Advertisement
ವಿಸ್ತರಿಸಲಾದ ರಸ್ತೆಗಳು ಈಗಾಗಲೇ ಅನಧಿಕೃತ ವಾಹನ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿವೆ. ಇದೀಗ ಹೊಸದಾಗಿ ನಿರ್ಮಾಣಗೊಂಡಿರುವ ಫುಟ್‌ಪಾತ್‌ಗಳು ಕೂಡ ವಾಹನಗಳ ನಿಲುಗಡೆ ತಾಣವಾಗುತ್ತಿವೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲಿಯೇ ಅಪಾಯಕಾರಿಯಾಗಿ ನಡೆದಾಡುವ ಸ್ಥಿತಿ ಉಂಟಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಡೆಯಿಂದ ಲಾÇಬಾಗ್ ಕಡೆಗೆ, ಅಲ್ಲಿಂದ ಮುಂದಕ್ಕೆ ಬಲ್ಲಾಳ್‌ಬಾಗ್ ಕಡೆಗೆ ಬರುವ ರಸ್ತೆ ಪಾದಚಾರಿಗಳಿಗೆ ಅತ್ಯಂತ ಅಪಾಯ ಕಾರಿಯಾಗಿ ಪರಿಣಮಿಸಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಪಾದಚಾರಿಗಳು ಆರಂಭದಲ್ಲಿ ಫುಟ್‌ಪಾತ್ ಇಲ್ಲದೇ ತೊಂದರೆಗೆ ಸಿಲುಕುತ್ತಾರೆ. ಇಲ್ಲಿ ರಸ್ತೆ ವಿಸ್ತರಣೆಯಾದರೂ ಫುಟ್‌ಪಾತ್ ನಿರ್ಮಾಣವಾಗಿಲ್ಲ. ವಿಸ್ತರಣೆಗೊಂಡ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಯಾಗಿ ನಿಲ್ಲಿಸಲಾಗುತ್ತದೆ. ಪಾಲಿಕೆ ಕಚೇರಿ ಕಟ್ಟಡದ ಎದುರಿನ ಕಟ್ಟಡದ ಪಕ್ಕದಿಂದ ಮುಂದೆ ಸುವ್ಯವಸ್ಥಿತ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ ಫುಟ್‌ಪಾತ್‌ನ್ನು ಸಂಪೂರ್ಣವಾಗಿ ವಾಹನಗಳು ಆಕ್ರಮಿಸಿಕೊಂಡಿರುತ್ತವೆ. ಫುಟ್‌ಪಾತ್‌ಗೆ ತಡೆ
ಕೆಲವು ಕಟ್ಟಡಗಳು/ವಾಣಿಜ್ಯ ಮಳಿಗೆಗಳ ಎದುರು ಸಾಮಗ್ರಿಗಳನ್ನು ಫುಟ್‌ಪಾತ್‌ನಲ್ಲಿಯೇ ಇಟ್ಟು ಪಾದಚಾರಿಗಳು ಫುಟ್‌ಪಾತ್ ಬಳಸದಂತೆ ಮಾಡಲಾಗಿದೆ. ತಿಂಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಫುಟ್‌ಪಾತ್ ಕೂಡ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಇನ್ನು ಕೆಲವೆಡೆ ಫುಟ್‌ಪಾತ್‌ಗಳ ಮಧ್ಯೆ ರಸ್ತೆಗಾಗಿ ಸ್ಥಳಾವಕಾಶ ಬಿಟ್ಟು ಸಂಪರ್ಕವೇ ಇಲ್ಲದಿರುವುದರಿಂದ ಅಂತಹ ಸ್ಥಳಗಳಲ್ಲಿಯೂ ನಡೆದಾಡುವುದು ಅಸಾಧ್ಯ.
Related Articles
ಹಲವೆಡೆ ಫುಟ್‌ಪಾತ್‌ಗಳನ್ನು ರಸ್ತೆಗೆ ಸಮತಟ್ಟಾಗಿ ನಿರ್ಮಿಸಲಾಗಿದೆ. ಹಾಗಾಗಿ ವಾಹನಗಳನ್ನು ಸುಲಭವಾಗಿ ಫುಟ್‌ಪಾತ್‌ಗಳಲ್ಲಿ ನಿಲ್ಲಿಸಲಾಗುತ್ತಿದೆ. ಇನ್ನು ಕೆಲವೆಡೆ ತುಸು ಎತ್ತರದಲ್ಲಿದ್ದರೂ ಅದು ವಾಹನಗಳು ಏರುವಷ್ಟೇ ಎತ್ತರವಿದೆ. ಫುಟ್‌ಪಾತ್‌ಗಳನ್ನು ನಿರ್ಮಿಸುವಾಗಲೇ ವಾಹನಗಳ ನಿಲುಗಡೆಗೆ ಸೂಕ್ತವಾಗಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ ಎಂದು ಅನೇಕ ಮಂದಿ ಪಾದಚಾರಿಗಳು ದೂರಿದ್ದಾರೆ.
Advertisement
ಸಂಚಾರಕ್ಕೆ ತೊಡಕುಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಫುಟ್‌ಪಾತ್‌ಗಳು ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲಿ ಜೀವಭಯದಲ್ಲೇ ನಡೆದಾಡುವುದು ಅನಿವಾರ್ಯವಾಗಿದೆ. ಅಲ್ಲದೆ ವಾಹನಗಳ ಸುಗಮ ಸಂಚಾರಕ್ಕೂ ತೊಡಕಾಗುತ್ತಿದೆ. ವಿಸ್ತರಣೆಗೊಂಡ ರಸ್ತೆಯ ಅಂಚಿನಲ್ಲಿ ವಾಹನಗಳ ಪಾರ್ಕಿಂಗ್ ಅವಕಾಶ ನೀಡಿದರೂ ಫುಟ್‌ಪಾತ್‌ಗಳನ್ನು ಮಾತ್ರ ಜನರ ಓಡಾಟಕ್ಕೆ ಮುಕ್ತವಾಗಿರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಅನಧಿಕೃತ ಪಾರ್ಕಿಂಗ್ ತೆರವು
ರಸ್ತೆ ಮಾತ್ರವಲ್ಲದೆ ಫುಟ್‌ಪಾತ್‌ಗಳನ್ನು ಆಕ್ರಮಿಸಿ ಪಾರ್ಕಿಂಗ್ ಮಾಡುವ ವಾಹನ ಸವಾರರು/ ಚಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಜನರ ಓಡಾಟಕ್ಕೆ ತೊಂದರೆಯಾಗುವಂತೆ ವಾಣಿಜ್ಯ ಮಳಿಗೆಗಳು ಸಾಮಗ್ರಿಗಳನ್ನು ಇಟ್ಟರೆ ಅಂತವರ ವಿರುದ್ಧ ಪಾಲಿಕೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.
-ನಟರಾಜ್, ಎಸಿಪಿ ಸಂಚಾರಿ ಪೊಲೀಸ್