Advertisement

60 ಹಳೆ ಕಾನೂನು ರದ್ದು ಮಾಡುವ ಮಸೂದೆ ಸಂಸತ್‌ನಲ್ಲಿ ಮಂಡನೆ

12:57 AM Dec 20, 2022 | Team Udayavani |

ಹೊಸದಿಲ್ಲಿ: ಕಡಲ್ಗಳ್ಳತನಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ವಿಧಿಸಲು ಅವಕಾಶ ಇರುವ ಮಸೂದೆ ಲೋಕಸಭೆಯಲ್ಲಿ ಸೋಮವಾರ ಅಂಗೀಕಾರವಾಗಿದೆ.

Advertisement

ಕಡಲ್ಗಳ್ಳತನ ನಿಗ್ರಹ ಮಸೂದೆಯನ್ನು ಲೋಕಸಭೆ ಸ್ಪೀಕರ್‌ ಧ್ವನಿ ಮತಕ್ಕೆ ಹಾಕಿದ್ದು, ಅದು ಅಂಗೀಕಾರವಾಗಿದೆ. “ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ಶಿಕ್ಷೆಯಾಗಬೇಕು ಎಂಬ ಸುಪ್ರೀಂ ಕೋರ್ಟ್‌ ಅವಲೋಕನವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮರಣದಂಡನೆ ವಿಧಿಸುವ ದೃಷ್ಟಿಯಿಂದ ಅನೇಕ ರಾಷ್ಟ್ರಗಳು ಆರೋಪಿ ಗಳನ್ನು ಹಸ್ತಾಂತರಿಸುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಜೀವಾವಧಿ ಶಿಕ್ಷೆಯ ಆಯ್ಕೆಯನ್ನು ಸರಕಾರ ಸೇರಿಸಿದೆ,’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದರು.

ಕಡಲ್ಗಳ್ಳತನ ನಿಗ್ರಹ ಮಸೂದೆಯನ್ನು 2019ರಲ್ಲಿ ಪ್ರಸ್ತಾವಿಸಲಾಗಿತ್ತು. ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಗಾದ ಅನಂತರ ಸರಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿಗಳನ್ನು ತಂದಿತ್ತು.

10.09 ಲಕ್ಷ ಕೋಟಿ ಸಾಲ ಮನ್ನಾ: ಕಳೆದ 5 ಹಣಕಾಸು ವರ್ಷಗಳಲ್ಲಿ ಷೆಡ್ನೂಲ್ಡ್‌ ವಾಣಿಜ್ಯ ಬ್ಯಾಂಕ್‌ಗಳು ಒಟ್ಟು 10,09,511 ಕೋಟಿ ರೂ. ಸಾಲ ಮನ್ನಾ ಮಾಡಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಜತೆಗೆ ಸಾಲಗಾರರಿಂದ ಬಾಕಿ ಮೊತ್ತವನ್ನು ವಸೂಲು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದೂ ತಿಳಿಸಿದ್ದಾರೆ.

ಉಕ್ಕು ಉತ್ಪಾದನೆ ದಾಖಲೆ: ಭಾರತದ ಉಕ್ಕು ಉತ್ಪಾದನೆಯು ಐತಿಹಾಸಿಕ ಮಟ್ಟಕ್ಕೇರಿದ್ದು, ಪ್ರತೀ ವರ್ಷ 120 ದಶಲಕ್ಷ ಟನ್‌ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ಭಾರತವು ಜಗತ್ತಿನಲ್ಲೇ 2ನೇ ಅತೀದೊಡ್ಡ ಉಕ್ಕು ಉತ್ಪಾದಕ ದೇಶ ಎಂಬ ಹೆಗ್ಗಳಿಕೆ ಗಳಿಸಿದೆ ಎಂದು ರಾಜ್ಯಸಭೆಗೆ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮಾಹಿತಿ ನೀಡಿದ್ದಾರೆ.

Advertisement

ಹಳೆ ಕಾನೂನು ರದ್ದು?
137 ವರ್ಷಗಳ ಹಿಂದೆ ಜಾರಿಯಾದ ಒಂದು ಕಾನೂನು ಸಹಿತ ಒಟ್ಟಾರೆ 60ರಷ್ಟು ಹಳೆಯ ಕಾನೂನುಗಳನ್ನು ರದ್ದು ಮಾಡುವಂಥ ಮಸೂ ದೆ ಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇದು ಅಂಗೀಕಾರಗೊಂಡರೆ 1885ರ ಭೂಸ್ವಾಧೀನ(ಗಣಿ) ಕಾಯ್ದೆ, ಟೆಲಿಗ್ರಾಫ್ ವಯರ್ಸ್‌ ಕಾಯ್ದೆ 1950 ಸಹಿತ 60 ಕಾನೂನುಗಳು ರದ್ದಾಗಲಿವೆ.

ಕೆಲವು ಎಡಪಂಥೀಯ ಹೋರಾಟ ಗಾರರು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದೇಶದ ಸಾಂಸ್ಕೃತಿಕ ಮೌಲ್ಯಕ್ಕೆ ವಿರುದ್ಧವಾದ ಆದೇಶವನ್ನು ನ್ಯಾಯಾಂಗವು ನೀಡಬಾರದು. ಇದು ಸಾಮಾಜಿಕ ಮಹತ್ವದ ಸಂಗತಿಯಾಗಿದ್ದು ಇಬ್ಬರು ಜಡ್ಜ್ಗಳು ಕುಳಿತು ನಿರ್ಧರಿಸುವ ವಿಚಾರವಲ್ಲ.
-ಸುಶೀಲ್‌ ಮೋದಿ, ಬಿಜೆಪಿ ರಾಜ್ಯಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next