Advertisement

ಸಂಸತ್‌ ಭದ್ರತೆಯಲ್ಲಿ ಭಾರೀ ಲೋಪ:ನಕಲಿ ರಾಜ್ಯಸಭಾ ಐಡಿ ಕಾರ್ಡ್‌ ಪತ್ತೆ

04:14 PM Jun 13, 2017 | Team Udayavani |

ಹೊಸದಿಲ್ಲಿ : ಸಂಸತ್‌ ಭದ್ರತೆಯಲ್ಲಿ  ಭಾರೀ ಲೋಪವಾಗಿರುವುದಕ್ಕೆ ಸಾಕ್ಷಿ ಎಂಬಂತೆ ಅಧಿಕಾರಿಗಳು ಇಂದು ಮಂಗಳವಾರ ವಿವಾದಿತ ಎಐಎಡಿಎಂಕೆ ನಾಯಕ ಟಿ ಟಿ ವಿ ದಿನಕರನ್‌ ಅವರ ನಿಕಟವರ್ತಿಯೊಬ್ಬರಿಂದ ನಕಲಿ ರಾಜ್ಯಸಭಾ ಐಡಿ ಕಾರ್ಡ್‌ ವಶಪಡಿಸಿಕೊಂಡಿದ್ದಾರೆ. 

Advertisement

ಎಐಎಡಿಎಂಕೆ ಪಕ್ಷದ ಎರಡೆಲೆ ಚುನಾವಣಾ ಚಿಹ್ನೆಯನ್ನು ಶತಾಯಗತಾಯ ಪಡೆಯುವ ಸಲುವಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ದಿನಕರನ್‌ ಅವರ ನಿಕಟವರ್ತಿಯೋರ್ವರಿಂದ ಈ ನಕಲಿ ರಾಜ್ಯಸಭಾ ಐಡಿ ಕಾರ್ಡ್‌ ವಶವಾಗಿರುವುದನ್ನು ಟೈಮ್ಸ್‌ ನೌ ವರದಿ ಮಾಡಿದೆ. 

ದಿನಕರನ್‌ ಅವರ ನಿಕಟವರ್ತಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ; ಆದರೆ ಆತನ ಕೈಗೆ ಈ ನಕಲಿ ಐಡಿ ಕಾರ್ಡ್‌ ಹೇಗೆ, ಎಲ್ಲಿಂದ, ಯಾವಾಗ, ಯಾರಿಂದ ಬಂತೆಂಬ ಬಗ್ಗೆ ಈಗ ಕೂಲಂಕಷ ತನಿಖೆ ನಡೆಯುತ್ತಿದೆ. 

ದಿನಕರನ್‌ ನಿಕಟವರ್ತಿಯಾಗಿರುವ ಆರೋಪಿ ವ್ಯಕ್ತಿಯ ವಿರುದ್ಧ ಐಪಿಸಿ ಸೆ.467ರಡಿ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next