Advertisement

ಪರ್ಕಳ: ಕೆಸರುಗದ್ದೆ ಕ್ರೀಡಾಕೂಟ

07:00 AM Jul 24, 2017 | Team Udayavani |

ಉಡುಪಿ: ಕರಾವಳಿಯ ನೆಲ-ಜಲ-ಪರಿಸರ – ಪ್ರಕೃತಿಯಲ್ಲಿ  ಔಷಧೀಯ  ಗುಣವಿದೆ. ಅಧ್ಯಯನ ಮಾಡಲು ಕೋಲ, ಕಂಬಳ, ಕೋಳಿಕಟ್ಟಗಳಂತಹ ಹಲವಾರು ಕ್ರೀಡೆ, ಜನಪದ ಕಲೆಗಳಿವೆ. ಇದು ವಿಶ್ವದ ಜನರನ್ನು   ಆಕರ್ಷಿತಗೊಳಿಸುತ್ತಿದೆ ಎಂದು ಜೆಸಿಐ ಪೂರ್ವ ವಲಯ ಅಧ್ಯಕ್ಷ ಇನ್ನಾ ಉದಯಕುಮಾರ್‌ ಶೆಟ್ಟಿ  ಹೇಳಿದರು. 

Advertisement

ಅವರು ಜು. 23 ರಂದು  ಪರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುವರ್ಣ ಮಹೋತ್ಸವದ  ಸುವರ್ಣ ಸಂಗಮದ ಅಂಗವಾಗಿ ಜೆಸಿಐ ಪರ್ಕಳದ ಸಹಕಾರದೊಂದಿಗೆ ಕೆಸರª ಗೊಬ್ಬುಲು ವಿವಿಧ ರೀತಿಯ ಕೆಸರುಗದ್ದೆ  ಕ್ರೀಡಾ ಕೂಟದಲ್ಲಿ ಮಾತನಾಡಿದರು. 

ತುಳುನಾಡ ಯುವಕರು ಯಾವುದಕ್ಕೂ ಬಗ್ಗುವುದಿಲ್ಲ. ಅವರಲ್ಲಿ ಉತ್ತಮ ಸಾಮರ್ಥ್ಯ, ಬುದ್ಧಿ ಶಕ್ತಿ, ವಿದ್ಯೆ ಇದೆ. ವಿಶ್ವದಲ್ಲಿ ಎಲ್ಲಿಗೇ ಹೋದರೂ ಬದುಕಬಲ್ಲರು. ಆದರೆ ದುಶ್ಚಟ ಎಂಬ ದೌರ್ಬಲ್ಯ ಅವರನ್ನು  ಬಗ್ಗಿಸುತ್ತಿದೆ ಎಂದರು.
  
ಕ್ರೀಡಾಕೂಟವನ್ನು ವಿಘ್ನೇಶ್ವರ ಸಭಾಭವನದ ಮೇಲ್ವಿಚಾರಕ ಮಾಧವ ಶೆಟ್ಟಿಗಾರ್‌ ಉದ್ಘಾಟಿಸಿದರು. ಪ್ರಖ್ಯಾತ ವೈದ್ಯ ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಪರ್ಕಳದ ಅಧ್ಯಕ್ಷೆ ಆಶಾ, ನಗರಸಭಾ ಸದಸ್ಯರಾದ ಸುಮಿತ್ರ ನಾಯಕ್‌, ಸುಖೇಶ ಕುಂದರ್‌, ಗಣೇಶೋತ್ಸವ ಸಮಿತಿಯ ಸದಸ್ಯರಾದ ಸದಾನಂದ ಪರ್ಕಳ, ರಾಮದಾಸ ಹೆಗ್ಡೆ, ಗೋಪಾಲಕೃಷ್ಣ ಆಚಾರ್ಯ, ಸುವರ್ಣ ಮಹೋತ್ಸವ ಸಮಿತಿ ಕೋಶಾಧಿಕಾರಿ ಪ್ರಮೋದ ಕುಮಾರ್‌ ಉಪಸ್ಥಿತರಿದ್ದರು. ಜೆಸಿಐ ಸದಸ್ಯ ಜಸ್ವಂತ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಧಾಕರ  ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next