Advertisement

Parliament ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆ

01:01 AM Aug 08, 2024 | Team Udayavani |

ಹೊಸದಿಲ್ಲಿ: ಗುರುವಾರ (ಆ. 8) ಲೋಕಸಭೆಯಲ್ಲಿ ವಕ್ಫ್ ಮಂಡಳಿ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗುವುದು ಎಂದು
ಕೇಂದ್ರ ಸರಕಾರವು ಲೋಕಸಭೆ ಕಲಾಪ ಸಲಹಾ ಸಮಿತಿಗೆ ಬುಧವಾರ ಮಾಹಿತಿ ನೀಡಿದೆ.

Advertisement

ಈ ಮಧ್ಯೆ ಮಸೂದೆಯನ್ನು ಸಂಸದೀಯ ಸ್ಥಾಯೀ ಸಮಿತಿಗೆ ಕಳುಹಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. 1923 ವಕ್ಫ್ ಕಾಯ್ದೆ ಯನ್ನು ಹಿಂಪಡೆದು, 1995ರ ವಕ್ಫ್ ಕಾಯ್ದೆಗೆ 44 ತಿದ್ದುಪಡಿಗಳನ್ನು ತರಲು ಕೇಂದ್ರ ಸರಕಾರ ಯೋಜಿಸಿದೆ.

ಹೊಸ ಕಾಯ್ದೆಯ ಮೂಲಕ ಕೇಂದ್ರ ಸರಕಾರವು ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಸುಧಾ ರಣೆ ತರಲು ಮುಂದಾಗಿದೆ. ಸುಮಾರು 40 ತಿದ್ದುಪಡಿಗಳನ್ನು ಜಾರಿಗೆ ತರಲು ಯೋಜಿಸ ಲಾಗಿದೆ. ವಿಶೇಷವಾಗಿ ಆಸ್ತಿಗಳ ಮೌಲ್ಯವನ್ನು ದೃಢಪಡಿಸುವುದಕ್ಕಾಗಿ ಕಾಯ್ದೆಯ ಮೂಲಕ ವಕ್ಫ್ ಮಂಡಳಿಯನ್ನು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನೋಂದಣಿ ಮಾಡುವುದು ಸೇರಿದಂತೆ ಅನೇಕ ಸುಧಾರಣೆಗಳನ್ನು ಉದ್ದೇಶಿಸಲಾಗಿದೆ. ಜತೆಗೆ ಮಂಡಳಿಯಲ್ಲಿ ಇಬ್ಬರು ಮಹಿಳೆಯರಿಗೆ ಕಡ್ಡಾಯ ಸ್ಥಾನ ಹಾಗೂ ಮುಸ್ಲಿಮತೇರರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎನ್ನಲಾಗಿದೆ.

ಸ್ಥಾಯೀ ಸಮಿತಿ ಪರಾಮರ್ಶೆಗೆ ಆಗ್ರಹ
ಮಸೂದೆಯನ್ನು ಮಂಡಿಸಿದ ಬಳಿಕ ಪರಾಮರ್ಶೆಗಾಗಿ ಸಂಸದೀಯ ಸ್ಥಾಯೀ ಸಮಿತಿಗೆ ಕಳುಹಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಆದರೆ ಸರಕಾರ ಮಾತ್ರ ಈ ಕುರಿತು ಕಲಾಪ ಸಲಹಾ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ.

ತಿದ್ದುಪಡಿ
ಮಸೂದೆಯಲ್ಲಿ ಏನಿದೆ?
-ದೇಶದಲ್ಲಿರುವ ವಕ್ಫ್ ಆಸ್ತಿಗಳನ್ನು ಗುರುತಿಸುವುದು
-ಜಿಲ್ಲಾಧಿಕಾರಿ ಕಚೇರಿಗಳಲ್ಲಿ ವಕ್ಫ್ ಮಂಡಳಿ ನೋಂದಣಿ
-ವಕ್ಫ್ ಮಂಡಳಿಯಲ್ಲಿ 2 ಮಹಿಳಾ ಸದಸ್ಯರು ಕಡ್ಡಾಯ
-ಬೋಹ್ರಾ ಸಮುದಾಯದಹಕ್ಕುಗಳ ರಕ್ಷಣೆ
-ಮುಸ್ಲಿಮ್‌ ಸಮುದಾಯದ ಎಲ್ಲ ವರ್ಗದವರಿಗೂ ಅವಕಾಶ
-ಇಸ್ಲಾಮಿಕ್‌ ರಾಷ್ಟ್ರಗಳಂತೆ ವಕ್ಫ್ ಮಂಡಳಿ ಪುನಾರಚನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next