Advertisement
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಬುಧವಾರ ಕೇಂದ್ರ ಸರಕಾರ ಗರಂ ಆಗಿದೆ. ಪ್ರಹ್ಲಾದ್ ಜೋಷಿ, ಪಿಯೂಷ್ ಗೋಯಲ್, ಸ್ಮತಿ ಇರಾನಿ ಸೇರಿದಂತೆ ಬಿಜೆಪಿ ನಾಯಕರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಆಡಳಿತಾರೂಢ ಮತ್ತು ವಿಪಕ್ಷಗಳ ನಾಯಕರ ನಡುವೆ ವಾಗ್ವಾದ ನಡೆದಿದೆ.
Related Articles
Advertisement
ಜಿಎಸ್ಟಿ ಅತ್ಯಂತ ಕ್ರೂರ ಕ್ರಮ: ಕಾಂಗ್ರೆಸ್ದೇಶದಲ್ಲಿ ಹಣದುಬ್ಬರ ತೀವ್ರವಾಗಿದೆ, ನಿರುದ್ಯೋಗವೂ ಹೆಚ್ಚಾಗಿದೆ. ಇಂತಹ ಹೊತ್ತಿನಲ್ಲಿ ಕೇಂದ್ರ ಸರಕಾರ ಅಗತ್ಯವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಿಸಿರುವುದು ಅತ್ಯಂತ ಕ್ರೂರ ಹೆಜ್ಜೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಮೋದಿ ಸರಕಾರ ಜನರ ಆಸೆಗಳ ಮೇಲೆ ಪ್ರಹಾರ ನಡೆಸಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಶೇ.7ಕ್ಕಿಂತ ಹೆಚ್ಚಾಗಿದೆ, ಸಗಟು ಸೂಚ್ಯಂಕ ಶೇ.15ದಾಟಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಈ ಹೊತ್ತಿನಲ್ಲಿ ಜಿಎಸ್‌ಟಿ ಹೆಚ್ಚಿಸಿರುವುದು ಅತ್ಯಂತ ಕ್ರೂರ ಕ್ರಮ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ. ಸಂಸತ್‌ಗೆ ಸರಕಾರದ ಮಾಹಿತಿ
2016ರಿಂದ 2020ರ ವರೆಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ 24,134 ಮಂದಿಯ ಬಂಧನ. ಆದರೆ ದೋಷಿಗಳೆಂದು ಸಾಬೀತಾಗಿದ್ದು 212 ಮಂದಿ ಮಾತ್ರ. ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿದಂತೆ ಸಿಎಪಿಎಫ್ ನಲ್ಲಿ ಅಗ್ನಿವೀರರಿಗೆ ಶೇ.10 ಮೀಸ ಲಾತಿ ಕಲ್ಪಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಲಕ್ಷದ್ವೀಪ ಹೊರತುಪಡಿಸಿ ದೇಶದ ಉಳಿದೆಡೆ ಒಟ್ಟು 13 ಲಕ್ಷ ವಿದ್ಯುತ್‌ಚಾಲಿತ ವಾಹನಗಳ ನೋಂದಣಿ ಗಣತಿ ವೇಳೆ ಸಂಗ್ರಹಿಸಲಾದ ವೈಯಕ್ತಿಕ ಮಾಹಿತಿ ಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸು ವುದಿಲ್ಲ ಅಥವಾ ಎನ್‌ಆರ್‌ಸಿಯಂಥ ದತ್ತಾಂಶ ಸಂಗ್ರಹದಲ್ಲೂ ಬಳಕೆ ಮಾಡುವುದಿಲ್ಲ 2019ರ ಆಗಸ್ಟ್‌ನಿಂದ ಈವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 118 ನಾಗರಿಕರು ಹತ್ಯೆಗೀಡಾಗಿ ದ್ದಾರೆ. ಈ ಪೈಕಿ 21 ಮಂದಿ ಹಿಂದೂಗಳು. 2021-22ರಲ್ಲಿ ಯುಪಿಎಸ್‌ಸಿ 4,119 ಅಭ್ಯರ್ಥಿ ಗಳನ್ನು ಮಾತ್ರ ಸರಕಾರಿ ಉದ್ಯೋಗಕ್ಕೆ ಶಿಫಾರಸು