Advertisement

82 ವರ್ಷದ ದಾಖಲೆ ಮುರಿದ ಪಾರ್ಲೆ ಜಿ: ಲಾಕ್ ಡೌನ್ ಸಮಯದಲ್ಲಿ ಗರಿಷ್ಠ ಮಾರಾಟ !

12:00 PM Jun 10, 2020 | Mithun PG |

ನವದೆಹಲಿ: ಲಾಕ್‍ ಡೌನ್ ಸಮಯದಲ್ಲಿ ಎಲ್ಲರ ನೆಚ್ಚಿನ  ಪಾರ್ಲೆ ಜಿ ಬಿಸ್ಕೆಟ್ ತನ್ನದೇ  82 ವರ್ಷಗಳ ದಾಖಲೆಯನ್ನು ಪುಡಿಗಟ್ಟಿ ಇತಿಹಾಸ ರಚಿಸಿದೆ.  ದೇಶಾದ್ಯಂತ ಕೋವಿಡ್ ಕಾರಣದಿಂದ ಸಂಫೂರ್ಣ ಲಾಕ್ ಡೌನ್ ವಿಧಿಸಲಾಗಿತ್ತು. ಈ ವೇಳೆ ಪಾರ್ಲೆ ಜಿ ಬಿಸ್ಕತ್ತು ಗಳೂ ಅತೀ ಹೆಚ್ಚು ಮಾರಾಟ ಕಂಡು ವಿಶಿಷ್ಟ ದಾಖಲೆ ಮಾಡಿದೆ.

Advertisement

ಲಾಕ್ ಡೌನ್ ಕಾರಣದಿಂದ ದೇಶಾದ್ಯಂತ ಹಲವಾರು ಉದ್ಯಮಗಳು ನಷ್ಟ ಅನುಭವಿಸಿದ್ದವು.  ಆದರೆ ಪಾರ್ಲೆ ಜಿ ಈ ಸಮಯದಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡಿದೆ. ಹೇಗೆಂದರೇ ಕೇವಲ 5-10 ರೂ.ಗಳಿಗೆ ದೊರಕುವ ಈ ಬಿಸ್ಕತ್ತು ಗಳು ಅದೆಷ್ಟೋ ಕಾರ್ಮಿಕರಿಗರಿಗೆ ಸಂಜೀವಿನಿ ಆಗಿದ್ದವು. ಕಾಲ್ನಡಿಗೆಯಲ್ಲಿ ಹೊರಟವರಿಗೆ ಈ ಬಿಸ್ಕತ್ತು ಆಸರೆಯಾದರೆ, ಇನ್ನು ಹಲವಾರು ಜನರು ಲಾಕ್ ಡೌನ್ ಸಮಯದಲ್ಲಿ ಆಹಾರ ಕೊರತೆ ಉಂಟಾಗಬಹುದು ಎಂದು ಮನೆಯಲ್ಲಿ ಸಂಗ್ರಹಿಸಿದ್ದರು.  ಮಾತ್ರವಲ್ಲದೆ ಇತರ ಕಂಪೆನಿಗಳ ಬಿಸ್ಕೆಟ್ ಉತ್ಪನ್ನಗಳು ದಿಢೀರ್ ಬೆಲೆ ಹೆಚ್ಚಳವಾದ್ದರಿಂದ ಬಹುತೇಕರು ಪಾರ್ಲೆ ಜಿಯತ್ತ ಮುಖ ಮಾಡಿದ್ದರು.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಬಿಸ್ಕೆಟ್ ಹೆಚ್ಚಿನ ಮಾರಾಟ ಕಂಡಿದ್ದು 8 ದಶಕದಲ್ಲಿ ಕಂಡ ಅತ್ಯುತ್ತಮ ಬೆಳವಣಿಗೆಯಾಗಿದೆ. ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಕಾರಣ ಕಂಪೆನಿಯ ಶೇರುಗಳ ಮೌಲ್ಯ ಶೇ 5 % ಹೆಚ್ಚಳವಾಗಿದೆ.  ಮಾರಾಟ ದರ ಕೂಡ ಶೇ. 80 ರಿಂದ ಶೇ. 90ಕ್ಕೆ ಏರಿಕೆಯಾಗಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ. ಅದಾಗ್ಯೂ ಕಂಪೆನಿ ನಿರ್ದಿಷ್ಟ ಮಾರಾಟ ಅಂಕಿ ಅಂಶಗಳನ್ನು ಬಹಿರಂಗಪಡಿಸಿಲ್ಲ.

ಪಾರ್ಲೆ ಕಂಪೆನಿ ಪ್ರಸ್ತುತ ಭಾರತದಾದ್ಯಂತ 130 ಕಾರ್ಖಾನೆಗಳನ್ನು ಹೊಂದಿದ್ದು, ಅವುಗಳಲ್ಲಿ 120 ನಿರಂತರವಾಗಿ ಉತ್ಪಾದನೆ ನಡೆಸುತ್ತಿದೆ. ಪಾರ್ಲೆ-ಜಿ ಬ್ರಾಂಡ್ ‘ಪ್ರತಿ ಕೆ.ಜಿ.ಗೆ 100 ರೂ.ಗಿಂತ ಕಡಿಮೆ’ ಕೈಗೆಟುಕುವ ಬೆಲೆಗೆ ಸಿಕ್ಕುತ್ತದೆ. ಲಾಕ್‍ ಡೌನ್ ಸಮಯದಲ್ಲಿ ಬ್ರಿಟಾನಿಯಾದ ಗುಡ್ ಡೇ, ಟೈಗರ್, ಮಿಲ್ಕ್ ಬಿಕಿಸ್, ಬಾರ್ಬರ್ನ್ ಮತ್ತು ಮಾರಿ ಬಿಸ್ಕಟ್ ಗಳು  ಕೂಡ ಅಧಿಕ ಮಾರಾಟಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next