Advertisement

ಬಾಡಿಗೆ ತಾಯ್ತನ ನಿಯಂತ್ರಣ ವಿಧೇಯಕಕ್ಕೆ ಸಂಸತ್‌ ಒಪ್ಪಿಗೆ

06:00 AM Dec 20, 2018 | |

ನವದೆಹಲಿ: ದೇಶದಲ್ಲಿ ವಾಣಿಜ್ಯ ರೂಪದ  ಬಾಡಿಗೆ ತಾಯ್ತನ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಜಾರಿಗೆ ತರಲು ಬಾಡಿಗೆ ತಾಯ್ತನ (ನಿಯಂತ್ರಣ) ವಿಧೇಯಕಕ್ಕೆ ಬುಧವಾರ ಲೋಕಸಭೆ ಅನುಮೋದನೆ ನೀಡಿದೆ. 

Advertisement

ಪ್ರತಿಪಕ್ಷಗಳು ವಿವಿಧ ವಿಚಾರಕ್ಕೆ ಗದ್ದಲ ಎಬ್ಬಿಸುತ್ತಿದ್ದರೂ ಗಲಾಟೆಯ ನಡುವೆ ಒಂದು ಗಂಟೆ ಕಾಲ ಚರ್ಚೆ ನಡೆದು ಅಂಗಿ àಕೃತಗೊಂಡಿದೆ. ಹೊಸ ವಿಧೇಯಕದ ಪ್ರಕಾರ ಸಮೀಪ ಸಂಬಂಧಿಗಳು ಮಾತ್ರ ಬಾಡಿಗೆ ತಾಯ್ತನವನ್ನು ಹೊಂದಬಹುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಇದೊಂದು ಐತಿಹಾಸಿಕ ಕಾಯ್ದೆ ಎಂದು ಬಣ್ಣಿಸಿದ್ದಾರೆ.

ಹೊಸ ವಿಧೇಯಕದ ಪ್ರಕಾರ ಮಕ್ಕಳಿಲ್ಲದ ದಂಪತಿ, ಕಾನೂನು ಬದ್ಧವಾಗಿ ವಿವಾಹವಾಗಿ ಐದು ವರ್ಷ ಕಳೆದ ದಂಪತಿ ನಿಕಟ ಬಂಧುವಿನ ಮೂಲಕ ಬಾಡಿಗೆ ತಾಯ್ತನ ಮಾರ್ಗದ ಮೂಲಕ ಮಗು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಮಹಿಳೆ ಅಥವಾ ಪುರುಷ, ಸಲಿಂಗ ಸಂಬಂಧ ಹೊಂದಿರು ವವರು, ಸಹ ವಾಸಿಗಳು (ಲಿವ್‌ ಇನ್‌ ರಿಲೇ ಶನ್‌ಶಿಪ್‌) ಬಾಡಿಗೆ ತಾಯ್ತನ ಹೊಂದಲು ಅರ್ಹರಾಗಿರುವುದಿಲ್ಲ.
 
ನಡೆಯದ ಕಲಾಪ: ಈ ನಡುವೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ರಿತಿಯಲ್ಲಿ ಕಲಾಪ ನಡೆಸಲು ಬುಧವಾರ ಸಾಧ್ಯವಾಗಲೇ ಇಲ್ಲ. ಹೀಗಾಗಿ, 2 ಸದನಗಳ ಕಲಾಪಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಈ ಮಧ್ಯೆ ಡಿ.24 ರಿಂದ ಡಿ.26 ರವರೆಗೆ ಕ್ರಿಸ್‌ಮಸ್‌ ಪ್ರಯುಕ್ತ ರಾಜ್ಯಸಭೆಗೆ ರಜೆ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next