Advertisement

Parliament security breach case: ಮಾಸ್ಟರ್ ಮೈಂಡ್ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ

08:01 PM Dec 15, 2023 | Vishnudas Patil |

ಹೊಸದಿಲ್ಲಿ: ಆಘಾತಕಾರಿ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತನಾಗಿರುವ ಮಾಸ್ಟರ್ ಮೈಂಡ್ ಲಲಿತ್ ಝಾ ನನ್ನು ಶುಕ್ರವಾರ ದೆಹಲಿ ನ್ಯಾಯಾಲಯ 7 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ ಕಳುಹಿಸಿದೆ.

Advertisement

ವಿಶೇಷ ನ್ಯಾಯಾಧೀಶರಾದ ಹರ್ದೀಪ್ ಕೌರ್ ಅವರು ಪ್ರಾಸಿಕ್ಯೂಷನ್ ಸಲ್ಲಿಸಿದ ಅರ್ಜಿಯ ಮೇರೆಗೆ ಝಾ ನನ್ನು ದೆಹಲಿ ಪೋಲೀಸರ ಕಸ್ಟಡಿಗೆ ಒಪ್ಪಿಸಿದ್ದಾರೆ. ಸಂಪೂರ್ಣ ಪಿತೂರಿಯನ್ನು ಬಹಿರಂಗಪಡಿಸಲು ಅವನನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ತಮ್ಮ ಮೂಲ ಯೋಜನೆಯು ವಿಫಲವಾಗಿ ಸಂಸತ್ತನ್ನು ತಲುಪಲು ಸಾಧ್ಯವಾಗದಿದ್ದರೆ ಪ್ಲಾನ್ ಬಿ ಹೊಂದಿದ್ದರು ಎಂದು ಪ್ರಮುಖ ಸಂಚುಕೋರ ಲಲಿತ್ ಝಾ ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.

ಕೆಲವು ಕಾರಣಗಳಿಂದ ನೀಲಂ ಮತ್ತು ಅಮೋಲ್ ಅವರು ಪ್ಲಾನ್ ಎ ಪ್ರಕಾರ ಸಂಸತ್ತಿನ ಬಳಿಗೆ ಬರಲು ಸಾಧ್ಯವಾಗದಿದ್ದರೆ, ಮಹೇಶ್ ಮತ್ತು ಕೈಲಾಶ್ ಮತ್ತೊಂದು ದಿಕ್ಕಿನಿಂದ ಸಂಸತ್ತಿಗೆ ಬಂದು ಬಣ್ಣದ ಬಾಂಬ್‌ಗಳನ್ನು ಹೊತ್ತಿಸಿ ಮಾಧ್ಯಮಗಳ ಕೆಮೆರಾಗಳ ಮುಂದೆ ಘೋಷಣೆಗಳನ್ನು ಕೂಗುವುದಾಗಿತ್ತು ಎಂದು ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next