Advertisement

BJP ಆಡಳಿತದಲ್ಲಿ ಪಾರ್ಲಿಮೆಂಟ್, ಗಡಿ, ಸಮಾಜ ಯಾವುದೂ ಸುರಕ್ಷಿತವಿಲ್ಲ: ಪ್ರಿಯಾಂಕಾ

06:21 PM Dec 21, 2023 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸ್ವತಃ ಕುಳಿತುಕೊಳ್ಳುವ ಸಂಸತ್ತು ಕೂಡ ಇನ್ನು ಮುಂದೆ ಸುರಕ್ಷಿತವಾಗಿಲ್ಲ, ಆದರೆ ಪ್ರಶ್ನೆಗಳನ್ನು ಕೇಳಿದ ನಂತರ ಸುಮಾರು 150 ಸಂಸದರನ್ನು ಅಮಾನತುಗೊಳಿಸಲಾಗಿದೆ.ಬಿಜೆಪಿ ಆಡಳಿತದಲ್ಲಿ ಸಂಸತ್ತು, ಗಡಿಗಳು, ರಸ್ತೆಗಳು, ಸಮಾಜ, ಯಾವುದೂ ಸುರಕ್ಷಿತವಾಗಿಲ್ಲ ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗುರುವಾರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ “ಮಣಿಪುರ ಹಿಂಸಾಚಾರದಲ್ಲಿ ಹತ್ಯೆಗೀಡಾಗಿದ್ದ ಜನರನ್ನು ಎಂಟು ತಿಂಗಳ ನಂತರ ಅಂತ್ಯ ಸಂಸ್ಕಾರ ಮಾಡಲಾಯಿತು. ಮಣಿಪುರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದಾಗ, ಸರಕಾರವು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬದಲು ಅಸಮಂಜಸ ಉತ್ತರಗಳನ್ನು ನೀಡಿತು” ಎಂದು ಆರೋಪಿಸಿದ್ದಾರೆ.

ಮಣಿಪುರ ಹಿಂಸಾಚಾರದಲ್ಲಿ ಬಲಿಯಾದ 87 ಕುಕಿ ಜನರ ಮೃತದೇಹಗಳನ್ನು ಮಣಿಪುರದ ಚುರಾಚಂದ್‌ಪುರ ಜಿಲ್ಲಾ ಕೇಂದ್ರದಲ್ಲಿ ಬುಧವಾರ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ ಬಳಿಕ ಪ್ರಿಯಾಂಕಾ ಪೋಸ್ಟ್ ಮಾಡಿದ್ದಾರೆ.

ಡಿಸೆಂಬರ್ 14 ರಂದು ಇಂಫಾಲ್‌ನ ವಿವಿಧ ಶವಾಗಾರಗಳಿಂದ 46 ಮೃತದೇಹಗಳನ್ನು ಚುರಾಚಂದ್‌ಪುರ ಜಿಲ್ಲಾ ಆಸ್ಪತ್ರೆಯಿಂದ ವಿಮಾನದಲ್ಲಿ ತರಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next