Advertisement

ಇಂಡಿಯಾ ಗೇಟ್‌ಗಿಂತ ಎತ್ತರದ ಕಟ್ಟಡ ನಿರ್ಮಾಣಕ್ಕೆ ಬ್ರೇಕ್‌

10:21 AM Jan 02, 2020 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮಂದೆ 42 ಮೀಟರ್‌ಗಿಂತ ಎತ್ತರದ ಕಟ್ಟಡ ನಿರ್ಮಿಸುವಂತಿಲ್ಲ. ಕೇಂದ್ರೀಯ ಭಾಗದಲ್ಲಿ ಕೇಂದ್ರ ಸರ್ಕಾರದ ಸಚಿವಾಲಯಗಳು, ನೂತನ ಸಂಸತ್‌ ಭವನ, ರಾಜಪಥವನ್ನು ನವೀಕರಣಗೊಳಿಸಲಾಗುತ್ತಿದ್ದು, ಎಲ್ಲ ಕಟ್ಟಡಗಳು ಕೂಡ ಏಕರೂಪತೆಯಿಂದ ಕೂಡಿರಲು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

Advertisement

ಐತಿಹಾಸಿಕ ದೆಹಲಿ ಗೇಟ್‌ 42 ಮೀಟರ್‌ ಎತ್ತರವಿದ್ದು, ಮುಂದೆ ನಿರ್ಮಾಣವಾಗುವ ಯಾವುದೇ ಕಟ್ಟಡಗಳು ಇದಕ್ಕಿಂತ ಒಂದು ಇಂಚು ಎತ್ತರ ಕೂಡ ಇರುವಂತಿಲ್ಲ.

ಈ ಮೂರು ಕಟ್ಟಡಗಳ ನಿರ್ಮಾಣದ ಗುತ್ತಿಗೆ ಗುಜರಾತ್‌ ಮೂಲದ ಎಚ್‌ಸಿಪಿ ಡಿಸೈನ್‌ ಸಂಸ್ಥೆಗೆ ನೀಡಲಾಗಿದೆ. 2022ಕ್ಕೆ 75ನೇ ಸ್ವಾತಂತ್ರೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಸತ್‌ ಭವನವನ್ನು ಈ ಅವಧಿಯೊಳಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಉಳಿದ ಕಟ್ಟಡಗಳನ್ನು 2024ಕ್ಕೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಸುಮಾರು 12 ಸಾವಿರ ಕೋಟಿ ರೂ.ವೆಚ್ಚದ ಯೋಜನೆ ಇದಾಗಿದೆ.

ರಾಷ್ಟ್ರಪತಿ ಭವನವು 345 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ 60 ಎಕರೆಯಲ್ಲಿ ಜೈವಿಕ ಉದ್ಯಾನ ನಿರ್ಮಿಸಲು ಪ್ರಸ್ತಾವನೆ ಇದೆ. ಜೊತೆಗೆ ಉಪರಾಷ್ಟ್ರಪತಿ ಹಾಗೂ ಪ್ರಧಾನಿ ನಿವಾಸವನ್ನು ಕೂಡ ನವೀಕರಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next