ಬೇಲೂರು: ವಿಶ್ವ ಪ್ರಸಿದ್ಧ ಬೇಲೂರು ಚನ್ನಕೇಶವಸ್ವಾಮಿ ದೇಗುಲದಿಂದ ನಡೆಯುವ ಪಾರ್ಕಿಂಗ್ ಸುಂಕದ ಟೆಂಡರ್‌ದಾರ ಬೇಕಾಬಿಟ್ಟಿ ವಸೂಲಾತಿ ಮಾಡುತ್ತಿದ್ದು,ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗಿ ಟ್ರಾಫಿಕ್ ನಿರ್ಮಾಣ ವಾಗಿದೆ. ಸುಂಕ ವಸೂಲಾತಿಯ ಯುವಕರು ಪ್ರವಾಸಿಗರ ಮೇಲೆ ದರ್ಪದಿಂದ ವರ್ತಿಸುತ್ತಾರೆ. ತಕ್ಷಣವೇ ಸಂಬಂಧ ಪಟ್ಟವರು ಇವರ ಟೆಂಡರ್ ರದ್ದು ಪಡಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೇಲೂರು ಚನ್ನಕೇಶವ ದೇಗುಲದಿಂದ ಪ್ರತಿ ವರ್ಷ ನಡೆಯುವ ಪಾರ್ಕಿಂಗ್ ಶುಲ್ಕವನ್ನು ಟೆಂಡರ್‌ದಾ ರರಿಗೆ ವಹಿಸಲಾಗುತ್ತದೆ. ಆದರೆ ಟೆಂಡರ್‌ದಾರರು ಮಾತ್ರ ದೇಗುಲದಿಂದ ನಿಗದಿಪಡಿಸಿದ ಪಾರ್ಕಿಂಗ್ ಹೊರ ತು ಪಡಿಸಿ, ದೇಗುಲದ ಪ್ರವೇಶದ ರಸ್ತೆಯಲ್ಲಿಯೇ ಸುಂಕ ವಸೂಲಾತಿಗೆ ಮುಂದಾಗುತ್ತಾರೆ. ಈ ಕಾರಣದಿಂದ ರಸ್ತೆಯಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ದೂರದೂರಿನಿಂದ ಬರುವ ಪ್ರವಾಸಿಗರ ಮೇಲೆ ವಿನಃ ಕಾರಣ ದರ್ಪ ತೋರಿಸುತ್ತಾರೆ. ಹಲವು ಬಾರಿ ದೊಡ್ಡ ಪ್ರಮಾಣದಲ್ಲಿ ಗಲಾಟೆ ಆಗಿದೆ. ಇಷ್ಟಾದರೂ ಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದ್ದಾರೆ.
ಸಮಸ್ಯೆ ಬಗೆಹರಿಸಿ: ದೇಗುಲದಿಂದ ನಡೆಯುವ ಪಾರ್ಕಿಂಗ್ ಸುಂಕವನ್ನು ದೇವಾಲಯ ಹಿಂಭಾಗದ ಖಾಲಿ ಜಾಗದಲ್ಲಿಯೇ ನಡೆಸಬೇಕು ಎಂಬ ಆದೇಶವನ್ನುಟೆಂಡರ್‌ದಾರರಿಗೆ ನೀಡಿದ್ದಾರೆ. ಆದರೆ, ಆದೇಶ ಗಾಳಿ ತೂರಿದ್ದಾರೆ. ಇನ್ನೂ ಕನಿಷ್ಠ ಸೌಜನ್ಯಕ್ಕೂ ದೇಗುಲದ ಹತ್ತಿರಪೊಲೀಸರು ಬರುತ್ತಿಲ್ಲ. ದೊಡ್ಡ ಗಲಾಟೆ ನಡೆದರೆ ಮಾತ್ರಬರುತ್ತಾರೆ. ಇದ್ದರಿಂದ ಸಾರ್ವಜನಿಕರಿಗೆತೊಂದರೆಯಾಗುತ್ತಿದೆ. ದೂರದಿಂದ ಖಾಸಗಿ ವಾಹನಗಳಿಂದ ಬರುವ ಪ್ರವಾಸಿ ಗರು ದೇಗುಲದ ವ್ಯವಸ್ಥಾಪನಾ ಸಮಿತಿ ಹಾಗೂ ಇಲ್ಲಿನ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಜನತೆ ಎಚ್ಚರಿಕೆ ನೀಡಿದ್ದಾರೆ.
ಕಠಿಣ ಆದೇಶ ಹೊರಡಿಸುತ್ತೇವೆ: ಈ ಸಂಬಂಧ ಚನ್ನಕೇಶವ ಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ಸಮಿತಿ ಅಸ್ತಿತ್ವಕ್ಕೆಬಂದ ದಿನದಿಂದಲೇ ಇಲ್ಲಿನ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ವ್ಯಾಪಕ ದೂರ ಬಂದ ಕಾರಣ ದೇಗುಲದ ಹಿಂಭಾಗದಲ್ಲಿಯೇ ಪಾರ್ಕಿಂಗ್ ಸುಂಕ ಪಡೆಯಬೇಕೆಂದು ವಾಹನ ನಿಲುಗಡೆಗೆ ಸೂಕ್ತ ನಾಮಫಲಕ ಹಾಕಿದೆ. ಅದರೂ ಟೆಂಡರ್‌ದಾರರು ದೇಗುಲದ ಷರತ್ತು ಗಳನ್ನು ಉಲ್ಲಂಘಿಸುತ್ತಾರೆ ಎಂದು ಜನರ ದೂರು ಹಿನ್ನೆಲೆ ಸಭೆ ನಡೆಸಿ ಕಠಿಣ ಆದೇಶ ನೀಡಲಾಗುತ್ತದೆ ಎಂದರು.
ಬಿಗಿ ಕ್ರಮ ಕೈಗೊಳ್ಳುತ್ತೇವೆ: ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ಮಾತನಾಡಿ, ಟೆಂಡರ್‌ನಿಯಮದ ಪ್ರಕಾರ ಸುಂಕ ವನ್ನು ದೇಗುಲ ಹಿಂಭಾಗದಲ್ಲಿವಾಹನ ನಿಲುಗಡೆ ಸ್ಥಳದಲ್ಲಿಯೇ ಪಡೆಯಬೇಕಿದೆ.ಆದರೆ, ದೇಗುಲ ಪ್ರವೇಶ ರಸ್ತೆಯಲ್ಲಿ ಸುಂಕ ವಸೂಲಾತಿನಡೆಸುತ್ತಿರುವ ಕಾರಣದಿಂದ ಪ್ರವಾಸಿಗರು ಮತ್ತು ಸ್ಥಳೀಯರಿಗೆ ತೀವ್ರ ತೊಂದರೆ ಯಾಗುತ್ತದೆ. ಈ ಸಂಬಂಧ ವ್ಯವಸ್ಥಾಪನಾ ಸಮಿತಿ ಸಭೆ ಕರೆಯಲಾಗಿದು, ಬಿಗಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.