೃಢಪಡಿಸಬೇಕು. ಸಂಸತ್ತನ್ನು ಕಾಗದರಹಿತ ಮಾಡುವ ಉದ್ದೇಶದಿಂದ ಇದನ್ನು ಜಾರಿಮಾಡಲಾಗಿದೆ. ವಕ್ಫ್ ಸಮಿತಿ ಅವಧಿ ವಿಸ್ತರಣೆಗೆ ಮನವಿ
ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಗೆಂದು ರಚಿಸಲಾದ ಜಂಟಿ ಸಂಸದೀಯ ಸಮಿತಿಯ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡುವಂತೆ ಲೋಕಸಭಾ ಸ್ಪೀಕರ್ಗೆ ವಿಪಕ್ಷ ನಾಯಕರು ಮನವಿ ಮಾಡಿದ್ದಾರೆ. ಮಸೂದೆಯ ಕುರಿತು ವಿಸ್ತೃತ ಚರ್ಚೆ ಹಾಗೂ ಸಮಾಲೋಚನೆ ಅಗತ್ಯವಿದೆ ಎಂದೂ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.