Advertisement

ಸಂಸತ್‌ ಭವನ‌ಕ್ಕೆ ಎಲ್‌ಇಡಿ ಬೆಳಕು!

12:04 AM Aug 12, 2019 | Sriram |

ಹೊಸದಿಲ್ಲಿ: ಸಂಸತ್‌ ಭವನವನ್ನು ಇನ್ನಷ್ಟು ಅಂದವಾಗಿಸುವ ನಿಟ್ಟಿನಲ್ಲಿ ಐತಿಹಾಸಿಕ ಕಟ್ಟಡದ ಮುಂಭಾಗಕ್ಕೆ 800ಕ್ಕೂ ಹೆಚ್ಚು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ಈ ದೀಪಗಳು ಬೆಳಕಿನ ಬಣ್ಣವನ್ನೂ ಬದಲಿಸುವ ಸಾಮರ್ಥ್ಯ ಹೊಂದಿವೆ. ಈ ದೀಪಾಲಂಕಾರವನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಎಲ್ಲ ಸಂಸದರನ್ನು ಆಹ್ವಾನಿಸಲಾಗಿದೆ.

Advertisement

ಸಂಸತ್‌ ಭವನದ ಮುಂಭಾಗಕ್ಕೆ ಒಟ್ಟು 875 ಎಲ್‌ಇಡಿಗಳನ್ನು ಅಳವಡಿಸಲಾಗಿದ್ದು, ಇವು ಇತರ ವಿಧದ ಬಲ್ಬ್ಗಳಿಗೆ ಹೋಲಿಸಿದರೆ ಐದನೇ ಒಂದರಷ್ಟು ಇಂಧನವನ್ನು ಬಳಸುತ್ತವೆ. ಈ ಮಧ್ಯೆ ಹೊಸ ಸಂಸತ್‌ ಭವನವನ್ನು ನಿರ್ಮಾಣ ಮಾಡುವ ಪ್ರಸ್ತಾವವನ್ನು ಪರಿಗಣಿಸಲಾಗಿದೆ. ಆದರೆ ಇದಕ್ಕೆ ಅಂತಿಮ ನಿರ್ಧಾರವನ್ನು ಸರಕಾರವೇ ಕೈಗೊಳ್ಳಬೇಕಿದೆ ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next