ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳಮೇಲೆ ಇನ್ನು ಮುಂದೆ ವಾಹನಗಳನ್ನು ನಿಲುಗಡೆಮಾಡುವುದು ಕಾನೂನುಬಾಹಿರ ಹಾಗೂ ದಂಡನಾರ್ಹ ಅಪರಾಧ ಎಂದು ಹೈಕೋರ್ಟ್ ಹೇಳಿದೆ.
ಪಾದಚಾರಿ ಮಾರ್ಗಗಳ ಮೇಲೆವಾಹನ ನಿಲುಗಡೆ ಮಾಡಿದರೆ, ಅದುಕಾನೂನು ಬಾಹಿರವಾಗುವುದಲ್ಲದೆ ಅದಕ್ಕೆದಂಡ ತೆರಬೇಕಾಗುತ್ತದೆ ಮತ್ತು ಕ್ರಿಮಿನಲ್ ಪ್ರಕರಣವನ್ನು ಎದುರಿಸಬೇಕಾಗುತ್ತದೆ. ಅಂತಹವರ ವಿರುದ್ಧ ದಂಡವಿಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದೆ.
ಬೆಂಗಳೂರಿನ ವಕೀಲರಾಮಚಂದ್ರ ರೆಡ್ಡಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಎ.ಎಸ್. ಓಕ್ ಮತ್ತು ನ್ಯಾಯಮೂರ್ತಿ ಸೂರಜ್‌ಗೋವಿಂದರಾಜ್ ಅವರನ್ನೊಳಗೊಂಡ ವಿಭಾಗೀಯನ್ಯಾಯಪೀಠ ಈ ತೀರ್ಪು ನೀಡಿದೆ.
ಕರ್ನಾಟಕ ಮೋಟಾರು ವಾಹನ ಕಾಯ್ದೆ,ಮೋಟಾರು ವಾಹನ ನಿಯಮ 2017ರ ಚಾಲನಾನಿಯಮ ಸೇರಿದಂತೆ ಹಲವು ಕಾಯ್ದೆ ಮತ್ತುನಿಯಮಗಳನ್ನು ಉಲ್ಲೇಖೀಸಿದನ್ಯಾಯಪೀಠ, ಪುಟ್‌ಪಾತ್‌ಗಳಿರುವುದುಪಾದಚಾರಿಗಳಿಗಾಗಿ, ಪಾದಚಾರಿಗಳುಯಾವುದೇ ಅಡೆತಡೆ ಇಲ್ಲದೆ ಸುರಕ್ಷಿತವಾಗಿನಡೆದಾಡುವುದ ಕ್ಕಾಗಿ, ಆ ಜಾಗದಲ್ಲಿವಾಹನಗಳ ಪಾರ್ಕಿಂಗ್ ಮಾಡುವುದುಕಾನೂನು ಬಾಹಿರ” ಎಂದು ಆದೇಶಿಸಿತು.
ಅಲ್ಲದೆ ಪಾದಚಾರಿ ಮಾರ್ಗಗಳ ಮೇಲೆ ವಾಹನನಿಲುಗಡೆ ಮಾಡಿದವರ ವಿರುದ್ಧ ದಂಡನಾಕ್ರಮವನ್ನು ಕೈಗೊಳ್ಳಲು ಪೊಲೀಸರಿಗೆ ಮತ್ತುಬಿಬಿಎಂಪಿಗೆ ಸೂಕ್ತ ಆದೇಶವನ್ನು ನೀಡಬೇಕು ಎಂದುಸರ್ಕಾರಕ್ಕೆ ನಿರ್ದೇಶನ ನೀಡಿದೆ.