Advertisement

Parliament ಪ್ರಕರಣ: ಮೈಸೂರಿನಲ್ಲಿ ಸಂಸದ ಸಿಂಹ ಕಚೇರಿ ಎದುರು ಕಾಂಗ್ರೆಸ್ ಆಕ್ರೋಶ

05:51 PM Dec 13, 2023 | Team Udayavani |

ಮೈಸೂರು: ಲೋಕಸಭಾ ಕಲಾಪದ ವೇಳೆ ದುಷ್ಕರ್ಮಿಗಳು ಸಂಸತ್‌ ನೊಳಕ್ಕೆ ನುಗ್ಗಿ ಕಲರ್ ಸ್ಪ್ರೇ ಹಾರಿಸಿ ದುಷ್ಕೃತ್ಯ ಎಸಗಲು ಮುಂದಾಗಿ ಕೋಲಾಹಲವೆಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಎದುರು ಸೋಮವಾರ ಸಂಜೆ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿ ಈ ಕೃತ್ಯಕ್ಕೆ ಪ್ರತಾಪ್ ಸಿಂಹರವರೇ ನೇರ ಹೊಣೆ ಎಂದು ಆರೋಪಿಸಿದರು. ಪ್ರತಿಭಟನೆ ವೇಳೆ ಭಾರೀ ಸಂಖ್ಯೆಯ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ತಳ್ಳಾಟ, ನೂಕಾಟ ನಡೆದಿದೆ.

ಇದನ್ನೂ ಓದಿ: Parliament ;ದುಸ್ಸಾಹಸ ಮೆರೆದಿದ್ದು 6 ಮಂದಿ: ಇನ್ನಿಬ್ಬರಿಗಾಗಿ ತೀವ್ರ ಶೋಧ

ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸಲಾಗುತ್ತಿದೆ ಎಂದು ಸಂಸದ ಪ್ರತಾಪಸಿಂಹ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.

ಕೃತ್ಯ ಎಸಗಿ ಬಂಧನಕ್ಕೊಳಗಾಗಿರುವ ಆರೋಪಿಗಳಿಬ್ಬರು ಸಂಸದ್ ನೊಳಗೆ ಪ್ರವೇಶಿಸಲು ಪ್ರತಾಪ್ ಸಿಂಹ ಅವರು ನೀಡಿದ್ದ ಪಾಸ್ ಗಳನ್ನು ಬಾಳಸಿಕೊಂಡಿದ್ದಾರೆ. ಆರೋಪಿಗಳಾದ ಸಾಗರ್ ಶರ್ಮ ಮತ್ತು ಮೈಸೂರಿನ ಮನೋರಂಜನ್ ಡಿ. ಸಂದರ್ಶಕರ ಗ್ಯಾಲರಿಯಲ್ಲಿದ್ದವರು ಕೃತ್ಯ ಎಸಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next