Advertisement

Parliament Security Breach: ಎಂಟು ಭದ್ರತಾ ಸಿಬ್ಬಂದಿ ಅಮಾನತು

11:51 AM Dec 14, 2023 | Team Udayavani |

ಹೊಸದಿಲ್ಲಿ: ಬುಧವಾರ ಲೋಕಸಭೆಯಲ್ಲಿ ನಡೆದ ಭಾರಿ ಭದ್ರತಾ ಲೋಪ ಘಟನೆಯ ಬಳಿಕ ಇದೀಗ ಲೋಕಸಭೆ ಸೆಕ್ರೆಟರಿಯೇಟ್ ಎಂಟು ಮಂದಿ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

Advertisement

ಬುಧವಾರ ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪವಾಗಿದ್ದು, ಲೋಕಸಭೆಗೆ ವೀಕ್ಷಕರ ಗ್ಯಾಲರಿಯಿಂದ ಕಲಾಪದೆಡೆಗೆ ನುಗ್ಗಿದ ಇಬ್ಬರು ಗ್ಯಾಸ್ ಕ್ಯಾನಿಸ್ಟರ್ ಗಳನ್ನು ಸಿಡಿಸಿ ಆತಂಕ ಮೂಡಿಸಿದ್ದರು.

ಘಟನೆ ಸಂಭವಿಸಿದಾಗ ಸಿಬ್ಬಂದಿಯು ಪ್ರವೇಶ ದ್ವಾರ ಮತ್ತು ಸಂಸತ್ ಭವನದ ಪ್ರವೇಶ ಪ್ರದೇಶ ಸೇರಿದಂತೆ ನಿರ್ಣಾಯಕ ಪ್ರವೇಶ ಕೇಂದ್ರಗಳಲ್ಲಿ ನಿಂತಿದ್ದರು.

ಭದ್ರತಾ ಲೋಪದ ನಂತರ, ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಗೃಹ ಸಚಿವಾಲಯವು ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿದೆ, ತನಿಖೆಯ ನೇತೃತ್ವ ವಹಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಮುಖ್ಯಸ್ಥರನ್ನು ನೇಮಿಸಿದೆ.

ಇದನ್ನೂ ಓದಿ:Rajya Sabha; ಋತುಸ್ರಾವ ಅಂಗವಿಕಲತೆಯಲ್ಲ: ವೇತನ ಸಹಿತ ಮುಟ್ಟಿನ ರಜೆಗೆ ಸ್ಮೃತಿ ಇರಾನಿ ವಿರೋಧ

Advertisement

ಏನಾಯ್ತು?: ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ ಶರ್ಮಾ ಹಾಗೂ ಮನೋರಂಜನ್‌ ಸುಮಾರು 10ರಿಂದ 12 ಅಡಿ ಎತ್ತರದಿಂದ ಸಂಸದರು ಕುಳಿತಿದ್ದ ಟೇಬಲ್‌ ಮೇಲೆ ಜಿಗಿದಿದ್ದಾರೆ

ಹಿಡಿಯಲು ಯತ್ನಿಸಿದಾಗ ಒಂದು ಟೇಬಲ್‌ನಿಂದ ಮತ್ತೂಂದು ಟೇಬಲ್‌ ಮೇಲೆ ಜಿಗಿಯುತ್ತ ಹುಚ್ಚಾಟ ಮೆರೆದಿದ್ದಾರೆ. ಸಭಾಪತಿ ಕೊಠಡಿಯತ್ತ ಓಡಲು ಯತ್ನಿಸಿದ್ದಲ್ಲದೇ, ಅರೆಕ್ಷಣದಲ್ಲಿ ತಮ್ಮ ಶೂಗಳಡಿ ಬಚ್ಚಿಟ್ಟು ತಂದಿದ್ದ ಗ್ಯಾಸ್‌ ಕ್ಯಾನಿಸ್ಟರ್‌ (ಹೊಗೆ ಬಾಂಬ್‌) ಹೊರ ತೆಗೆದು ಸ್ಪ್ರೇ ಮಾಡಿದ್ದಾರೆ. ಈ ಕ್ಯಾನಿಸ್ಟರ್‌ನಿಂದ ಹೊರ ಬಂದ ಹಳದಿ ಬಣ್ಣದ ಹೊಗೆ ಕ್ಷಣಕಾಲ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಷ್ಟರಲ್ಲೇ ಕೆಲ ಸಂಸದರು ಆಗಂತುಕರನ್ನು ಹಿಡಿದು, ತದುಕಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಪೀಕರ್‌ ಓಂ ಪ್ರಕಾಶ್‌ ಬಿರ್ಲಾ ಸಂಸತ್‌ ಕಲಾಪ ವೀಕ್ಷಣೆಗೆ ನೀಡಿದ್ದ ಎಲ್ಲ ಪಾಸ್‌ಗಳನ್ನು ರದ್ದುಗೊಳಿಸಿದ್ದಾರೆ.

ಭದ್ರತಾ ಉಸ್ತುವಾರಿ ಯಾರು?

ಸಂಸತ್ತಿನ ಆವರಣ ಹಾಗೂ ಸುತ್ತಮುತ್ತಲಿನ ಸಂಸದರ ಸುರಕ್ಷತೆಯನ್ನು ಸಂಸತ್ತಿನ ಭದ್ರತಾ ಸೇವೆಗೆ ವಹಿಸಲಾಗಿದೆ. ಇದು ಒಟ್ಟಾರೆ ಸಮನ್ವಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ದೆಹಲಿ ಪೊಲೀಸ್‌, ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (ಸಿಆರ್‌ಪಿಎಫ್), ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ), ಇಂಟೆಲಿಜೆನ್ಸ್‌ ಬ್ಯೂರೋ (ಐಬಿ), ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಮತ್ತು ನ್ಯಾಷನಲ್‌ ಸೆಕ್ಯುರಿಟಿ ಗಾರ್ಡ್‌ (ಎನ್‌ಎಸ್‌ಜಿ) ನಂತಹ ವಿವಿಧ ಭದ್ರತಾ ಸಂಸ್ಥೆಗಳು ಇವೆ. ಭದ್ರತಾ ಸಿಬ್ಬಂದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. ಸಂಸತ್ತಿನ ಪರಿಧಿಯ ನಿಯಂತ್ರಣವನ್ನು ತೆಗೆದುಕೊಳ್ಳುವಾಗ ದೆಹಲಿ ಪೊಲೀಸರ ಶಾರ್ಪ್‌ಶೂಟರ್‌ಗಳು ಮತ್ತು ಎಸ್‌ ಡಬ್ಯುಎಟಿ ಕಮಾಂಡೋಗಳಿಂದ ಸಹಾಯ ಪಡೆಯುತ್ತವೆ. ಲೋಕಸಭೆಯ ಸೆಕ್ರೆಟರಿಯಟ್‌ನ ಹೆಚ್ಚುವರಿ ಕಾರ್ಯದರ್ಶಿ (ಭದ್ರತೆ) ಅವರು ಸಂಸತ್ತಿನ ಭದ್ರತಾ ಸೇವೆ, ದೆಹಲಿ ಪೊಲೀಸ್‌, ಐಟಿಬಿಪಿ, ಸಿಆರ್‌ಪಿಎಫ್‌ ಮತ್ತಿತರ ಪಡೆಗಳು ಇಡೀ ಸಂಸತ್ತಿನ ಭದ್ರತೆಯ ಉಸ್ತುವಾರಿ ವಹಿಸಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next