Advertisement
ಶಂಕಿತ ವ್ಯಕ್ತಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಮತ್ತು ಅತ್ಯಾಚಾರ ಆರೋಪದಲ್ಲಿ ಜೈಲುಪಾಲಾಗಿರುವ ರಾಂ ರಹೀಮ್ ನ ಬೆಂಬಲಿಗನಾಗಿದ್ದಾನೆ ಎಂಬ ಮಾಹಿತಿ ಪ್ರಾಥಮಿಕ ಮೂಲಗಳಿಂದ ಲಭ್ಯವಾಗಿದೆ.
ಸಂಸತ್ ಭವನದ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಸಾಗರ್ ಎಂದು ಗುರುತಿಸಲಾಗಿದೆ. ಈತ ದೆಹಲಿಯ ಲಕ್ಷ್ಮೀನಗರದ ನಿವಾಸಿಯಾಗಿದ್ದಾನೆ. ಸಂಸತ್ ಭವನದ ಗೇಟ್ ಸಂಖ್ಯೆ 01ರ ಬಳಿ ತನ್ನ ಬೈಕ್ ಅನ್ನು ನಿಲ್ಲಿಸಿ ಕೈಯಲ್ಲಿ ಚಾಕು ಹಿಡಿದುಕೊಂಡು ಸಂಸತ್ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಮತ್ತು ಈ ಸಂದರ್ಭದಲ್ಲಿ ಆತ ರಾಮ್ ರಹೀಂ ಪರವಾಗಿ ಘೋಷಣೆಯನ್ನು ಕೂಗುತ್ತಿದ್ದ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.