Advertisement
ಹೌದು, ಬಂಧಿತರಾದ ಐವರು ಆರೋಪಿಗಳ ವಿಚಾರಣೆ ವೇಳೆ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸದನದೊಳಗೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು, ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣವು ಇಂದು ನಿನ್ನೆ ನಡೆದ ಸಂಚು ಅಲ್ಲ. ಸುಮಾರು ಒಂದೂವರೆ ವರ್ಷದ ಹಿಂದೆಯೇ ಎಲ್ಲ 6 ಆರೋಪಿಗಳೂ ಮೈಸೂರಿನಲ್ಲಿ ಭೇಟಿಯಾಗಿ, ಈ ಕುರಿತು ಚರ್ಚೆ ನಡೆಸಿದ್ದರು. ಇವರೆಲ್ಲರೂ “ಭಗತ್‌ಸಿಂಗ್ ಫ್ಯಾನ್ ಕ್ಲಬ್’ ಎಂಬ ಫೇಸ್‌ಬುಕ್ ಪೇಜ್‌ನ ಭಾಗವಾಗಿದ್ದರು. 9 ತಿಂಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಮತ್ತೆ ಭೇಟಿಯಾಗಿದ್ದ ಆರೋಪಿ ಗಳು 2ನೇ ಸುತ್ತಿನ ಮಾತುಕತೆ ನಡೆಸಿ, ಯೋಜನೆ ಅಂತಿಮಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
– ಭಗತ್ ಸಿಂಗ್ ಫ್ಯಾನ್ ಕ್ಲಬ್ ಫೇಸ್‌ಬುಕ್ ಪೇಜ್ ಮೂಲಕ ಆರೋಪಿಗಳು ಪರಸ್ಪರ ಸಂಪರ್ಕ.
– ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲಿ ಆರೋಪಿಗಳ ಮೊದಲ ಭೇಟಿ; ಸಂಚಿನ ಬಗ್ಗೆ ಚರ್ಚೆ.
– 9 ತಿಂಗಳ ಹಿಂದೆ ಚಂಡೀಗಢದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮತ್ತೂಂದು ಸುತ್ತಿನ ಮಾತುಕತೆ
– ಈ ವರ್ಷದ ಜುಲೈ ತಿಂಗಳಿನಲ್ಲಿ ಸಂಸತ್ ಪ್ರವೇಶಿಸಲು ಆರೋಪಿ ಸಾಗರ್ ನಡೆಸಿದ ಯತ್ನ ವಿಫಲ.
– ಸಂಸತ್ ಭವನದ ಹೊರಗಿನಿಂದಲೇ ಭದ್ರತ ತಪಾಸಣೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದ್ದ ಸಾಗರ್.
– ದಿಲ್ಲಿ ತಲುಪಿ, ಗುರುಗ್ರಾಮದಲ್ಲಿ ತಂಗಿದ್ದ ಆರೋಪಿಗಳು.
– ಇಂಡಿಯಾ ಗೇಟ್ ಸಮೀಪ ಪರಸ್ಪರ ಗ್ಯಾಸ್ ಕ್ಯಾನಿಸ್ಟರ್‌ಗಳ ಹಂಚಿಕೆ.
– ಮಹಾರಾಷ್ಟ್ರದಿಂದ ಕ್ಯಾನಿಸ್ಟರ್‌ಗಳನ್ನು ತಂದಿದ್ದ ಅಮೋಲ್ ಶಿಂಧೆ.
– ಸಂಸತ್ತಿನೊಳಗೆ ಪ್ರವೇಶಿಸಿದ್ದ ಸಾಗರ್, ಮನೋರಂಜನ್.
– ಹೊರಗೆ ಉಳಿದು ಪ್ರತಿಭಟನೆಗೆ ನಿರ್ಧರಿಸಿದ ನೀಲಂ, ಶಿಂಧೆ.