Advertisement
ಇದನ್ನೂ ಓದಿ:Arrested: ಅತ್ತಿಬೆಲೆ ಪಟಾಕಿ ದುರಂತ; ಮತ್ತೂಬ್ಬ ಆರೋಪಿ ಲಾರಿ ಚಾಲಕನ ಬಂಧನ
Related Articles
Advertisement
ಐದನೇ ಆರೋಪಿ ವಿಕ್ರಮ್ ಎಂಬಾತನನ್ನು ಬಂಧಿಸಲಾಗಿದ್ದು, ಲಲಿತ್ ಝಾ ಬಂಧನಕ್ಕೆ ಬಲೆ ಬೀಸಲಾಗಿದೆ. ಆರು ಮಂದಿ ಆರೋಪಿಗಳ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಆರೋಪಿಗಳ ವಿರುದ್ಧ ಅತಿಕ್ರಮ ಪ್ರವೇಶ, ಅಪರಾಧ ಸಂಚು, ಗಲಭೆ ಪ್ರಚೋದನೆ ಸಂಚು, ಯುಎಪಿಎ ಸೇರಿದಂತೆ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯಲ್ಲಿ ಹೇಳಿದ್ದೇನು?
ಆರು ಮಂದಿ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಭಗತ್ ಸಿಂಗ್ ಫ್ಯಾನ್ ಕ್ಲಬ್ ಗೆಳೆಯರಾಗಿದ್ದು, ಸುಮಾರು ಒಂದೂವರೆ ವರ್ಷಗಳ ಹಿಂದೆ ಆರು ಮಂದಿ ಮೈಸೂರಿನಲ್ಲಿ ಒಗ್ಗೂಡಿದ್ದು, ನಂತರ ಸಂಸತ್ ಭವನದೊಳಗೆ ನುಗ್ಗುವ ಸಂಚು ರೂಪಿಸಿರುವುದಾಗಿ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.
ತಮ್ಮ ಯೋಜನೆ ಕಾರ್ಯಗತಗೊಳಿಸಲು ಈ ಗುಂಪು ಸಾಕಷ್ಟು ಮಾಹಿತಿ ಕಲೆ ಹಾಕಿದ್ದು, ಅದರಂತೆ ಭದ್ರತಾ ಲೋಪವನ್ನು ಅರಿತುಕೊಂಡ ತಂಡ, ಶೂಗಳನ್ನು ಕೂಲಂಕಷವಾಗಿ ಪರೀಕ್ಷಿಸುವುದಿಲ್ಲ ಎಂಬುದನ್ನು ಪತ್ತೆಹಚ್ಚಿದ್ದರು. ಹಾಗೆ ಡಿಸೆಂಬರ್ 13ರಂದು ಸಂಸತ್ ಒಳಗೆ ವೀಕ್ಷಕರಾಗಿ ಬಂದ ದುಷ್ಕರ್ಮಿಗಳು ಒಳಬರುವ ಮೊದಲೇ ಶೂನಲ್ಲಿ ಸ್ಮೋಕ್ ಬಾಂಬ್ ಅಡಗಿಸಿಟ್ಟುಕೊಂಡು ಬಂದಿದ್ದರು ಎಂದು ವರದಿ ತಿಳಿಸಿದೆ.